ರಾಮಕುಂಜ: ಹಳೆನೇರೆಂಕಿ ಗ್ರಾಮದ ನೇರೆಂಕಿಗುತ್ತು ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಡಿ.25 ಮತ್ತು 26ರಂದು ನಡೆಯಲಿರುವ ಶ್ರೀ ದೈವಗಳ ನೇಮೋತ್ಸವ ಮತ್ತು ಶ್ರೀ ಬ್ರಹ್ಮಬೈದರ್ಕಳ ಜಾತ್ರೋತ್ಸವದ ಅಂಗವಾಗಿ ಡಿ.25ರಂದು ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು.
ಬೆಳಿಗ್ಗೆ ದೈವಸ್ಥಾನದಲ್ಲಿ ಸ್ವಸ್ತಿ ಪುಣ್ಯಾಹವಾಚನ, ಗಣಪತಿಹೋಮ, ದುರ್ಗಾಹೋಮ, ಪಂಚವಿಂಶತಿ ಕಲಶ, ತಂಬಿಲ ನಡೆಯಿತು. ಗ್ರಾಮಸ್ಥರು ಅಡಿಕೆ, ತೆಂಗು, ಸಿಯಾಳ, ಬಾಳೆಕಾಯಿ ಸೇರಿದಂತೆ ತಾವು ಬೆಳೆದ ವಿವಿಧ ಫಲವಸ್ತುಗಳನ್ನು ಹಳೆನೇರೆಂಕಿ ಪೇಟೆಯಿಂದ ಚೆಂಡೆ, ಬ್ಯಾಂಡ್, ವಾದ್ಯಗಳೊಂದಿಗೆ ದೈವಸ್ಥಾನಕ್ಕೆ ತಂದು ಸಮರ್ಪಿಸಿದರು. ದೈವಸ್ಥಾನದಲ್ಲಿ ಹೊರೆಕಾಣಿಕೆಗೆ ಅರ್ಚಕರು ಪೂಜೆ ಸಲ್ಲಿಸಿದರು.
ದೈವಸ್ಥಾನದ ಆಡಳಿತ ಮೊಕ್ತೇಸರರೂ ಆದ, ಪುತ್ತೂರು ಮಾಸ್ಟರ್ ಪ್ಲಾನರಿಯ ಎಸ್.ಕೆ.ಆನಂದ, ರೇಖಾ ಆನಂದ್, ಅರ್ಜುನ್ ಎಸ್.ಕೆ., ವೈಷ್ಣವಿ ಅರ್ಜುನ್, ಅಕ್ಷಯ್ ಎಸ್.ಕೆ., ಗೌರಿ ಅಕ್ಷಯ್, ಆಕಾಶ್ ಎಸ್.ಕೆ., ನಿಶಾಆಕಾಶ್, ಆಡಳಿತ ಸಮಿತಿ ಅಧ್ಯಕ್ಷರಾದ ನಾರಾಯಣ ಭಟ್ ಟಿ., ಉಪಾಧ್ಯಕ್ಷ ಪ್ರಸನ್ನ ನಿಸರ್ಗ, ಕಾರ್ಯದರ್ಶಿ ಕಿರಣ್ ಪಾದರೆ, ಜೊತೆ ಕಾರ್ಯದರ್ಶಿ ಶ್ಯಾಮ್ ಪ್ರಸಾದ್ ಕಾಯಾರ, ಸದಸ್ಯರಾದ ಎಂ.ಹರಿನಾರಾಯಣ ಆಚಾರ್, ಶೇಖರ ಗೌಡ ಕಟ್ಟಪುಣಿ, ಡಾ.ಜಿನಚಂದ್ರ ಕಾರ್ಕಳ,
ಬಿ.ಸಂಜೀವ ಪೂಜಾರಿ ಬಟ್ಲಡ್ಕ, ಮಹಾಬಲ ರೈ ರಾಮಜಾಲು, ಮಾಸ್ಟರ್ ಪ್ಲಾನರಿಯ ಸುದರ್ಶನ ನಾಯಕ್, ನಂದಕಿಶೋರ್, ನವೀನ್ ನಾಯಕ್, ಅರುಣಾ ನವೀನ್, ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿಶೇಖರ ಗೌಡ, ರಾಮಕುಂಜ ಗ್ರಾ.ಪಂ.ಮಾಜಿ ಅಧ್ಯಕ್ಷೆ ಮಾಲತಿ ಕದ್ರ, ಗ್ರಾಮಸ್ಥರಾದ ಜನಾರ್ದನ ಕದ್ರ, ಪುರುಷೋತ್ತಮ ಬರೆಂಬೆಟ್ಟು, ಕೊರಗಪ್ಪ ಎರಟಾಡಿ, ವೀರೇಂದ್ರ ಪಾಲೆತ್ತಡ್ಡ, ವಿಶ್ವನಾಥ ಶೆಟ್ಟಿ ಎರಟಾಡಿ, ರಮೇಶ್ ರೈ ರಾಮಜಾಲು, ಪ್ರವೀಣ್ ಹೊಸಮಾರಡ್ಡ, ಚರಣ್ ಪಾಲೆತ್ತಡ್ಡ, ಆನಂದ ಎತ್ತರಪಡ್ಪು, ಶಿವಪ್ಪ ಅರಸಿನಮಕ್ಕಿ ಸೇರಿದಂತೆ ಹಲವು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.