ಪುತ್ತೂರು: ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ತಾಂಬೂಲ ಪ್ರಶ್ನೆಯ ಚಿಂತನೆಯಲ್ಲಿ ಕಂಡು ಬಂದಂತೆ ಪ್ರತಿ ತಿಂಗಳಿಗೊಮ್ಮೆ ಶ್ರೀದೇವರಿಗೆ ಪವಮಾನಾಭಿಷೇಕ ಹಾಗೂ ಆ ದಿವಸ ಹಾಲು ಪಾಯಸ ಬುಧವಾರದಂದು ಶ್ರೀದೇವರಿಗೆ ಪೂಜೆ ನೆರವೇರಿತು.
ಈ ಪೂಜೆಯು ದೇವಸ್ಥಾನದ ಪವಿತ್ರಪಾಣಿ ವೆಂಕಟರಮಣ ನಕ್ಷತಿತ್ರಾಯ ಕೊಡ್ಲಾರು ಅವರ ಪುತ್ರರಾದ ಸುಬ್ರಹ್ಮಣ್ಯ ಕೊಡ್ಲಾರು ಹಾಗೂ ದೇವಸ್ಥಾನದ ಅರ್ಚಕರ ಮುಖಾಂತರ ದೇವಸ್ಥಾನದಲ್ಲಿ ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಪವಮಾನಾಭಿಷೇಕ ಹಾಗೂ ಹಾಲು ಪಾಯಸ ನಡೆಯುವ ಪೂಜೆಯು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನೋಣಾಲು ಜೈರಾಜ್ ಭಂಡಾರಿ ದಂಪತಿಗಳ ಸೇವಾರ್ಥವಾಗಿ ನಡೆಯಿತು. ಊರ ಭಗವದ್ ಭಕ್ತರು, ಹಾಗೂ ದೇವಸ್ಥಾನದ ಗೌರವ ಸಲಹೆಗಾರರಾದ ಚಂದ್ರಹಾಸ ರೈ ತುಂಬೆದಕೋಡಿ, ಬಾಲಚಂದ್ರ ರೈ ಕುರಿಯ ಗುತ್ತು , ಶ್ರೀ ವಿಷ್ಣು ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ತಿರುಮಲೇಶ್ವರ ಭಟ್, ಉಪಾಧ್ಯಕ್ಷರಾದ ದಿನೇಶ ಬೊಳಂತಿಮಾರು, ವಿಶ್ವನಾಥ ರೈ ಜೊತೆ ಕಾರ್ಯದರ್ಶಿ, ಶ್ರೀ ಕೃಷ್ಣ ಬೋಳಂತಿ ಮಾರು, ಸುಂದರ ಪೂಜಾರಿ, ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಮತ್ತು ಊರ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು . ಪೂಜೆಯ ಬಳಿಕ ಶ್ರೀ ದೇವರ ನೈವೇದ್ಯ ಹಾಗೂ ಅನ್ನ ಸಂತರ್ಪಣೆ ನಡೆಯಿತು