ಪುತ್ತೂರು: ಪುರುಷರಕಟ್ಟೆಯ ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ನ ವತಿಯಿಂದ ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರ ಸಹಯೋಗದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಡಿ.10ರಂದು ಶ್ರೀ ನಂದಿಕೇಶ್ವರ ಭಜನಾ ಮಂದಿರದಲ್ಲಿ ನಡೆಯಿತು.
ಶಿಬಿರವನ್ನು ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷೀಶ ತಂತ್ರಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ಅರುಣ್ ಜೈನ ಅವರು ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ಉದಯ ತಂತ್ರಿ, ಸುಧೀಂದ್ರ ತಂತ್ರಿ, ಕೆಮ್ಮಿಂಜೆ ಮತ್ತು ಚಂದ್ರ ಕೂಡಮಾರಾ ಉಪಸ್ಥಿತರಿದ್ದರು.
ಪ್ಯಾಕೇಜ್ ಅನಾವರಣ
ಕ್ಲಿನಿಕ್ ನ ವತಿಯಿಂದ ಜನರಿಗೆ ಅನುಕೂಲವಾಗು ನಿಟ್ಟಿನಲ್ಲಿ ಪ್ರಾರಂಭಿಸಲಾಗಿರುವ ಬೇಸಿಕ್ ಹೆಲ್ತ್ ಚೆಕಪ್ ಪ್ಯಾಕೇಜನ್ನು ಅನಾವರಣಗೊಳಿಸಲಾಯಿತು. ಇದರ ಮೂಲಕ ಕೇವಲ ರೂ.1200ಕ್ಕೆ ಕಿಡ್ನಿ, ಲಿವರ್, ಹಾರ್ಟ್, ಮಧುಮೇಹಕ್ಕೆ ಸಂಬಂಧಿಸಿದ ವಿವಿಧ ರಕ್ತ ಮತ್ತು ಮೂತ್ರ ಪರೀಕ್ಷೆ ಹಾಗೂ ಇಸಿಜಿ ಚಿಕಿತ್ಸೆಗಳನ್ನು ಪಡೆದುಕೊಳ್ಳಬಹುದು.
ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ಇಸಿಜಿ, ನೆಬುಲೈಸರ್ ತಪಾಸಣೆ ಹಾಗೂ ಆಯ್ದ ಔಷಧಿಗಳನ್ನು ವಿತರಿಸಲಾಯಿತು. ಸುಮಾರು 70 ಮಂದಿ ಶಿಬಿರದಲ್ಲಿ ಭಾಗವಹಿಸಿ, ಪ್ರಯೋಜನ ಪಡೆದುಕೊಂಡರು ಎಂದು ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ನ ಚೀಫ್ ಫಿಸಿಷಿಯನ್ ಹಾಗೂ ಆಯುರ್ವೇದ ತಜ್ಞ ಡಾ.ಸುಜಯ್ ತಂತ್ರಿ ಕೆಮ್ಮಿಂಜೆ ತಿಳಿಸಿದ್ದಾರೆ.