ಡಿ.15: ಗೋಳಿತ್ತಡಿಯಲ್ಲಿ ಶ್ರೀ ಜನನಿ ಗಾರ್ಮೆಂಟ್ಸ್ ಶುಭಾರಂಭ

0

ರಾಮಕುಂಜ: ರಾಮಕುಂಜ ಗ್ರಾಮದ ಗೋಳಿತ್ತಡಿ ಶಾರದಾನಗರದಲ್ಲಿರುವ ಜನನಿ ಎನ್‌ಕ್ಲೇವ್ ಕಾಂಪ್ಲೆಕ್ಸ್‌ನಲ್ಲಿ ಶ್ರೀ ಜನನಿ ಗಾರ್ಮೆಂಟ್ಸ್ ಡಿ.15ರಂದು ಬೆಳಿಗ್ಗೆ 10.30ಕ್ಕೆ ಶುಭಾರಂಭಗೊಳ್ಳಲಿದೆ.

ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕಾರ್ಯದರ್ಶಿ, ಜನನಿ ಎನ್‌ಕ್ಲೇವ್ ಕಾಂಪ್ಲೆಕ್ಸ್ ಮಾಲಕರೂ ಆದ ಸೇಸಪ್ಪ ರೈ ಕೆ.,ಅವರು ಉದ್ಘಾಟಿಸಲಿದ್ದು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಟಿ.ನಾರಾಯಣ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ನೂತನ ಗಾರ್ಮೆಂಟ್ಸ್‌ನಲ್ಲಿ ಚೂಡಿದಾರ್, ಸಾರಿ ಬ್ಲೌಸ್, ಶರ್ಟ್, ಹ್ಯಾಂಡ್, ಮಕ್ಕಳ ಶಾಲಾ ಕಾಲೇಜುಗಳ ಯೂನಿಫಾರಂ ಮತ್ತು ಎಲ್ಲಾ ರೀತಿಯ ಬಟ್ಟೆಗಳ ಹೊಲಿಗೆಗಳು ಹಾಗೂ ಮದುವೆಯ ಸಾರಿ ಮತ್ತು ಬ್ಲೌಸ್‌ಗಳ ಎಲ್ಲಾ ರೀತಿಯ ಎಂಬ್ರಾಯಿಡರಿ ಮಾಡಿಕೊಡಲಾಗುವುದು ಎಂದು ಮಾಲಕ ವೇದ ಸದಾನಂದ ಅಚಾರ್ಯ ಶಾರದಾನಗರ ಹಾಗೂ ಪ್ರೇಮಾ ರಾಮಕುಂಜ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here