ಆಲಂಕಾರು ಸಿ.ಎ ಬ್ಯಾಂಕ್ ಸಭಾಭವನದಲ್ಲಿ ಅಣಬೆ ಬೇಸಾಯ ತರಬೇತಿ ಕಾರ್ಯಗಾರ

0

ಆಲಂಕಾರು: ತೋಟಗಾರಿಕೆ ಇಲಾಖೆ ಪುತ್ತೂರು, ಡೇ ಎನ್ ಎರ್ ಎಲ್ ಎಮ್ ಯೋಜನೆ, ತಾಲೂಕು ಪಂಚಾಯತ್ ಕಡಬ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮ ಪಂಚಾಯತ್ ಆಲಂಕಾರು, ‌ಲಕ್ಷ್ಮೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇವರ ಸಹಯೋಗದೊಂದಿಗೆ ಡಿ. 11ರಂದು ಸೋಮವಾರ ಬೆಳಿಗ್ಗೆ ಅಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ದೀನ‌ ದಯಾಳು ಸಭಾಭವನದಲ್ಲಿ ಅಣಬೆ ಬೇಸಾಯ ತರಬೇತಿ ಕಾರ್ಯಕ್ರಮ ನಡೆಯಿತು.

ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಧರ್ಮಪಾಲ ರಾವ್ ಕಜೆ ಉದ್ಘಾಟಿಸಿ ಮಾತನಾಡಿ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ನಾವು ಕೂಡ ಭಾರತೀ ಶಾಲೆ ಆಲಂಕಾರಿನಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಕಾರ್ಯಗಾರವನ್ನು ನಾವು ಆಯೋಜಿಸಿದ್ದೇವೆ. ಇದರಿಂದ ಅನೇಕ ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ. ಅಂತೆಯೇ ಅಣಬೆ ಬೇಸಾಯ ಕೂಡ ರೈತರಿಗೆ ಪರ್ಯಾಯ ಬೆಳೆಯನ್ನಾಗಿ ತಮ್ಮ ತಮ್ಮ ಕೃಷಿ ‌ಚಟುವಟಿಕೆಯಲ್ಲಿಅಳವಡಿಸಿಕೊಳ್ಳಬಹುದು ಹಾಗೂ ಇದರಿಂದ ಪ್ರಯೋಜನ ಪಡೆದುಕೊಳ್ಳಬಹುದೆಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಲಂಕಾರು ಗ್ರಾ.ಪಂ ಅಧ್ಯಕ್ಷರಾದ ಸುಶೀಲ ವಹಿಸಿದ್ದರು. ತೋಟಾಗಾರಿಕಾ ಹಿರಿಯ ಸಹಾಯಕ ನಿರ್ದೆಶಕರಾದ ರೇಖಾ ಅಣಬೆ ಬೇಸಾಯದ ಬಗ್ಗೆ ತಿಳಿಸಿ ಇಲಾಖೆಯಿಂದ ಸಿಗುವ ಸೌವಲತ್ತುಗಳ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಅಲಂಕಾರು ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ, ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಮನೋಹರ ಪ್ರಕಾಶ್, ಆಲಂಕಾರು ಗ್ರಾ.ಪಂ ಉಪಾಧ್ಯಕ್ಷ ರವಿ ಪೂಜಾರಿ.ಕೆ ಕಾರ್ಯದರ್ಶಿ ವಸಂತ ಶೆಟ್ಟಿ, ಲಕ್ಷ್ಮೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ದ ಅಧ್ಯಕ್ಷೆ ಅನಿತಾ, ತಾಲೂಕು ‌ಕಾರ್ಯಕ್ರಮ ವ್ಯವಸ್ಥಾಪಕರು ಡೇ-ಎನ್‌ ಆರ್ ಎಲ್ ಎಮ್ ತಾಲೂಕು ಪಂಚಾಯತ್ ಕಡಬದ ಜಗತ್, ಶಿಶು ಅಭಿವೃದ್ಧಿ ‌ಯೋಜನೆ ವಲಯ ಮೇಲ್ವಿಚಾರಕಿ ಪುಷ್ಪಾ ಉಪಸ್ಥಿತರಿದ್ದರು.

ತಾಂತ್ರಿಕ ಸಹಾಯ ನಿರ್ದೇಶಕರು ತೋಟಗಾರಿಕಾ ಇಲಾಖೆ ಶಿವಪ್ರಕಾಶ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ, ವಂದಿಸಿದರು.
ತುಷಾರ ಕರಿಯಂಗಳ ಅಣಬೆ ಕೃಷಿ ಮಾಡುವುದು ಮತ್ತು ಅಣಬೆಯ ಉತ್ಪನ್ನಗಳ ತಯಾರಿ ಪ್ರಾತ್ಯಕ್ಷತೆ ಮತ್ತು ಮಾಹಿತಿ ನೀಡುವುದರ ಮೂಲಕ ತರಬೇತಿ ಕಾರ್ಯಗಾರ ನಡೆಸಿದರು. ಸುವಿನಾ ವಲಯ ಮೇಲ್ವಿಚಾರಕಿ ಡೇ-ಎನ್ ಆರ್ ಎನ್ ಎಲ್ ಎಮ್ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು. ಈ ಸಂದರ್ಭದಲ್ಲಿ ಕಡಬ ತಾಲೂಕಿನ ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟದ ಕೃಷಿ ಸಖಿ, ಕೃಷಿ ಉದ್ಯೋಗ ಸಖಿ ಪಸು ಸಖಿ ಇತರ ಸಂಪನ್ಮೂಲ ವ್ಯಕ್ತಿಗಳು, ಅಂಗನವಾಡಿ‌ ಕಾರ್ಯಕರ್ತರು ಸಹಾಯಕಿಯರು ಸೇರಿದಂತೆ ಸ್ವ ಸಹಾಯ‌ ಗುಂಪಿನ ಸದಸ್ಯರು, ರೈತರು ಕಾರ್ಯಾಗಾರದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here