ಕುರಿಯ ಹಿ.ಪ್ರಾ.ಶಾಲೆ ನೂತನ ವಿವೇಕ ಕೊಠಡಿ ಉದ್ಘಾಟನೆ – ಗ್ರಾಮೀಣ ವಿದ್ಯಾರ್ಥಿಗಳೇ ಹೆಚ್ಚು ಪ್ರತಿಭಾವಂತರು: ಅಶೋಕ್ ರೈ

0

ಪುತ್ತೂರು: ಕುರಿಯ ಸರಕಾರಿ ಹಿ.ಪ್ರಾ.ಶಾಲೆ ಇಲ್ಲಿ‌ನಿರ್ಮಾಣವಾದ ನೂತನ ವಿವೇಕ ಕೊಠಡಿಯನ್ನು ಶಾಸಕ ಅಶೋಕ್ ರೈ ಉದ್ಘಾಟಿಸಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚು ಪ್ರತಿಭಾವಂತರಾಗಿದ್ದು, ಸೂಕ್ತ ಅವಕಾಶ ಕಲ್ಪಿಸಿದ್ದಲ್ಲಿ ಅವರು ದೊಡ್ಡ ಸಾಧಕರಾಗಬಹುದು ಎಂದು ಶಾಸಕರು ಹೇಳಿದರು.


ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಣಣವನ್ನು ನೀಡಲಾಗುತ್ತದೆ. ಮಕ್ಕಳಿಗೆ ಶಾಲೆ ಮತ್ತು ಮನೆಯಲ್ಲಿ ಉತ್ತಮ ವಾತಾವರಣ‌ ನಿರ್ಮಾಣವಾಗಬೇಕು. ಶಾಲೆಯಲ್ಲಿರುವ ಶಿಕ್ಷಕರು ಸಮನ್ವಯತೆಯಿಂದ ಕೆಲಸವನ್ನು ಮಾಡಬೇಕು. ಸಮನ್ವಯತೆ ಕೊರತೆಯ ಬಗ್ಗೆ ಅನೇಕ‌ ದೂರುಗಳು ಕೇಳಿ ಬರುತ್ತಿದ್ದು, ಆ ರೀತಿಯಾಗದಂತೆ ಶಿಕ್ಷಕರುಗಳು ಎಚ್ಚರವಹಿಸಬೇಕಿದೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆ ಮಕ್ಕಳ ಶಿಕ್ಷಣಕ್ಕೆ ಬಳಕೆ
ಸರಕಾರದ ಐದು ಗ್ಯಾರಂಟಿ ಯೋಜನೆಯು ಮಕ್ಕಳ ಶಿಕ್ಷಣಕ್ಕೆ ಬಳಕೆಯಾಗುತ್ತಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ. ಮಹಿಳೆಯರ ಕೈ ಗಟ್ಟಿ ಮಾಡುವ ಉದ್ದೇಶ ಈ ಗ್ಯಾರಂಟಿ ಯೋಜನೆಯ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.
ಗ್ರಾಪಂ ಸದಸ್ಯರಾದ ಬೂಡಿಯಾರ್ ಪುರುಷೋತ್ತಮ ರೈಯವರು ಮಾತನಾಡಿ ಸರಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸುವ ಮೂಲಕ ಸರಕಾರಿ ಶಾಲೆಯನ್ನು ಉಳಿಸುವ ಕೆಲಸವನ್ನು ಮಾಡಬೇಕು. ಮನೆಯೊಂದರಲ್ಲಿ ಆರಂಭವಾದ ಕುರಿಯ ಸರಕಾರಿ ಶಾಲೆ ಆ ಬಳಿಕ ಮುಳಿ ಹುಲ್ಲಿನ ಮಾಡಿನ ಶಾಲೆಯಾಗಿ ರೂಪುಗೊಂಡು ಆ ಬಳಿಕ ಉತ್ತರೋತ್ತರ ಅಭಿವೃದ್ದಿ ಹೊಂದಿದೆ. ಸಾವಿರಾರು ಮಕ್ಕಳು ವಿದ್ಯೆ ಕಲಿತ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ಬೇಸರದ ವಿಚಾರವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ, ಗ್ರಾ.ಪಂ ಸದಸ್ಯರುಗಳಾದ ಬೂಡಿಯಾರ್ ಪುರುಷೋತ್ತಮ ರೈ, ಯಾಕೂಬ್ ಕುರಿಯ, ನಾಗೇಶ್ ಎಂ, ಕಲಾವತಿ, ಎಸ್ ಡಿ ಎಂ ಸಿ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್ ,ಕ್ಲಸ್ಟರ್ ಸಿಆರ್ ಪಿ ಪರಮೇಶ್ವರಿ, ನಿವೃತ್ತ ಬ್ಯಾಂಕ್ ಮೆನೇಜರ್ ನಾರಾಯಣ ರೈ, ಶಿಕ್ಷಕಿಯರಾದ ಮಮತಾ, ರಶ್ಮಿತಾ ,ರಮ್ಯ, ಸಮದ್ ಕುರಿಯ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ನವೀನ್ ಕುಮಾರ್ ಕೆ ಸ್ವಾಗತಿಸಿ, ಶಿಕ್ಷಕಿ ಕುಮಾರಿ ಕವಿತಾ ವಂದಿಸಿದರು. ದಿವ್ಯಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here