ಡಿ.25 :ಮೂಡಾಯೂರು ‘ಆರಿಗೊ ಪೆರ್ಮಂಡ ಗರೋಡಿ’ಯಲ್ಲಿ ಶ್ರೀಬೈದೇರುಗಳ ನೇಮ

0

ಕೆಮ್ಮಾಯಿ: ಚಿಕ್ಕಮುಡ್ನೂರು ಗ್ರಾಮದ ಮೂಡಾಯೂರು ಆರಿಗೋ ಪೆರ್ಮಂಡ ಗರೋಡಿಯಲ್ಲಿ ಶ್ರೀ ಬೈದೇರುಗಳ ನೇಮ ಡಿ.25ರಂದು ನಡೆಯಲಿದೆ.
ಡಿ.21ರಂದು ಗರಡಿಯಲ್ಲಿ ಹೋಮ, ಶುದ್ಧೀಕರಣಗಳು ನಡೆದಿದ್ದು, ಡಿ.23ರಂದು ರಾತ್ರಿ ಶ್ರೀ ವಿಷ್ಣುಮೂರ್ತಿ ದೇವರಿಗೆ ರಂಗಪೂಜೆ ಮತ್ತು ಮೂಡಾಯೂರು ಗುತ್ತಿನಿಂದ ಭಂಡಾರ ತೆಗೆದು ಬೈದೇರುಗಳ ತಂಬಿಲ, ಡಿ.24ರಂದು ರಾತ್ರಿ ಇಷ್ಟದೇವತೆ ಮತ್ತು ಏಳ್ನಾಡು ದೈವಗಳ ನೇಮ ನಡೆಯಲಿದೆ. ಡಿ.25ರಂದು ರಾತ್ರಿ ಬೈದೇರುಗಳ ನೇಮ ನಡೆಯಲಿದ್ದು ರಾತ್ರಿ 7.30ರಿಂದ ಸಾರ್ವಜನಿಕ ಅನ್ನಸಂತರ್ಪಣೆ, 8.50ಕ್ಕೆ ಗರಡಿ ಇಳಿಯುವುದು, ಮಾಣಿಬಾಲೆ ನೇಮ, ಕಡ್ಸಲೆ ಬಲಿ ವಗೈರೆ ನಡೆಯಲಿದೆ ಎಂದು ಡಾ| ಅಶೋಕ್ ಪಡಿವಾಳ್ ಮೂಡಾಯೂರುಗುತ್ತು ಮತ್ತು ಧನ್ಯಕುಮಾರ್ ರೈ ಬಿಳಿಯೂರುಗುತ್ತು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here