ಕಬಕ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ

0

ಕಬಕ: ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಡಿ.9ರಂದು ವಾರ್ಷಿಕ ಪ್ರತಿಭಾ ದಿನಾಚರಣೆ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಗೀತಾ, ಮುಖ್ಯ ಅತಿಥಿಗಳಾಗಿ ಕಬಕ ಗ್ರಾಮ ಪಂಚಾಯತ್‌ನ ಸದಸ್ಯ ಉಮ್ಮರ್ ಫಾರೂಕ್, ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಶಾಬಾ, ನಿವೃತ್ತ ಆಂಗ್ಲಭಾಷಾ ಉಪನ್ಯಾಸಕ ಚಂದ್ರಹಾಸ ರೈ.ಬಿ, ನಿವೃತ್ತ ಪ್ರಾಂಶುಪಾಲರಾದ ಪ್ರೇಮಲತಾ ಜೆ ರೈ, ಶಿಕ್ಷಣ ತಜ್ಞ ಶ್ರೀಶ ಭಟ್ ಬೈಪದವು, ಸದಸ್ಯರಾದ ಮಹಮ್ಮದ್ ಕಬಕ ಕಾರ್‍ಸ್, ಆದಂ ಕೆದುವಡ್ಕ, ಪದ್ಮಾವತಿ, ಗುಲಾಬಿ ದೇವಸ್ಯ, ರಶೀದ್ ಮುರ, ಶಾಲಾ ನಾಯಕಿ ದುರ್ಗಾಶ್ರೀ, ಉಪನಾಯಕಿ ಖತೀಜತುಲ್ ಝಕಿಯಾ, ಕಾರ್ಯದರ್ಶಿ ಕೌಶಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು. ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ವಾರ್ಷಿಕ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಾದ ರಮ್ಲತ್ ಮತ್ತು ತಶ್ಮಿಯಾ ಇವರಿಗೆ ಶಿವರಾಮ ಕಜೆ ಮತ್ತು ನಿವೃತ್ತ ಉಪನ್ಯಾಸಕ ವೆಂಕಟ್ರಮಣ ಭಟ್ .ವಿ ಇವರ ದತ್ತಿನಿಧಿ ಬಹುಮಾನವನ್ನು ನೀಡಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಮಹಮ್ಮದ್ ಕಬಕ ಕಾರ್‍ಸ್ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾದ ರಮ್ಲತ್ ಮತ್ತು ತಶ್ಮಿಯಾ ಇವರಿಗೆ ತಲಾ ರೂ.1000ದಂತೆ ನಗದು ಬಹುಮಾನ ನೀಡಿದರು.

ಜೀವಶಾಸ್ತ್ರ ಉಪನ್ಯಾಸಕಿ ವನಿತ.ಕೆ, ಜೀವಶಾಸ್ತ್ರ ವಿಷಯದಲ್ಲಿ ಮತ್ತು ಸಂಸ್ಥೆಯಿಂದ ವರ್ಗಾವಣೆಗೊಂಡ ವಿಜೇತಾ ವಿ ಬಿ ರಸಾಯನಶಾಸ್ತ್ರ ವಿಷಯದಲ್ಲಿ ಅತ್ಯಧಿಕ ಅಂಕಗಳಿಸಿದ ರಮ್ಲತ್ ಇವರಿಗೆ ನಗದು ಬಹುಮಾನವನ್ನು ನೀಡಿದರು. ಕನ್ನಡ ಉಪನ್ಯಾಸಕ ಶ್ರೀಧರ ರೈ .ಕೆ 2022-23ನೇ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 98 ಅಂಕವನ್ನು ಪಡೆದ ತಶ್ಮಿಯಾ ಮತ್ತು ತೇಜಾಕ್ಷಿಣಿ ಇವರಿಗೆ ನಗದು ಬಹುಮಾನವನ್ನು ನೀಡಿದರು. ಉಪನ್ಯಾಸಕರಾದ ಶೋಭಾ, ಕವನ, ಅಶ್ವಿತಾ, ಚಂದ್ರಿಕಾ, ಸ್ವಾತಿ, ಸುಶ್ಮಿತಾ, ಶ್ರೀಮತಿ ಉಷಾ, ಮಮತಾ ಸ್ಪರ್ಧೆಯ ವಿಜೇತರ ಪಟ್ಟಿಯನ್ನು ವಾಚಿಸಿದರು.

ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಟಿ ಸುಬ್ರಮಣ್ಯ ಭಟ್ ಇಂಡಿಯನ್ ಸ್ಟೀಲ್ ಮಾಲಕರು ಇವರನ್ನು ಸಂಸ್ಥೆಯ ವತಿಯಿಂದ ಶಾಲು, ಹಾರ, ಫಲಪುಷ್ಪ, ಸ್ಮರಣಿಕೆ ಪೇಟದೊಂದಿಗೆ ಸನ್ಮಾನಿಸಲಾಯಿತು. ಸಂಸ್ಥೆಗೆ ಸಹಕರಿಸಿದ ಎಲ್ಲಾ ದಾನಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಜೀವಶಾಸ್ತ್ರ ಉಪನ್ಯಾಸಕಿ ವನಿತಾ ಕೆ ಸ್ವಾಗತಿಸಿ, ಸಂಸ್ಥೆಯ ಪ್ರಾಂಶುಪಾಲ ಶ್ರೀಧರ ರೈ ಕೆ ವರದಿ ವಾಚಿಸಿದರು. ಭೌತಶಾಸ್ತ್ರ ಉಪನ್ಯಾಸಕ ಶ್ರೀನಿವಾಸ ಬಡೆಕ್ಕಿಲ್ಲಾಯ ಕಾರ್ಯಕ್ರಮ ನಿರ್ವಹಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿ ನಯನಕುಮಾರಿ ವಂದಿಸಿದರು. ಅಪರಾಹ್ನ ವಿದ್ಯಾರ್ಥಿಗಳಿಂದ ವೈವಿಧುಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

LEAVE A REPLY

Please enter your comment!
Please enter your name here