ನೇರೆಂಕಿಗುತ್ತು ದೈವಗಳ ನೇಮೋತ್ಸವ-ಗೊನೆ ಮುಹೂರ್ತ

0

ರಾಮಕುಂಜ: ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿ ನೇರೆಂಕಿಗುತ್ತು ಇಲ್ಲಿ ಡಿ.25 ಮತ್ತು 26ರಂದು ಶ್ರೀ ದೈವಗಳ ನೇಮೋತ್ಸವ ಮತ್ತು ಶ್ರೀ ಬ್ರಹ್ಮಬೈದರ್ಕಳ ಜಾತ್ರೋತ್ಸವ ನಡೆಯಲಿದ್ದು ಇದರ ಗೊನೆ ಮುಹೂರ್ತ ಡಿ.18ರಂದು ಬೆಳಿಗ್ಗೆ ನೇರೆಂಕಿಗುತ್ತು ಮನೆಯಲ್ಲಿ ನಡೆಯಿತು.


ಕೊಡಮಣಿತ್ತಾಯ ದೈವದ ಪರಿಚಾರಕರಾದ ಶಿವಪ್ಪ ಗೌಡ ಅರಸಿನಮಕ್ಕಿ ಅವರು ಪ್ರಾರ್ಥನೆ ಮಾಡಿ ಗೊನೆ ಮುಹೂರ್ತ ನೆರವೇರಿಸಿದರು. ದೈವಸ್ಥಾನದ ಆಡಳಿತ ಸಮಿತಿ ಕಾರ್ಯದರ್ಶಿ ಕಿರಣ್ ಪಾದೆ, ಜೊತೆ ಕಾರ್ಯದರ್ಶಿ ಶ್ಯಾಮ್‌ಪ್ರಸಾದ್ ಕಾಯಾರ, ಸದಸ್ಯರಾದ ಬಿ.ಸಂಜೀವ ಪೂಜಾರಿ ಬಟ್ಲಡ್ಕ, ಕೋಟಿ ಚೆನ್ನಯ ದೈವದ ಪರಿಚಾರಕರಾದ ಚಂದ್ರಶೇಖರ ಕೆಲೆಂಬಿರಿ, ಚೆನ್ನಯ್ಯ ಶರವೂರು, ಗ್ರಾಮಸ್ಥರಾದ ರಮೇಶ್ ರೈ ರಾಮಾಜಾಲು, ಪುರುಷೋತ್ತಮ ಬಿ., ರುಕ್ಮಯ ಗೌಡ ನೇರೋಳ್ತಳಿಕೆ, ಸುಂದರ ಬಿ., ಸಂಜೀವ ಮುಳಿಮಜಲು, ಪದ್ಮಯ್ಯ ಪೂಜಾರಿ ಕದ್ರ, ಗುಣಪಾಲ ಎಂ., ಅಣ್ಣಿ ಪೂಜಾರಿ ಆರಾಟಿಗೆ, ಕೊರಗಪ್ಪ ಬಿ., ಮೇದಪ್ಪ ಬರೆಂಬೆಟ್ಟು, ಸಂಕಪ್ಪ ಪೂಜಾರಿ ಸಾಂತ್ಯ, ಜತ್ತಪ್ಪ ಗೌಡ, ವೆಂಕಪ್ಪ ಗೌಡ, ರೋಹಿತ್, ಧರ್ಣಪ್ಪ ಮೂಲ್ಯ, ಪುರುಷೋತ್ತಮ ಕದ್ರ, ಲಿಂಗಪ್ಪ ಗೌಡ ಪಾತ್ರಮಾಡಿ, ನಾಣ್ಯಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here