ಚಿಕ್ಕಮುಡ್ನೂರು ಮೂಡಾಯೂರು ಆರಿಗೋ ಬೈದೇರುಗಳ ನೇಮೋತ್ಸವ, ಅನ್ನಸಂತರ್ಪಣೆ

0

ಕೆಮ್ಮಾಯಿ: ಚಿಕ್ಕಮುಡ್ನೂರು ಗ್ರಾಮದ ಮೂಡಾಯೂರು ಆರಿಗೊ ಪೆರ್ಮಂಡ ಗರೋಡಿಯಲ್ಲಿ ಮೂಡಾಯೂರುಗುತ್ತು ಕುಟುಂಬದವರ ನೇತೃತ್ವದಲ್ಲಿ ಶ್ರೀ ಬೈದೇರುಗಳ ನೇಮ ಡಿ.21ರಿಂದ 25ರವರೆಗೆ ನಡೆಯಿತು.

ಡಿ.21ರಂದು ಪೆರ್ಮಂಡ ಗರೋಡಿಯಲ್ಲಿ ಹೋಮ, ಸ್ಥಳ ಶುದ್ಧೀಕರಣ, ಡಿ.23ರಂದು ಶ್ರೀಮಹಾ ವಿಷ್ಣುಮೂರ್ತಿ ದೇವರಿಗೆ ರಂಗಪೂಜೆ ಮತ್ತು ಮೂಡಾಯೂರು ಗುತ್ತಿನಿಂದ ದೈವದ ಭಂಡಾರ ತೆಗೆದು ಬಳಿಕ ಬೈದೇರುಗಳ ತಂಬಿಲ ಸೇವೆ ನಡೆಯಿತು.

ಡಿ.24ರಂದು ಇಷ್ಟ ದೇವತೆ ಮತ್ತು ಎಳ್ನಾಡು ದೈವಗಳ ನೇಮ, ಡಿ.25ರಂದು ಶ್ರೀಬೈದೇರುಗಳ ನೇಮ, ಗರಡಿ ಇಳಿದ ಬಳಿಕ ಮಾಣಿಬಾಲೆ ನೇಮ, ಕಡ್ಸಲೆ ಬಲಿ ಹಾಗೂ ಇತರ ಕಾರ್ಯಕ್ರಮಗಳು ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಆಕರ್ಷಕ ಸಿಡಿಮದ್ದು ಪ್ರದರ್ಶನ ನಡೆಯಿತು.

ಗಾನಸಿರಿ ಪುತ್ತೂರುರವರಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು. ಮೂಡಾಯೂರು ಗುತ್ತು ಕುಟುಂಬದ ಬಿ. ಧನ್ಯ ಕುಮಾರ್ ರೈ ಬಿಳಿಯೂರುಗುತ್ತು ಹಾಗೂ ಡಾ. ಎಂ. ಅಶೋಕ್ ಪಡಿವಾಳ್ ಮೂಡಾಯೂರು ಗುತ್ತು, ನರೇಂದ್ರ ಪಡಿವಾಳ್ ಮೂಡಾಯೂರುಗುತ್ತು, ಹರ್ಷೇಂದ್ರ ಪಡಿವಾಳ್ ಸೇರಿದಂತೆ ಮೂಡಾಯೂರುಗುತ್ತು ಕುಟುಂಬಸ್ಥರು, ಗಣ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು. ಕೆಮ್ಮಾಯಿ ಶ್ರೀ ವಿಷ್ಣು ಯುವಕ ಮಂಡಲದ ಪ್ರಾಯೋಜಕತ್ವದಲ್ಲಿ ಕೆಮ್ಮಾಯಿ ಜಂಕ್ಷನ್‌ನಿಂದ ಮೂಡಾಯೂರು ಆರಿಗೊ ಗರಡಿಯವರೆಗೆ ರಸ್ತೆಯುದ್ದಕ್ಕೆ ಲೈಟಿಂಗ್ಸ್ ವ್ಯವಸ್ಥೆ ಮಾಡಲಾಗಿತ್ತು. ಸ್ಥಳೀಯರು ಸಹಕರಿಸಿದರು.

ಗರೋಡಿಯಲ್ಲಿ ಪೂರ್ವ ಸಂಪ್ರದಾಯದಂತೆ ಪ್ರತೀ ಮಂಗಳವಾರ ಬೈದೇರುಗಳಿಗೆ ಹಾಲು, ಅಕ್ಕಿ ಅರ್ಪಿಸುವ ಕಾರ್ಯಕ್ರಮ ನಡೆಯುತ್ತಿದೆ.

LEAVE A REPLY

Please enter your comment!
Please enter your name here