ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರು-ಪಾಣಾಜೆ ಇದರ ಅಧ್ಯಕ್ಷ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಅವರ ವತಿಯಿಂದ ಪುತ್ತೂರು ಪ್ರಜ್ಞಾ ಆಶ್ರಮಕ್ಕೆ 2 ದಿನದ ಊಟದ ವ್ಯವಸ್ಥೆಯನ್ನು ಮಾಡಲಾಯಿತು. ಲಯನ್ಸ್ ಕ್ಲಬ್ ಪುತ್ತೂರು-ಪಾಣಾಜೆ ಇದರ ಕಾರ್ಯದರ್ಶಿ ದಯಾನಂದ ರೈ ಕೋರ್ಮಂಡ, ಲತೀಫ್ ವೈಎಂಕೆ ಹಾಗೂ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಅವರ ಮನೆಯವರು ಉಪಸ್ಥಿತರಿದ್ದರು.
ಪ್ರಜ್ಞಾ ಆಶ್ರಮಕ್ಕೆ ತೆರಳಿದ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಮತ್ತು ಬಳಗ ಆಶ್ರಮದಲ್ಲಿದ್ದವರ ಜೊತೆ ಮಾತನಾಡಿ ಕೆಲಹೊತ್ತು ಅವರೊಂದಿಗೆ ಕಾಲ ಕಳೆದರು. ಆಶ್ರಮದಲ್ಲಿದ್ದವರಿಗೆ, ಬಡವರಿಗೆ ಸಹಾಯ ಮಾಡುವುದು ನಮ್ಮ ಧರ್ಮವಾಗಿದ್ದು ಇಂತವರಿಗೆ ಸಹಾಯ ಮಾಡಲು ಎಲ್ಲರೂ ಮುಂದೆ ಬರಬೇಕು, ಇಲ್ಲಿನ ಆಶ್ರಮಕ್ಕೆ ಸರಿಯಾದ ಕಟ್ಟಡ ವ್ಯವಸ್ಥೆ ಆಗುವುದು ಅಗತ್ಯವಾಗಿದ್ದು ದಾನಿಗಳು ಮನಸ್ಸು ಮಾಡಿದರೆ ಅದನ್ನು ಮಾಡಬಹುದು ಎಂದು ಮಹಮ್ಮದ್ ಹಾಜಿ ಕುಕ್ಕುವಳ್ಳಿ ಹೇಳಿದರು.