ಪುತ್ತೂರು: ಪುತ್ತೂರಿನ ನೃತ್ಯೋಪಾಸನಾ ಕಲಾ ಕೇಂದ್ರ ಇದರ ಕಲಾ ತಂಡದಿಂದ ಮಂಗಳೂರಿನ ನವಮಂಗಳೂರು ಬಂದರು ಪ್ರಾಧಿಕಾರ(ಎನ್‌ಎಂಪಿಎ) ವತಿಯಿಂದ ವಿಲಾಸಿ
ನೌಕೆಗಳಲ್ಲಿ ಆಗಮಿಸಿದ ವಿದೇಶಿ ಪ್ರವಾಸಿಗರಿಗಾಗಿ ಶುಕ್ರವಾರ ‘ನೃತ್ಯೋಹಂ’ ಶಾಸ್ತ್ರೀಯ ನೃತ್ಯಗಳ ವೈವಿಧ್ಯ ಏರ್ಪಟ್ಟಿತು.
ನೃತ್ಯಕೇಂದ್ರದ ಗುರು, ವಿದುಷಿ ಶಾಲಿನಿ ಆತ್ಮಭೂಷಣ್ ನಿರ್ದೇಶನದಲ್ಲಿ ನೃತ್ಯ ವೈವಿಧ್ಯ ಪ್ರಸ್ತುತಿಗೊಂಡಿತು. ಎನ್‌ಎಂಪಿಎ ಆಗಮನ ಲಾಂಜ್‌ನಲ್ಲಿ ನಡೆದ ಈ ಕಾರ್ಯಕ್ರಮವನ್ನು ವೀಕ್ಷಿಸಿದ ವಿದೇಶಿ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದರು. ದುಬೈನಿಂದ ಗೋವಾ, ಮುಂಬಯಿ ಮೂಲಕ ಮಂಗಳೂರಿಗೆ ಶುಕ್ರವಾರ ಆಗಮಿಸಿದ ನೋಟಿಕಾ ಹೆಸರಿನ ವಿಲಾಸಿ ಪ್ರವಾಸಿ ನೌಕೆ ಬೆಳಗ್ಗೆ ಎನ್‌ಎಂಪಿಎನಲ್ಲಿ ಲಂಗರು ಹಾಕಿತ್ತು. ಸಾಂಪ್ರದಾಯಿಕ ಸ್ವಾಗತ ಬಳಿಕ ನೌಕೆಯಲ್ಲಿದ್ದ ಸುಮಾರು 501 ವಿದೇಶಿ ಪ್ರವಾಸಿಗರಿಗೆ ಕರಾವಳಿ ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ನೃತ್ಯೋಹಂ ತಂಡ ಪ್ರದರ್ಶಿಸಿಸಿದರು. ಅಮೆರಿಕ, ಯುರೋಪ್ ಹಾಗೂ ಇತರೆ ದೇಶಗಳ ಪ್ರವಾಸಿಗರು ಈ ತಂಡದಲ್ಲಿದ್ದರು.ಮಂಗಳೂರಿನ ನಿಸರ್ಗ ಪಬ್ಲಿಸಿಟಿ ಸಂಸ್ಥೆ ಮುಖ್ಯಸ್ಥ ಮಂಜುನಾಥ್ ಉಪಸ್ಥಿತರಿದ್ದರು.