ನಿಡ್ಪಳ್ಳಿ; ದ.ಕ.ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೂರಂಬೈಲು ಇದರ ಚೇತನ ಹಿರಿಯ ವಿದ್ಯಾರ್ಥಿ ಸಂಘದ ಕ್ರೀಡಾಕೂಟ ನ.23 ರಂದು ಶಾಲೆಯ ಮೈದಾನದಲ್ಲಿ ನಡೆಯಿತು.
ಶಿವಪ್ಪ ನಾಯ್ಕ ತೂಂಬಡ್ಕ ಕ್ರೀಡಾಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಪಾಣಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ ದೇವಸ್ಯ ,ಐತ್ತಪ್ಪ ನಾಯ್ಕ ತೂಂಬಡ್ಕ, ಸೂರ್ಯ ನಾರಾಯಣ ತೂಂಬಡ್ಕ, ಶಾಲಾ ಮುಖ್ಯ ಗುರು ಊರ್ಮಿಳಾ, ಎಸ್.ಡಿ.ಎಮ್.ಸಿ ಅಧ್ಯಕ್ಷ ಶ್ರೀನಿವಾಸ್ ಪ್ರಸಾದ್ ಸೂರ್ಯಂಬೈಲು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ ತೂಂಬಡ್ಕ ಮತ್ತು ಹಿರಿಯ ವಿದ್ಯಾರ್ಥಿಗಳು ಪೋಷಕರು ಕ್ರೀಡಾಕೂಟದಲ್ಲಿ ಭಾಗವಹಿಸಿದರು. ವಸಂತ ಕುರುಪ್ ಭರಣ್ಯ ಕಾರ್ಯಕ್ರಮ ನಿರೂಪಿಸಿ ಪ್ರದೀಪ್ ಪಾಣಾಜೆ ವಂದಿಸಿದರು.
