ಪುತ್ತೂರು: ಕಾವು ಬುಶ್ರಾ ವಿದ್ಯಾಸಂಸ್ಥೆ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದು ನವೀಕೃತ ಸಭಾಂಗಣ ಬುಶ್ರಾ ಆಡಿಟೋರಿಯಂ ನ ಉದ್ಘಾಟನೆಯೊಂದಿಗೆ “ಬುವಿ ಉತ್ಸವ -2023” ಡಿ.29 ಮತ್ತು 30ರಂದು ನಡೆಯಲಿದೆ ಎಂದು ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಕೃಷ್ಣ ಪ್ರಸಾದ್ ಕೆ ಎಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಡಿ.29ರಂದು ಬೆಳಿಗ್ಗೆ ರಾಮಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಸುನೀತಾ, ಪಾಪೆಮಜಲು ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಮೇಬಲ್ ಡಿ ಸೋಜ, ಬುಶ್ರಾ ಎಜ್ಯುಕೇಶನಲ್ ಟ್ರಸ್ಟ್ ಸದಸ್ಯೆ ಆಯಿಷತ್ ಶಮೀಮ ಉಪಸ್ಥಿತಿಯಲ್ಲಿ ಸಮಸ್ಥೆಯ ಅಧ್ಯಕ್ಷರೂ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸುಳ್ಯ ಕೆವಿಜಿ ಆಯುರ್ವೇದಿಕ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ.ಲೀಲಾಧರ ಡಿ ವಿ ಸಾಕ್ಷ್ಯ ಚಿತ್ರವನ್ನು ಬಿಡುಗಡೆಗೊಳಿಸಲಿದ್ದಾರೆ. ರೆ.ಫಾ. ವಿಜಯ್ ಹಾರ್ವಿನ್, ಅರುಣ್ ಕುಮಾರ್ ಪುತ್ತಿಲ, ನನ್ಯ ಅಚ್ಚುತ ಮೂಡತ್ತಾಯ, ಐಸಿ ಕೈಲಾಸ್ , ಸಂತೋಷ್ ಮಣಿಯಾಣಿ, ಜಬ್ಬಾರ್, ಅನೀಸ್ ಕೌಸರಿ, ನೂರುದ್ದೀನ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಚಿತ್ತರಂಜನ್ ಬೋಳಾರ, ಸಾಯಿಶೃತಿ ಪಿಲಿಕಜೆ, ಉಮೇಶ್ ಮಣಿಕ್ಕಾರ, ಅಜಿತ್ ಗೌಡ ಐರ್ವನಾಡು, ಡಾ.ಆಯಿಷತ್ ಮುನೀರಾ ಮತ್ತು ಮೀಫ್ ಸಂಸ್ಥೆಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಡಿ.30 ರಂದು ಸಂಜೆ ನಡೆಯುವ ಕಾರ್ಯಕ್ರಮವನ್ನು ವಿಧಾನಸಭೆ ಸಭಾಧ್ಯಕ್ಷ ಯು ಟಿ ಖಾದರ್ ಉದ್ಘಾಟಿಸಲಿದ್ದು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಂತ ಫಿಲೋಮಿನ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಆಂಟ್ಯನಿ ಪ್ರಕಾಶ್ ಮೊಂತೆರೊ, ಮಾಡನ್ನೂರು ನೂರುಲ್ ಹುದಾ ಕಾಲೇಜಿನ ಪ್ರಾಂಶುಪಾಲ ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ ದಿವ್ಯ ಸಂಧೇಶ ನೀಡಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ , ಕಾವು ಹೇಮನಾಥ ಶೆಟ್ಟಿ , ಹೀರಾ ಅಬ್ದುಲ್ ಖಾದರ್ ಹಾಜಿ, ಕಲಂದರ್ ಶಾಫಿ, ಬಾತೀಷ್ ಕನಕಮಜಲು, ಭಾಗವಹಿಸಲಿದ್ದಾರೆ. ಇದರೊಂದಿಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಪದ್ಮಶ್ರೀ ಹರೇಕಳ ಹಾಜಬ್ಬ, ಪದ್ಮಶ್ರೀ ಗಿರೀಶ್ ಭಾರಧ್ವಜ್ , ಪದ್ಮಶ್ರೀ ಮಹಾಲಿಂಗ ನಾಯ್ಕ, ಕ್ಯಾ. ಧನಂಜಯ ನಾಯ್ತೊಟ್ಟು,ಡಾ.ಆರ್ ಕೆ ನಾಯರ್, ಡಾ.ಯುಪಿ ಶಿವಾನಂದ್, ಜೀವನ್ ರಾಮ್ ಸುಳ್ಯ, ದೀಕ್ಷಿತ್ ಬದಿಕಾನ, ಕಡಮಜಲು ಸುಭಾಷ್ ರೈ ಅವರನ್ನು ಸನ್ಮಾನಿಸಲಾಗುವುದು ಎಂದು ಕೃಷ್ಣ ಪ್ರಸಾದ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಶಿಕ್ಷಕಿ ದೀಪಿಕಾ ಚಾಕೋಟೆ, ಸಂಸ್ಥೆಯ ನಿರ್ದೇಶಕ ಬದ್ರುದ್ದೀನ್ , ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ, ಹಿರಿಯ ಶಿಕ್ಷಕಿ ಹೇಮಲತಾ ಕಜೆಗದ್ದೆ,ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಹೀರಾ ಅಬ್ದುಲ್ ಖಾದರ್ ಹಾಜಿ,ಉಪಸ್ಥಿತರಿದ್ದರು.