ಸ್ವಾರ್ಥ ಬದಿಗಿಟ್ಟು ಪರರ ಏಳಿಗೆಗಾಗಿ ದುಡಿಯೋಣ-ಕ್ರಿಸ್ಮಸ್ ಸಂದೇಶದಲ್ಲಿ ಪುತ್ತೂರು ಬಿಷಪ್ ಗೀವರ್ಗೀಸ್ ಮಾರ್ ಮಕಾರಿಯೋಸ್ ಕರೆ

0

ಪುತ್ತೂರು: 2023ನೇ ಸಾಲಿನ ಕ್ರಿಸ್ತ ಜಯಂತಿಯ ಆಚರಣೆಯ ಸಂದರ್ಭದಲ್ಲಿ ನಾವೆಲ್ಲರೂ ಇದ್ದೇವೆ. ಇಡೀ ಜಗತ್ತು ಅದರಲ್ಲಿ ವಿಶೇಷವಾಗಿ ಕ್ರೈಸ್ತ ಸಮುದಾಯ ಈ ಆಚರಣೆಯಲ್ಲಿ ಬಹಳ ಸಂಭ್ರಮದಿಂದ ತೊಡಗಿಸಿಕೊಂಡಿದೆ. ಸಮಸ್ತ ಜನತೆಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ ಎಂದು ಸ್ವಾರ್ಥವನ್ನು ಬದಿಗಿಟ್ಟು ಪರರಿಗಾಗಿ ತನ್ನನ್ನು ತಾನೇ
ಕ್ರಿಸ್ತಜಯಂತಿ ಸಂದರ್ಭದಲ್ಲಿ ಮೊಳಗಿದ ಸಂದೇಶ “ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ದೇವರೊಲಿದ ಮಾನವರಿಗೆ ಶಾಂತಿ ಸಮಾಧಾನ” ಪ್ರತಿಯೊಂದು ಕ್ರಿಸ್ಮಸ್ ಆಚರಣೆಯಲ್ಲೂ ಈ ಸಂದೇಶವನ್ನು ನಾವೆಲ್ಲರೂ ಪುನಃ ಪುನಃ ಕೇಳುತ್ತಾ ಇದ್ದೇವೆ ಅಥವಾ ಕೇಳುವಂತೆ ದೇವರು ಅನುವು ಮಾಡಿ ಕೊಡುತ್ತಾ ಇದ್ದಾರೆ. ದೇವರ ಇಚ್ಛೆಯಂತೆ ಮಾನವನ ಬದುಕು ಈ ಸಂದೇಶಗಳಿಗೆ ಅನುಗುಣವಾಗಿ ಸದಾ ಸಾಗಬೇಕು. ಮಾನವನ ಬದುಕಿನ ಕಟ್ಟಾ ಕಡೆಯ ಗುರಿ ಅಂದರೆ ದೇವರಿಗೆ ಮಹಿಮೆಯನ್ನು ಸಲ್ಲಿಸುವುದು ಹಾಗೂ ದೇವರೊಲಿದ ಮಾನವರಾಗಿ ಈ ಲೋಕದಲ್ಲಿ ಬದುಕುವುದು. ಇದು ಅಷ್ಟು ಸುಲಭ ಸಂಗತಿಯಲ್ಲ. ಆದರೆ ಸಾಧ್ಯ. ನಮ್ಮಿಂದ ಒಂದು ಷರತ್ತಿನ ಪಾಲನೆಯಾಗಬೇಕು, ಮನಸ್ಸು ಮಾಡಿದರೆ ಬಹಳ ಸುಲಭದ ಸಂಗತಿ ಯಾವುದೇ ಷರತ್ತುಗಳಿಲ್ಲದೆ, ತನ್ನನ್ನು ತಾನೇ ಬರಿದು ಮಾಡಿ ನಮಗಾಗಿ ಗೋದಲಿಯಲ್ಲಿ ಹುಟ್ಟಿ ನಮ್ಮೊಡನೆಯಿರುವ ದೇವರ ದರ್ಶನವನ್ನು ನಾವು ಪಡೆಯಬೇಕು. ಇದಕ್ಕೆ ನಾವು ಮಾಡಬೇಕಾದ ಒಂದು ಸಣ್ಣ ಪ್ರವರ್ತಿ ಗೋದಲಿಯಲ್ಲಿರುವ ಯೇಸುವನ್ನು ತಲೆಬಾಗಿ ನೋಡಬೇಕು, ದೇವರ ದರ್ಶನವನ್ನು ಪಡೆಯಬೇಕು. ಈ ರೀತಿ ನಮ್ಮ ತಲೆಯನ್ನು ಭಾಗಿ ದರ್ಶನ ಪಡೆದರೆ, ಆಗ ನಡೆಯುವುದು ಒಂದು ಅದ್ಬುತದ ಸಂಗತಿ. ಅದು ಬೇರೇನಲ್ಲ ದೇವರು ನಮ್ಮೊಡನೆ ಇರುವ ವಿಚಾರ. ತಲೆಯನ್ನು ಭಾಗಿ ದೇವರ ದರ್ಶನ ಪಡೆಯುವುದು ಅಂದರೆ ನಮ್ಮ ಸ್ವಾರ್ಥವನ್ನು ಮರೆತು ಅಂದರೆ ದುರಂಹಕಾರದಿಂದ ದೂರವಾಗಿ, ನಮೃತೆಯಿಂದ ದೇವರ ಹಿತವನ್ನು ಈಡೇರಿಸಿ ಬಾಳುವುದು. ಇಲ್ಲಿ ಎಲ್ಲರು ನಮ್ಮ ಗೋಚರದಲ್ಲಿರುತ್ತಾರೆ. ಅದೇ ರೀತಿ ಮಾನವೀಯತೆಯ ಮೆರುಗನ್ನು ಕೂಡ ಇಲ್ಲಿ ಕಾಣಲು ಸಾಧ್ಯ.
ಈ ಆಚರಣೆಯ ಸಂದರ್ಭದಲ್ಲಿ ನಮ್ಮ ಮುಂದಿರುವ ಗೋದಲಿಗಳು ನಮ್ಮ ಸಮಾಜ, ನಮ್ಮ ದೇವಾಲಯಗಳು, ನಮ್ಮ ಮನೆ ಗೆಳತಿ, ನಮ್ಮ ಹೃದಯಗಳೂ ಈ ಎಲ್ಲ ಕಡೆ ದೇವರ ಸಾನಿಧ್ಯ ಇದ್ದೆ ಇರುತ್ತದೆ. ಆದರೆ ಅದನ್ನು ಗುರುತಿಸಲು ನಮ್ಮ ಅಹಂಕಾರ, ಸ್ವಾರ್ಥ ಯಾವಾಗಲು ಅಡ್ಡಿಯಾಗಿ ಮೂಡುತ್ತಿದೆ. ತಲೆ ಬಾಗಿ ಒಳಗೆ ನೋಡೋಣ. ಬಾಹ್ಯದಿಂದ ಅಂತರ್ಯಡೆಗೆ ಸಾಗೋಣ.
ಪ್ರೀತಿಯ ಸಹೋದರ ಸಹೋದರಿಯರೆ, ಈ ಕ್ರಿಸ್ತ ಜಯಂತಿ ಆಚರಣೆಯ ಸಂದರ್ಭದಲ್ಲಿ ನಮ್ಮ ಸ್ವಾರ್ಥವನ್ನು ಬದಿಗಿಟ್ಟು ಪರರಿಗಾಗಿ ತನ್ನನ್ನು ತಾನೇ ಬರಿದು ಮಾಡಿದ ರೀತಿಯಲ್ಲಿ ಇತರರ ಬದುಕಿಗೆ ನಮ್ಮಿಂದ ಕೈಲಾದ ರೀತಿಯಲ್ಲಿ ಸ್ಪಂದಿಸೋಣ. ಇದೇ ನೈಜವಾದ ಕ್ರಿಸ್ಮಸ್ ಆಚರಣೆಯಾಗಿದೆ ‌

LEAVE A REPLY

Please enter your comment!
Please enter your name here