ಉಪ್ಪಿನಂಗಡಿ: ಬಿಳಿಯೂರು ಕಿಂಡಿ ಅಣೆಕಟ್ಟಿಗೆ ಗೇಟ್

0

ಉಪ್ಪಿನಂಗಡಿ: ಪೆರ್ನೆ ಬಿಳಿಯೂರಿನ ನೇತ್ರಾವತಿ ನದಿಯಲ್ಲಿ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟಿನಲ್ಲಿ ಗುರುವಾರ ಗೇಟ್ ಅಳವಡಿಸಿ, ನೀರನ್ನು ನಿಲ್ಲಿಸುವ ಕಾರ್ಯ ನಡೆದಿದ್ದು, ಇದರಿಂದ ನದಿಯಲ್ಲಿ ನೀರು ಹೆಚ್ಚಳಗೊಳ್ಳುವ ಸಾಧ್ಯತೆಯಿದ್ದು, ನದಿ ಪಾತ್ರದ ಜನತೆ ಎಚ್ಚರವಹಿಸಬೇಕಾಗಿದೆ.
ಸಣ್ಣ ನೀರಾವರಿ ಇಲಾಖೆಯು ಸಾರ್ವಜನಿಕರಿಗೆ ಯಾವುದೇ ಮುನ್ಸೂಚನೆ ನೀಡದೇ ಕಾಮಗಾರಿ ಗುತ್ತಿಗೆ ಸಿಬ್ಬಂದಿಗೆ ಗೇಟ್ ಅಳವಡಿಸಲು ಸೂಚನೆ ನೀಡಿರುವುದು ಸರಿಯಾದ ನಡೆಯಲ್ಲ. ಈಗ ನದಿಯಲ್ಲಿ ನೀರಿನ ಹರಿವು ಕಡಿಮೆ ಇರುವುದರಿಂದ ಕೆಲವು ಕಡೆಗಳಲ್ಲಿ ಜನರು ನದಿ ದಾಟುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರಿಗೆ ಮಾಹಿತಿ ನೀಡದೇ ಗೇಟ್ ಅಳವಡಿಸಿದ್ದರಿಂದ ನದಿಗಿಳಿಯುವವರಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ಸಾರ್ವಜನಿಕರಿಗೆ ಮಾಹಿತಿ ನೀಡದೇ ಏಕಾಏಕಿ ಗೇಟ್ ಅಳವಡಿಸುವ ಕಾರ್ಯ ನಡೆಸಿರುವುದು ಸರಿಯಾದ ಕ್ರಮವಲ್ಲ ಎಂಬ ಆಕ್ಷೇಪ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಗೇಟ್ ಅಳವಡಿಸಿ ನದಿಯಲ್ಲಿ ನೀರನ್ನು ಶೇಖರಿಸುವುದರಿಂದ ನದಿ ಇಕ್ಕೆಡೆಗಳ ರೈತರ ಕೃಷಿ ಭೂಮಿಗೆ ಪ್ರಯೋಜನವಾಗಲಿದ್ದು, ಕೆರೆ- ಬಾವಿಗಳಲ್ಲಿ ಒರತೆಯೂ ಹೆಚ್ಚಾಗಳಲಿದೆ. ಇದರೊಂದಿಗೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿಗೆ ಪಿಂಡ ಪ್ರಧಾನಕ್ಕೆಂದು ಬರುವ ಭಕ್ತಾದಿಗಳ ರಕ್ಷಣೆಗೆ ನದಿ ತಟದಲ್ಲಿ ವಿಶೇಷ ಸಿಬ್ಬಂದಿಯನ್ನೂ ನೇಮಕ ಮಾಡುವ ಅನಿವಾರ್ಯತೆ ಮೂಡಿದೆ.

LEAVE A REPLY

Please enter your comment!
Please enter your name here