ಪೆರ್ನೆ ಶ್ರೀ ವಿಷ್ಣುಮೂರ್ತಿ ದೇವಳದ ಜಾತ್ರೋತ್ಸವ ಸಂಪನ್ನ-ಶ್ರೀ ದೇವರ ಬಲಿ ಹೊರಟು ಉತ್ಸವ

0

ಉಪ್ಪಿನಂಗಡಿ: ಪೆರ್ನೆ- ಬಿಳಿಯೂರು ಗ್ರಾಮದ ದೇಂತಡ್ಕ- ಕಳೆಂಜದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ನಡೆಯುತ್ತಿದ್ದು, ಎರಡನೇ ದಿನವಾದ ಶುಕ್ರವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆಯಿತು.


ಬೆಳಗ್ಗೆ ಶ್ರೀ ಮಹಾಗಣಪತಿ ಹೋಮ, ಕಲಶ ಪೂಜೆ ನಡೆದು, ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಶ್ರೀ ದೇವರಿಗೆ ಕಲಶಾಭಿಷೇಕಗಳು, ಕ್ಷೇತ್ರದ ದೈವಗಳಿಗೆ ಮತ್ತು ನಾಗದೇವರಿಗೆ ತಂಬಿಲ ಸೇವೆ, ತುಲಾಭಾರ ಸೇವೆ, ಮಹಾಪೂಜೆಯಾಗಿ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಭಜನಾ ಕಾರ್ಯಕ್ರಮ ನಡೆದು, ರಾತ್ರಿ ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತಕಟ್ಟೆ ಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆದು ಪ್ರಸಾದ ವಿತರಣೆಯಾಗಿ, ವೈದಿಕ ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತರು ಜಾತ್ರೋತ್ಸವದಲ್ಲಿ ಪಾಲ್ಗೊಂಡರು.


