ಕಾಣಿಯೂರು: ಬೆಳಂದೂರು ಪ್ರಗತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆಯು ಒಕ್ಕೂಟದ ಅಧ್ಯಕ್ಷೆ ಕಾವ್ಯ ಬಿ.ಕೆ ಅಧ್ಯಕ್ಷತೆಯಲ್ಲಿ ಬರೆಪ್ಪಾಡಿ ದ್ವಾಕ್ರಾ ಕಟ್ಟಡದಲ್ಲಿ ನಡೆಯಿತು.
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಎನ್ಆರ್ಎಲ್ಎಂ ಇದರ ಯೋಜನೆ ಬಗ್ಗೆ ಒಕ್ಕೂಟದಿಂದ ದೊರೆಯುವ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು. ವಲಯ ಮೇಲ್ವಿಚಾರಕಿ ನಮಿತಾರವರು ಘನತ್ಯಾಜ್ಯ ಘಟಕ, ಸಂಜೀವಿನಿ ಸಂತೆ, ಸ್ವಉದ್ಯೋಗ, ನರೇಗಾ ವಕ್ಸ್ ಶೆಡ್ಡ್ ಬಗ್ಗೆ ಮಾಹಿತಿ ನೀಡಿದರು. ಬೆಳಂದೂರು ಗ್ರಾ.ಪಂ, ಅಧ್ಯಕ್ಷೆ ಪಾರ್ವತಿ ಮರಕ್ಕಡ, ಉಪಾಧ್ಯಕ್ಷ ಜಯಂತ ಅಬೀರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ್, ಸದಸ್ಯರಾದ ಲೋಹಿತಾಕ್ಷ ಕೆಡೆಂಜಿಕಟ್ಟ, ಮೋಹನ್ ಅಗಳಿ, ವಿಠಲ ಗೌಡ ಅಗಳಿ, ಉಮೇಶ್ವರಿ ಅಗಳಿ, ಕೃಷಿ ಸಖಿ ಶೋಭಲತಾ, ಕೃಷಿ ಉದ್ಯೋಗ ಸಖಿದಿವ್ಯ, ಪಶು ಸಖಿ ಸುಧಾ, ಎಲ್ಸಿಆರ್ಪಿ ಮೋಹಿನಿ, ಬಿಆರ್ಪಿ ಜಯಂತಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಒಕ್ಕೂಟದ ಕಾರ್ಯದರ್ಶಿ ವಾರಿಜಾ ವರದಿ ವಾಚಿಸಿದರು. ಒಕ್ಕೂಟದ ಉಪಾಧ್ಯಕ್ಷೆ ಲಲಿತಾ ಈಶ್ವರ, ಜತೆ ಕಾರ್ಯದರ್ಶಿ ವಾರಿಜಾ, ಜತೆ ಕಾರ್ಯದರ್ಶಿ ಜಯಂತಿ, ಪದಾಧಿಕಾರಿಗಳಾದ ಮೋಹಿನಿ, ವನಜ, ಸೀಮಾ, ಸುಂದರಿ, ಶೀಲಾವತಿ ಉಪಸ್ಥಿತರಿದ್ದರು. ಎಂಬಿಕೆ ಗೌರಿ ಲೆಕ್ಕಪರಿಶೋಧನಾ ವರದಿ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು. ದಿವ್ಯ, ಸುಧಾ ಪ್ರಾರ್ಥಿಸಿದರು. ಎಲ್ಸಿಆರ್ ಪಿ ಪಾರ್ವತಿ ಬೊಮ್ಮೊಡಿ ವಂದಿಸಿದರು.