ಹೆಚ್ ಪಿ ಆರ್ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಫ್ರೆಶರ್ಸ್ ಡೇ ಆಚರಣೆ

0

ಪುತ್ತೂರು: ಹೆಚ್ ಪಿ ಆರ್ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜು ಪುತ್ತೂರು ಇಲ್ಲಿ ಡಿ.12ರಂದು ಪ್ರೆಶರ್ಸ್ ಡೇ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮರೀಲ್ ಸೆಕ್ರೆಡ್ ಹಾರ್ಟ್ ಚರ್ಚ್ ನ ಧರ್ಮಗುರು ಡೊನಾಲ್ಡ್ ನಿಲೇಶ್ ಕ್ರಾಸ್ತಾ, ಪ್ರಾಂಶುಪಾಲರಾದ ಇವ್ನೀಸ್ ಡಿಸೋಜಾ, ಉಪನ್ಯಾಸಕಿ ಜಲಜ ಎಸ್ ಎ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಸಜಿನಾ ಫಾತಿಮ ನಿರೂಪಿಸಿ, ಅಕ್ಷತಾ ಸ್ವಾಗತಿಸಿ, ಸಿಶ್ಮಿತಾ ವಂದಿಸಿದರು.

2023-24ನೇ ಸಾಲಿನ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮವು ಜರುಗಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಮೋಕ್ಷಿತಾ ಮತ್ತು ದೀಕ್ಷಿತಾ ನಿರೂಪಣೆ ಮಾಡಿದರು.

LEAVE A REPLY

Please enter your comment!
Please enter your name here