ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆಯಲ್ಲಿ ವಿಶ್ವೇಶ್ವರ ಭಟ್ ಬಂಗಾರಡ್ಕ
ಪುತ್ತೂರು: ಭಾರತೀಯ ಜನತಾ ಪಾರ್ಟಿಯು ಇಂದು ಉಚ್ಚ್ರಾಯ ಸ್ಥಿತಿಯಲ್ಲಿದೆ ಎಂದರೆ ಅಂದು ಅಟಲ್ ಬಿಹಾರಿ ವಾಜಪೇಯಿ ಪ್ರಯತ್ನಗಳೇ ಕಾರಣ. ರಾಜಕೀಯ ಕ್ಷಿತಿಜದಲ್ಲಿ ಅಟಲ್ ಅವರು ಅಜಾತಶತ್ರುವಾಗಿಯೇ ಉಳಿದರು. ಅಂಥ ಮಹಾನ್ ನಾಯಕ ಬದುಕಿದ್ದರೆ ಇಂದಿಗೆ 99 ವರ್ಷ ತುಂಬುತ್ತಿತ್ತು ಎಂದು ಬಿಜೆಪಿ ಹಿರಿಯ ನಾಯಕ ವಿಶ್ವೇಶ್ವರ ಭಟ್ ಬಂಗಾರಡ್ಕ ಅವರು ಹೇಳಿದರು.
ರಾಷ್ಟ್ರ ಕಂಡ ಅಪರೂಪದ ರಾಜಕಾರಣಿ, ಅಜಾತಶತ್ರು ಪ್ರಧಾನಿ ಎಂದೇ ಖ್ಯಾತರಾಗಿದ್ದ ದಿವಂಗತ ಅಟಲ್ ಬಿಹಾರಿ ಅವರ 99ನೇ ಜನ್ಮದಿನ ಅಂಗವಾಗಿ ಪುತ್ತೂರು ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಾಜಪೇಯಿ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಜಾಗತಿಕ ವಿಶ್ವ ಸಂಸ್ಥೆಯಲ್ಲಿ ಎಲ್ಲರ ಗಮನ ಸೆಳೆದಿದ್ದರು. ಪ್ರಧಾನ ಮಂತ್ರಿಯಾದ ಬಳಿಕವೂ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಸಹಮತ ಸೌಹಾರ್ದತೆಯನ್ನು ತಂದರು. ಪ್ರಭಾವಿ ಮಾತುಗಾರಾಗಿದ್ದ ಅವರು ಆಗಿನ ಕಾಲದ ಅತ್ಯಂತ ಶ್ರೇಷ್ಠ ಮಾತನಾಡಬಲ್ಲ ನಾಯಕರಾಗಿದ್ದರು. ಇವತ್ತಿನ ಕಾಲದಲ್ಲಿ ಅವರು ಹಾಕಿಕೊಟ್ಟ ದಾರಿಯಲ್ಲಿ ನಾವು ಮುಂದುವರಿಯಬೇಕೆಂದರು. ಮಾಜಿ ಶಾಸಕ ಸಂಜೀವ ಮಠಂದೂರು ವಾಜಪೇಯಿ ಅವರ ಜೀವನ ಚರಿತ್ರೆಯನ್ನು ತಿಳಿಸಿದರು. ಬಿಜೆಪಿ ಜಿಲ್ಲಾ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಎಸ್.ಅಪ್ಪಯ್ಯ ಮಣಿಯಾಣಿ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಯುವರಾಜ್ ಪೆರಿಯತ್ತೊಡಿ, ವಿದ್ಯಾ ಆರ್ ಗೌರಿ, ಗೌರಿ ಬನ್ನೂರು, ಗೋವರ್ಧನ್ ಕುಮೆರಡ್ಕ, ಹರಿಪ್ರಸಾದ್ ಯಾದವ್, ಹರೀಶ್ ಆಚಾರ್ಯ,ನಗರ ಬಿಜೆಪಿ ಕಾರ್ಯದರ್ಶಿ ಶಿವಕುಮಾರ್, ರಾಧಕೃಷ್ಣ ನಂದಿಲ, ಅಶೋಕ್ ಹಾರಾಡಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.