ಪುತ್ತೂರು: ಪುತ್ತೂರಿನ ಹೃದಯ ಭಾಗದ ಶ್ರೀ ಧರ್ಮಸ್ಥಳ ಕಟ್ಟಡದ 2ನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ Arya fire & safety ಸುರತ್ಕಲ್ ಮಂಗಳೂರು ಅವರಿಂದ coastal pragathi institute of technology ಪುತ್ತೂರು ಮತ್ತು coastal institute of technology & management ಮಂಗಳೂರು ಇದರ ಸಹಯೋಗದೊಂದಿಗೆ ಫೈರ್ & ಸೇಫ್ಟಿ ವಿಭಾಗದಿಂದ fire fighting(ಬೆಂಕಿ ಆರಿಸುವ), fire Extinguisher (ಅಗ್ನಿಶಾಮಕ ಅಣಕು) ಕಾರ್ಯಕ್ರಮ ಹಾಗೂ ತರಬೇತಿಯನ್ನು ಆಯೋಜಿಸಲಾಗಿತ್ತು.
ಮುಂದಿನ ದಿನಗಳಲ್ಲಿ fire & safety ವಿಭಾಗದ ಎಲ್ಲಾ ವಿದ್ಯಾರ್ಥಿಗಳಿಗೆ construction safety ತರಬೇತಿಯನ್ನು ನಡೆಸಿಕೊಡಲಾಗುವುದೆಂದು ಪ್ರಕಟಣೆಯಲ್ಲಿ coastal institute of technology & management ಮಂಗಳೂರು ಇದರ ಅಧ್ಯಕ್ಷ ನಿಕೋಲಸ್ ಗೋವಿಯಸ್ ತಿಳಿಸಿದ್ದಾರೆ.
Pragathi education foundation ಸ್ಥಾಪಕಾಧ್ಯಕ್ಷರು ಗೋಕುಲ್‌ನಾಥ್ ಪಿ. ವಿ. ಮಾತನಾಡುತ್ತಾ, ಪುತ್ತೂರಿನ ವಿದ್ಯಾರ್ಥಿಗಳು ಈ ಹಿಂದೆ Fire & safety Building Management, H.V.A.C Industrial Automation Diploma, ತರಗತಿಗಳಿಗೆ ಮಂಗಳೂರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇತ್ತು. ಆದರೆ ಈ ಶೈಕ್ಷಣಿಕೆ ವರ್ಷದಿಂದ ಆ ಕೊರತೆಯನ್ನು ನೀಗಿಸಿ ಹೆತ್ತವರಿಗೆ ಆಗುವ ಆರ್ಥಿಕ ಹೊರೆಯನ್ನು ತಗ್ಗಿಸಿರುವುದು ಅತ್ಯಂತ ತೃಪ್ತಿದಾಯಕವಾಗಿದೆ. ಅಲ್ಲದೆ ಈ ಕೋರ್ಸುಗಳನ್ನು ಬರುವ ಶೈಕ್ಷಣಿಕ ವರ್ಷದಿಂದ ಬೆಳ್ತಂಗಡಿಯಲ್ಲಿ ಸುದ್ದಿ ಸಮೂಹ ಸಂಸ್ಥೆಯ ಸಹಯೋಗದೊಂದಿಗೆ ಪ್ರಾರಂಭಗೊಳ್ಳಲಿದೆ ಎಂದರು.