ಶಾಸಕ ಅಶೋಕ್ ರೈ ತವರು ಗ್ರಾಮ ಕೋಡಿಂಬಾಡಿ¾ಕೈ¿ ಹಿಡಿದ ಮತದಾರರು-ಹಾ.ಉ. ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಿಗೆ ಜಯ: 5 ಸ್ಥಾನಕ್ಕೆ ತೃಪ್ತಿಪಟ್ಟ ಬಿಜೆಪಿ ಬೆಂಬಲಿತರು

0

ಐದು ಮಂದಿ ಮರು ಆಯ್ಕೆ
ಚುನಾಯಿತರಾದ 12 ನಿರ್ದೇಶಕರ ಪೈಕಿ ಜಗನ್ನಾಥ ಶೆಟ್ಟಿ ನಡುಮನೆ, ರಾಧಿಕಾ ಆರ್. ಸಾಮಂತ್ ನೆಕ್ಕರಾಜೆ, ರತ್ನವರ್ಮ ಆಳ್ವ ಮಿತ್ತಳಿಕೆ, ಕೇಶವ ಗೌಡ ಬರಮೇಲು ಮತ್ತು ಲೀಲಾವತಿ ಪರಬಪಾಲು ಅವರು ಮರು ಆಯ್ಕೆಯಾಗಿದ್ದಾರೆ. ಉಳಿದ ಏಳು ನಿರ್ದೇಶಕರು ಪ್ರಥಮ ಬಾರಿ ಚುನಾಯಿತರಾಗಿದ್ದಾರೆ.

ಮರು ಎಣಿಕೆಯಲ್ಲಿಯೂ ಕಾಂಗ್ರೆಸ್ ಜಯ

ಹಿಂದುಳಿದ ವರ್ಗ ಎ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ, ಸಂಘದ ಹಾಲಿ ಅಧ್ಯಕ್ಷೆ ರೇವತಿ ವೀರಪ್ಪ ಪೂಜಾರಿ ಡೆಕ್ಕಾಜೆ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬಾಬು ಆಚಾರ್ಯ ಕೊಂಬಕೋಡಿ ಅವರ ನಡುವಿನ ಸ್ಪರ್ಧೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬಾಬು ಆಚಾರ್ಯ ಎರಡು ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಬಿಜೆಪಿ ಬೆಂಬಲಿತರ ಮನವಿಯಂತೆ ಮರು ಎಣಿಕೆ ನಡೆಸಲಾಯಿತಾದರೂ ಮರು ಎಣಿಕೆಯಲ್ಲಿಯೂ ಬಾಬು ಆಚಾರ್ಯ ಅವರು ಎರಡು ಮತಗಳ ಅಂತರದಿಂದ ಜಯಶಾಲಿಯಾದರು.

ಪುತ್ತೂರು: ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ರಚನೆಗಾಗಿ ದ.30ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 7 ಅಭ್ಯರ್ಥಿಗಳು ಹಾಗೂ ಬಿಜೆಪಿ ಬೆಂಬಲಿತ 5 ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಐವತ್ತು ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಇದೇ ಪ್ರಥಮ ಬಾರಿ ಚುನಾವಣೆ ಏರ್ಪಟ್ಟಿತ್ತು. 12 ಸ್ಥಾನಗಳಿಗೆ ಒಟ್ಟು 24 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತರ ನಡುವೆ ನೇರ ಹಣಾಹಣಿ ನಡೆದಿತ್ತು. ಶಾಸಕ ಅಶೋಕ್ ಕುಮಾರ್ ರೈ ಅವರ ತವರು ಗ್ರಾಮದಲ್ಲಿ ಮತದಾರರು ಕಾಂಗ್ರೆಸ್ ಬೆಂಬಲಿಸಿದ್ದು ಪ್ರಥಮ ಬಾರಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಕಾಂಗ್ರೆಸ್ ಬೆಂಬಲಿತರಿಗೆ ಒಲಿದಿದೆ.

