ವಿಶ್ವಬ್ರಾಹ್ಮಣ ಸೇವಾ ಸಂಘ, ವಿಶ್ವಕರ್ಮ ಯುವ ಸಮಾಜದ ವಾರ್ಷಿಕ ಮಹಾಸಭೆ-ಯುವ ಪ್ರತಿಭೆಗಳಿಗೆ ಗೌರವ, ಕುಕ್ಕಟ್ಟೆ ದೇವಸ್ಥಾನಕ್ಕೆ ಮೈಕ್ ಕೊಡುಗೆ

0

ಮೌಲ್ಯಾಧಾರಿತ ಶಿಕ್ಷಣ ಸಮಾಜಕ್ಕೆ ಅಗತ್ಯ – ಮುರಳಿಧರ ಆಚಾರ್ಯ

ಪುತ್ತೂರು: ವಿಶ್ವಬ್ರಾಹ್ಮಣ ಸೇವಾ ಸಂಘ ಬೊಳುವಾರು ಪುತ್ತೂರು, ವಿಶ್ವಕರ್ಮ ಯುವ ಸಮಾಜ ಬೊಳುವಾರು ಪುತ್ತೂರು ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಡಿ.24ರಂದು ಬೊಳುವಾರು ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು. ಸಮಾರಂಭದಲ್ಲಿ ಯುವ ಪ್ರತಿಭೆಗಳಿಬ್ಬರನ್ನು ಗೌರವಿಸಲಾಯಿತು.


ಬಂಟ್ವಾಳ ಎಸ್.ವಿ.ಎಸ್ ಪ್ರೌಢಶಾಲೆಯ ಸಂಸ್ಕೃತ ಅಧ್ಯಾಪಕ ಮುರಳಿಧರ ಆಚಾರ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಪ್ರಸ್ತುತ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣ ಇವತ್ತಿನ ಪೀಳಿಗೆಗೆ ಅಗತ್ಯ. ಇದರ ಜೊತೆಗ ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ಮೈಗೋಡಿಸಿಕೊಳ್ಳುವಂತೆ ಅವರು ಹೇಳಿದರು. ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಪ್ರಕಾಶ್ ಆಚಾರ್ಯ ಬೆಳ್ಳಿಪ್ಪಾಡಿ ಶುಭ ಹಾರೈಸಿದರು. ವಿಶ್ವ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಶ್ರೀಧರ್ ಆಚಾರ್ಯ ಕೊಕ್ಕಡ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಜಗದೀಶ್ ಎಸ್ ಮಾಮೇಶ್ವರ ವಿಶ್ವಕರ್ಮ ಯುವ ಸಮಾಜದ ವರದಿ ವಾಚಿಸಿದರು. ಆನಂದ್ ಆಚಾರ್ಯ ಅಜ್ಜಿನಡ್ಕ ವಿಶ್ವಬ್ರಾಹ್ಮಣ ಸೇವಾ ಸಂಘದ ವರದಿ ವಾಚಿಸಿದರು. ವಸಂತ್ ಅಚಾರ್ಯ ಬೊಳುವಾರು ಅವರು ವಿಶ್ವಕರ್ಮ ಯುವ ಸಮಾಜದ ಲೆಕ್ಕಪತ್ರ ಮಂಡಿಸಿದರು. ಉಮೇಶ್ ಎಮ್ ಕರ್ಮಲ ಅವರು ವಿಶ್ವ ಬ್ರಾಹ್ಮಣ ಸೇವಾ ಸಂಘದ ಲೆಕ್ಕಪತ್ರ ಮಂಡಿಸಿದರು. ರಮೇಶ್ ಆಚಾರ್ಯ ಅವರು ನೂತನ ಸದಸ್ಯರನ್ನು ಗುರುತಿಸಿ ಪರಿಚಯಿಸಿದರು. ರಮೇಶ್ ಅಜ್ಜಿನಡ್ಕ ಅವರು ಆಡಳಿತ ಮಂಡಳಿ ಸದಸ್ಯರ ಪ್ರಕಟಣೆ ತಿಳಿಸಿದರು.