ಈ ಸಂದರ್ಭ ದೇವಾಲಯದ ಆಡಳಿತ ಸಮಿತಿಯ ಗೌರವಾಧ್ಯಕ್ಷೆ ಶ್ರೀಮತಿ ಪದ್ಮಾಸಿನಿ ಎನ್. ಜೈನ್ ಕಳೆಂಜಗುತ್ತು, ಅಧ್ಯಕ್ಷರಾದ ವೇ.ಮೂ. ವಿದ್ವಾನ್ ಕಳೆಂಜ ಕೃಷ್ಣಮೂರ್ತಿ ಕಾರಂತ ಶಂಕರಯ್ಯರಪಾಲು, ಉಪಾಧ್ಯಕ್ಷರಾದ ಉಮೇಶ್ ಪೂಜಾರಿ ಬಾಕಿಮಾರು, ಕಾರ್ಯದರ್ಶಿ ಶ್ರೀಮತಿ ರೇವತಿ ಪಿ., ಜೊತೆ ಕಾರ್ಯದರ್ಶಿ ವಿಜಯಲಕ್ಷ್ಮೀ ವಿ. ಶೆಟ್ಟಿ ಪೆರ್ನೆ, ಖಜಾಂಚಿ ಚಿದಾನಂದ ಗೌಡ ಕಳೆಂಜ, ಸದಸ್ಯರಾದ ಮಿತ್ರದಾಸ ರೈ ಪೆರ್ನೆ, ಐತಪ್ಪ ಭಂಡಾರಿ ಮೇಗಿನಮನೆ, ಸಂಜೀವ ಪೂಜಾರಿ ಕಳೆಂಜ ಕೆಳಗಿನ ಮನೆ, ಎಚ್. ಮುತ್ತಪ್ಪ ಹನುಮಾಜೆ, ಶಿವಪ್ಪ ನಾಯ್ಕ ಕಾರ್ಲ, ಟಿ. ತೀರ್ಥಾಕ್ಷ ರೈ ತಿಪ್ಪಕೋಡಿ, ಸುಂದರ ಎಂ. ಮಲ್ಲಡ್ಕ, ಕೊರಗಪ್ಪ ಭಂಡಾರಿ ಓಟೆಚಾರು, ವಿಜಯ ಎಸ್. ಪೆಜಕುಡೆ, ಶೀನಪ್ಪ ಗೌಡ ಕುಂಡಾಜೆ, ಗಿರೀಶ ಬಂಗೇರ ಬಿಳಿಯೂರು, ಶ್ರೀ ದೇವಾಲಯದ ಅರ್ಚಕರಾದ ರಾಘವೇಂದ್ರ ಭಟ್ , ಜಾತ್ರೋತ್ಸವ ಸಮಿತಿಯ ಅಧ್ಯಕ್ಷರಾದ ಕೃಷ್ಣರಾಜ್ ಭಟ್ ಮೈರಕಟ್ಟೆ, ಉಪಾಧ್ಯಕ್ಷರಾದ ಈಶ್ವರ ಭಟ್ ಹನುಮಾಜೆ, ಗಿರೀಶ್ ಪೆರ್ಗಡೆ ಹೊನ್ನಕೊಡಂಗೆ, ದಯಾನಂದ ಪೆರ್ನೆ, ಉಮಾನಾಥ ಶೆಟ್ಟಿ ಸಂಪಿಗೆಕೋಡಿ, ಸದಾಶಿವ ಶೆಟ್ಟಿ ಒಂಜರಪಲ್ಕೆ, ಜೊತೆ ಕಾರ್ಯದರ್ಶಿಗಳಾದ ಸತೀಶ್ ರಾವ್ ಮೈರಕಟ್ಟೆ, ಕಿರಣ್ ಶೆಟ್ಟಿ ಮೈರಕಟ್ಟೆ, ಕೋಶಾಧಿಕಾರಿ ಕಿರಣ್ ಶೆಟ್ಟಿ ಮುಂಡೆವಿನಕೋಡಿ, ಸದಸ್ಯರಾದ ನೀಲಪ್ಪ ಗೌಡ ಕಳೆಂಜ, ಚಂದ್ರಹಾಸ ಶೆಟ್ಟಿ ಸಂಪಿಗೆಕೋಡಿ, ಇ.ಆರ್. ಈಶ್ವರ ಭಟ್ ಗಿಟ್ಟೆದಡ್ಡ, ಮೋಹನದಾಸ ಶೆಟ್ಟಿ ಸುಜೀರ್‌ಗುತ್ತು, ಮೋನಪ್ಪ ಗೌಡ ಕಳೆಂಜ, ಸಂಜೀವ ಪೂಜಾರಿ ಕಳೆಂಜ ಕೆಳಗಿನಮನೆ, ಪ್ರಶಾಂತ್ ಕೆರೆಂಗೋಡಿ, ತೋಯಜಾಕ್ಷ ಶೆಟ್ಟಿ ಸಂಪಿಗೆಕೋಡಿ, ರಾಜೀವ ಶೆಟ್ಟಿ ಕೇದಗೆ, ಡಾ. ಉಮ್ಮಪ್ಪ ಪೂಜಾರಿ ಪೆರ್ನೆ, ನಾಗೇಶ್ ಮೊಲಿ ನೇಂಜ, ರಾಜೀವ ಸಾಮಾನಿ ಇರುಬೈಲು, ವಾಸು ಪೂಜಾರಿ ಮೈರಕಟ್ಟೆ, ರಾಜಶೇಖರ ಶೆಟ್ಟಿ ಇರುವೈಲು, ಬಿ.ಎನ್. ಪೂಜಾರಿ ಬೊಟ್ಟುಕಳೆಂಜ, ಭಾಸ್ಕರ ಗಿಟ್ಟೆದಡ್ಕ, ಸಲಹಾ ಸಮಿತಿಯ ಗೋಪಾಲ ಶೆಟ್ಟಿ ಕಳೆಂಜ, ಕಾರ್ಯಾಲಯ ಸಮಿತಿಯ ಶಶಿಧರ ಶೆಟ್ಟಿ ದುರ್ಗಿಪಾಲು, ಸ್ವಾಗತ ಸಮಿತಿಯ ಪ್ರೀತಮ್ ಶೆಟ್ಟಿ ಕೇದಗೆ, ಶ್ರೀಮತಿ ರಕ್ಷಿತಾ ದುರ್ಗಿಪಾಲು, ಹೊರೆಕಾಣಿಕೆ ಸಮಿತಿಯ ಸಂಚಾಲಕರಾದ ವಸಂತ ಶೆಟ್ಟಿ ಮನ್ನೇವು, ಜನಾರ್ದನ ಆವೆದಹಿತ್ತಿಲು ಬಿಳಿಯೂರು, ಸುರೇಶ್ ಶೆಟ್ಟಿ ದುರ್ಗಿಪಾಲು, ರಾಜಶೇಖರ ಶೆಟ್ಟಿ ಇರುವೈಲು, ಪ್ರಮುಖರಾದ ಬಾಲಕೃಷ್ಣ ರೈ ತಿಪ್ಪೆಕೋಡಿ, ಕನ್ಯಾನ ಸದಾಶಿವ ಶೆಟ್ಟಿ, ಬೈಲುವಾರು ಸಮಿತಿಯ ಸಂಚಾಲಕರಾದ ಪುಷ್ಪರಾಜ ಶೆಟ್ಟಿ ಪದಬರಿ, ಚಂದಪ್ಪ ಕುಲಾಲ್ ನೆಕ್ಕರೆ, ವೇಣುಗೋಪಾಲ ಶೆಟ್ಟಿ ಬಟ್ಟೆಜಾಲು, ಪದ್ಮನಾಭ ಸಾಮಾನಿ ಇರುಬೈಲು, ಎಂ. ಮೋಹನಶೆಟ್ಟಿ ಮನ್ನೇವು, ಪ್ರವೀಣ್ ಸಾನೇವು, ಸೂರಪ್ಪ ಪೂಜಾರಿ ನೇಲಡ್ಕ, ರವೀಂದ್ರ ಶೆಟ್ಟಿ ದುರ್ಗಿಪಾಲು, ತನಿಯಪ್ಪ ಪೂಜಾರಿ ಹೊಸಮನೆ, ಜಯಂತಿ ಪಾಲ್ತೊಟ್ಟು, ಗೋಪಾಲ ಸಪಲ್ಯ ಬೆದ್ರ, ದಯಾನಂದ ಸಪಲ್ಯ ಬೆದ್ರ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here