ಜಯಗಳಿಸಿದ ಅಭ್ಯರ್ಥಿಗಳು: ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಅಶೋಕ್ ಗೌಡ ಮೇಗಿನಹಿತ್ತಿಲು, ಕೆ. ಚಂದ್ರಶೇಖರ ರೈ ಕೆದಿಕಂಡೆಗುತ್ತು, ವಿಜಯಲಕ್ಷ್ಮಿ ಆರ್. ನಾಯಕ್ ನಿಡ್ಯ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಎಲ್ಯಣ್ಣ ಗೌಡ ಮೇಲಿನಹಿತ್ತಿಲು, ಜಗನ್ನಾಥ ಶೆಟ್ಟಿ ನಡುಮನೆ, ರತ್ನವರ್ಮ ಆಳ್ವ ಮಿತ್ತಳಿಕೆ, ಸಂತೋಷ್ ಕುಮಾರ್ ರೈ ಕೆದಿಕಂಡೆಗುತ್ತು ಜಯಗಳಿಸಿದ್ದಾರೆ. ಮಹಿಳಾ ಮೀಸಲು ಸ್ಥಾನದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರೇಣುಕಾ ಮುರಳೀಧರ ರೈ ಎಂ. ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಧಿಕಾ ಆರ್. ಸಾಮಂತ್ ನೆಕ್ಕರಾಜೆ ಜಯಗಳಿಸಿದ್ದಾರೆ. ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಸ್ಥಾನದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬಾಬು ಆಚಾರ್ಯ ಕೊಂಬಕೋಡಿ ಜಯಗಳಿಸಿದ್ದಾರೆ. ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೇಶವ ಗೌಡ ಬರೆಮೇಲು ಜಯಗಳಿಸಿದ್ದಾರೆ. ಪರಿಶಿಷ್ಟ ಪಂಗಡ ಸ್ಥಾನದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಲೀಲಾವತಿ ಪರಬಪಾಲು ಜಯಗಳಿಸಿದ್ದಾರೆ. ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಓರ್ವರು ಆಯ್ಕೆಯಾಗಬೇಕಿದೆಯಾದರೂ ಈ ವಿಭಾಗದಿಂದ ಯಾರೂ ಸದಸ್ಯರು ಇಲ್ಲದ ಕಾರಣ ಈ ವಿಭಾಗಕ್ಕೆ ಚುನಾವಣೆ ನಡೆದಿಲ್ಲ.

156 ಮತದಾರರು: ಒಟ್ಟು 12 ಸ್ಥಾನಗಳ ಆಯ್ಕೆಗಾಗಿ 24 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದರು. ಒಟ್ಟು 156 ಮತದಾರರ ಪೈಕಿ 154 ಮತ ಚಲಾವಣೆಯಾಗಿತ್ತು. ರಿಟರ್ನಿಂಗ್ ಅಧಿಕಾರಿಯಾಗಿ ಪುತ್ತೂರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಮಾರಾಟಾಧಿಕಾರಿ ಶೋಭಾ ಎನ್.ಎಸ್. ಕಾರ್ಯನಿರ್ವಹಿಸಿದ್ದರು.

ಪರಾಜಯಗೊಂಡವರು: ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಚಂದ್ರಶೇಖರ ಗೌಡ ಬದಿನಾರು, ಚೆನ್ನಪ್ಪ ಗೌಡ ನಿಡ್ಯ, ಭುಜಂಗ ಶೆಟ್ಟಿ ಪಾದೆ, ಲೀಲಾಧರ ಗೌಡ ಉಳಿತ್ತಡ್ಕ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿರಾದ ಜಾನಕಿ ಸಿ. ಗೌಡ ಪಿಲಿಗುಂಡ, ದಯಾನಂದ ಪೂಜಾರಿ ಪಲ್ಲತ್ತಾರು, ಪ್ರಹ್ಲಾದ ಶೆಟ್ಟಿ ಮಠಂತಬೆಟ್ಟು, ಮಹಿಳಾ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ರಂಜಿನಿ ಜಿ. ಪೂಜಾರಿ ಆಚಾರಿಪಾಲು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಯಂತಿ ಶೀನಪ್ಪ ಪೂಜಾರಿ ಪರನೀರು,
ಹಿಂದುಳಿದ ವರ್ಗ ಎ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ರೇವತಿ ವಿ. ಪೂಜಾರಿ ಡೆಕ್ಕಾಜೆ, ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ದೇವದಾಸ ಗೌಡ ಉಳಿತ್ತಡ್ಕ, ಪರಿಶಿಷ್ಟ ಪಂಗಡ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವೀರಪ್ಪ ನಾಯ್ಕ ಪರಬಪಾಲು ಪರಾಭವಗೊಂಡಿದ್ದಾರೆ.

LEAVE A REPLY

Please enter your comment!
Please enter your name here