ಗೌರವ:
ಯುವ ಪ್ರತಿಭೆಗಳಾದ ಟಿಕ್ ಟಾಕ್ ಸ್ಟಾರ್, ಚಲನಚಿತ್ರ ನಟ ಅವಾರ್ಡ್ ವಿಜೇತ ಧನರಾಜ್ ಆಚಾರ್ಯ ಮಾಮೇಶ್ವರ, ಯಕ್ಷಗಾನ ಉದಯೋನ್ಮಕ ಕಲಾವಿದೆ ಶ್ರೇಯಾ ಆಚಾರ್ಯ ಆಲಂಕಾರುರವರನ್ನು ಗೌರವಿಸಲಾಯಿತು. ಕಿಶನ್ ಬಿ ವಿ ಮತ್ತು ಪ್ರಶಾಂತ್ ಆಚಾರ್ಯ ಮುಕ್ವೆ ಸನ್ಮಾನಿತರನ್ನು ಪರಿಚಯಿಸಿದರು. ಇದೇ ಸಂದರ್ಭ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಸುರೇಶ್ ಆಚಾರ್ಯ ಕಾಣಿಯೂರು ಬಹುಮಾನ ವಿತರಣೆ ಕಾರ್ಯಕ್ರಮ ನಿರ್ವಹಿಸಿದರು. ಪ್ರಕಾಶ್ ಆಚಾರ್ಯ ಬಹುಮಾನದ ಪ್ರಾಯೋಜಕರಾಗಿದ್ದರು. ವಿವಾಹ ವಾರ್ಷಿಕೋತ್ಸವ ಆಚರಿಸುತ್ತಿರುವ ಕಿಶನ್ ಬಿ.ವಿ ದಂಪತಿ, ವಿಶ್ವ ಕರ್ಮ ಯುವ ಸಮಾಜದ ಅಧ್ಯಕ್ಷ ಪ್ರಕಾಶ್ ಅಚಾರ್ಯ ದಂಪತಿಯನ್ನು ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ಜೈರಾಜ್ ಭಂಡಾರಿ ಗೌರವಿಸಿದರು.


ಮೈಕ್ ಸೆಟ್ ಕೊಡುಗೆ:
ವಿಶ್ವಕರ್ಮ ಯುವ ಸಮಾಜದಿಂದ ಕುಕ್ಕಟ್ಟೆ ಕಾಳಿಕಾ ಪರಮೇಶ್ವರಿ ದೇವಸ್ಥಾನಕ್ಕೆ ಮೈಕ್ ಸೆಟ್ ಕೊಡುಗೆ ನೀಡಲಾಯಿತು. ಕೃಷ್ಣ ಆಚಾರ್ಯ ಕೆ ಅತಿಥಿಗಳನ್ನು ಗೌರವಿಸಿದರು. ಭುಜಂಗ ಆಚಾರ್ಯ ಎಸ್ ಅತಿಥಿಗಳನ್ನು ಪರಿಚಯಿಸಿದರು. ಶ್ರೀಧರ ಆಚಾರ್ಯ ಪಡೀಲ್ ಪ್ರಾರ್ಥಿಸಿದರು. ಜಗದೀಶ್ ಎಸ್ ಎನ್ ಸ್ವಾಗತಿಸಿದರು. ಗಂಗಾಧರ ಆಚಾರ್ಯ ಎಮ್ ವಂದಿಸಿದರು. ಸಭೆಯಲ್ಲಿ ರೋಟರಿ ಕ್ಲಬ್‌ನ ಗಣೇಶ್ ರೈ, ಪರಮೇಶ್ವರ ಗೌಡ ಉಪಸ್ಥಿತರಿದ್ದರು. ಯುಆರ್‌ಆರ್ ರಾಹುಲ್ ಜಿಲ್ಲಾ ಕಾರ್ಯದರ್ಶಿ ಶ್ರೇಯಶ್, ಶ್ರೀ ಗುರು ಸೇವಾ ಪರಿಷತ್ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ಕೊಕ್ಕಡ, ದ.ಕ.ಜಿಲ್ಲಾ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು, ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಹರೀಶ್ ಆಚಾರ್ಯ ಕೃಷ್ಣನಗರ, ವಿಶ್ವಕರ್ಮ ಮಹಿಳಾ ಸಂಘದ ಅಧ್ಯಕ್ಷೆ ಶುಭ ಪುರುಷೋತ್ತಮ ಆಚಾರ್ಯ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಮನೋರಂಜನಾ ಕಾರ್ಯಕ್ರಮವು ನಡೆಯಿತು. ಶ್ರೀನಿವಾಸ ಪಡೀಲ್ ಅವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here