





ಮರ್ದಾಳ: ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರು ಗಾಯಗೊಂಡಿರುವ ಘಟನೆ ಐತ್ತೂರು ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿ ಡಿ.11ರಂದು ಬೆಳಿಗ್ಗೆ ನಡೆದಿದೆ.
ಐತ್ತೂರು ಗ್ರಾಮದ ನೆಲ್ಲಿಕಟ್ಟೆ ನಿವಾಸಿ ರಾಮಕೃಷ್ಣ ಅವರು ಚಲಾಯಿಸುತ್ತಿದ್ದ ಬೈಕ್(ಕೆಎ21, ಇಬಿ 3563)ಗೆ ಹಿಂಬದಿ ಮರ್ದಾಳ ಕಡೆಯಿಂದ ಚಂದ್ರಕಾಂತ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ (ಕೆಎ20 ಹೆಚ್‌ಎ 0755) ಡಿಕ್ಕಿಯಾಗಿದೆ. ಘಟನೆಯಲ್ಲಿ ರಾಮಕೃಷ್ಣರವರು ಡಾಮಾರು ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಹಿಂಬದಿಯಿಂದ ಗುದ್ದಿದ ಬೈಕ್‌ನ ಸವಾರ ಚಂದ್ರಕಾಂತ ಅವರಿಗೂ ಗಾಯವಾಗಿದೆ. ಘಟನೆ ಕುರಿತಂತೆ ಬೈಕ್ ಸವಾರ ರಾಮಕೃಷ್ಣ ಅವರ ನೆರೆ ಮನೆ ನಿವಾಸಿ ನಿತ್ಯಾನಂದ ಎಂಬವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಕಲಂ: 279.337 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
















