ಆಲಂಕಾರು: ಮೇಲ್ಛಾವಣಿಯಿಂದ ಆಯತಪ್ಪಿ ಬಿದ್ದು ಗಾಯಗೊಂಡಿದ್ದ ಯುವಕ ಮೃತ್ಯು

0

ಪುತ್ತೂರು:ನ.12ರಂದು ಕಾಮಗಾರಿ ನಡೆಯುತ್ತಿದ್ದ ತನ್ನ ನೂತನ ಮನೆಯ ಮೇಲ್ಛಾವಣಿಗೆ ತೆರಳಿ ಕೆಳಗಿಳಿಯುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಕುತ್ತಿಗೆಯ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಆಲಂಕಾರು ಗ್ರಾಮದ ಬಾರ್ಕುಲಿ ನಿವಾಸಿ ಉದಯ ಕುಮಾರ್‌ (27)ದಿ.26ರಂದು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ತನ್ನ ನೂತನ ಮನೆಯ ಮೇಲ್ಚಾವಣಿಯ ಕಾಮಗಾರಿ ವೀಕ್ಷಿಸಿ ಕೆಳಗಿಳಿಯುತ್ತಿದ್ದಾದ ಆಯತಪ್ಪಿ ಬಿದ್ದ ಅವರನ್ನು ತಕ್ಷಣ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು.ಬಳಿಕ ಮಂಗಳೂರು ವೆನ್ಲಾಕ್‌ ಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಚಿಕಿತ್ಸೆ ಫ‌ಲಕಾರಿಯಾಗದೆ ಡಿ.26ರ ಸಂಜೆ ಇಹಲೋಕ ತ್ಯಜಿಸಿದ್ದಾರೆ.ಮೃತರು ಆಲಂಕಾರು ಗ್ರಾ.ಪಂ.ನ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಸುನಂದ ಬಾರ್ಕುಲಿ ಸೇರಿದಂತೆ ಓರ್ವ ಸಹೋದರ, ಸಹೋದರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here