ಕುಸ್ತಿ: ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಮೂರು ಪದಕ

0

ಉಪ್ಪಿನಂಗಡಿ: ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಕುಸ್ತಿ ಪಂದ್ಯಾಟದಲ್ಲಿ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮೂರು ಪದಕಗಳನ್ನು ಪಡೆದಿದ್ದಾರೆ.


ಪುರುಷರ ವಿಭಾಗದ 92 ಕೆ.ಜಿ ವಿಭಾಗದಲ್ಲಿ ದೀಕ್ಷಿತ್ ಅಮೀನ್ ಕಂಚಿನ ಪದಕ, ಪುರುಷರ 86 ಕೆ.ಜಿ ವಿಭಾಗದಲ್ಲಿ ಮಹಮ್ಮದ್ ಹಮೀಮ್ ಕಂಚಿನ ಪದಕ ಹಾಗೂ ಮಹಿಳೆಯರ 65 ಕೆ.ಜಿ ವಿಭಾಗದಲ್ಲಿ ಮೇಘಶ್ರೀ ಐ.ಸಿ. ಕಂಚಿನ ಪದಕಗಳನ್ನು ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here