





ಪುಣಚ : ಅಯೋಧ್ಯೆ ಶ್ರೀರಾಮ ಜನ್ಮ ಭೂಮಿಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆ ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ಮೆರವಣಿಗೆಯೊಂದಿಗೆ ಡಿ.24ರಂದು ಆಗಮನವಾಯಿತು.



ಕಲ್ಲಡ್ಕ ಶ್ರೀರಾಮ ಮಂದಿರದಿಂದ ವಿತರಿಸಿದ ಮಂತ್ರಾಕ್ಷತೆಯನ್ನು ವಾಹನದಲ್ಲಿ ಮೆರವಣಿಗೆಯ ಮೂಲಕ ತಂದು ಪುಣಚ ಪರಿಯಾಲ್ತಡ್ಕ ಬಳಿಯಿಂದ ಪುಷ್ಪಾರ್ಚನೆಗೈದು, ಪೂರ್ಣ ಕುಂಭ ಸ್ವಾಗತ ನೀಡಿ ಕಲಶ, ಕುಣಿತ ಭಜನೆ, ಚೆಂಡೆವಾದನದ ಭವ್ಯ ಮೆರವಣಿಗೆಯ ಮೂಲಕ ಪುಣಚ ಮಹಿಷಮರ್ದಿನಿ ದೇವಸ್ಥಾನಕ್ಕೆ ತರಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಬನ್ನಿಂತಾಯರು ಪೂಜೆ ನೆರವೇರಿಸಿದರು. ದೇವಸ್ಥಾನದ ಆಡಳಿತ ಸಮಿತಿ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಊರಿನ ಗಣ್ಯರು ಸೇರಿದಂತೆ ಗ್ರಾಮದ ಹಲವಾರು ಭಕ್ತಾದಿಗಳು ಪಾಲ್ಗೊಂಡರು.
















