ಪುತ್ತೂರು:ಬೆಳ್ಳಾರೆ ಝಕರಿಯಾ ಜುಮ್ಮಾ ಮಸ್ಜಿದ್ ಆಡಳಿತದ ಅಧೀನದಲ್ಲಿರುವ ಹಿದಾಯ ಎಜುಕೇಷನಲ್ & ಚಾರಿಟೇಬಲ್ ಟ್ರಸ್ಟ್ ಪ್ರವರ್ತಿತ ಹಿದಾಯ ಪಬ್ಲಿಕ್ ಸ್ಕೂಲ್ ನ ವಾರ್ಷಿಕೋತ್ಸವದ ಅಂಗವಾಗಿ ಬ್ಲಾಸಂ ಟ್ಯಾಲೆಂಟ್ ಮತ್ತು ಪ್ರತಿಭಾ ಪುರಸ್ಕಾರ ಜರಗಿತು. ಬೆಳ್ಳಾರೆ ಝಕರಿಯಾ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಯು. ಎಚ್. ಅಬೂಬಕ್ಕರ್ ಮಂಗಳ ವಹಿಸಿದ್ದರು.
ಸಮಾರಂಭವನ್ನು ಉದ್ಘಾಟಿಸಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಮಾತನಾಡಿ ಶಿಕ್ಷಣ ಪಡೆಯುವುದರಿಂದ ಪ್ರತಿಯೊಬ್ಬ ನಾಗರಿಕನೂ ದೇಶದ ಸಂಪತ್ತು ಆಗಲು ಸಾಧ್ಯ, ಸಂಪದ್ಭರಿತ ದೇಶ ವಿಶ್ವದಲ್ಲೇ ಬಲಿಷ್ಠವೆನಿಸುತ್ತದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜೇಸಿ ರಾಜ್ಯ ತರಬೇತುದಾರ ಪ್ರದೀಪ್ ಕುಮಾರ್ ಪನ್ನೆ ಮಾತನಾಡಿ ಪೋಷಕರ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಝಕರಿಯಾ ಜುಮ್ಮಾ ಮಸ್ಜಿದ್ ಉಪಾಧ್ಯಕ್ಷ ಅಬ್ದುಲ್ ಖಾದರ್ ಬಯಂಬಾಡಿ (ಅಬ್ಬಚ್ಚ ), ಶಾಲಾ ಸಂಚಾಲಕ ಬಶೀರ್, ನಿರ್ದೇಶಕರುಗಳಾದ ಶಾಫಿ ಎಂ. ಎ , ಬಶೀರ್ ಕಲ್ಪಣೆ,ಯು. ಪಿ. ಬಶೀರ್, ಕೆ. ಎ. ಬಶೀರ್, ಅಝರುದ್ದೀನ್, ಪಿ. ಟಿ. ಎ. ಅಧ್ಯಕ್ಷ ಅಬ್ದುಲ್ ರೆಹಮಾನ್ ಟಿ ಮೊದಲಾದವರು ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆ, ಕಲಿಕೆ ಮೊದಲಾದ ವಿಭಾಗಗಳಲ್ಲಿ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಮಾಜಿ ಜಿ. ಪಂ. ಸದಸ್ಯ ಎಂ. ಎಸ್. ಮಹಮ್ಮದ್ ಬಹುಮಾನ ವಿತರಿಸಿದರು.
ಮುಖ್ಯ ಅತಿಥಿಗಳಾಗಿ ಮೀಫ್ ಉಪಾಧ್ಯಕ್ಷ ಕೆ. ಎಂ. ಮುಸ್ತಫ, ಸುಳ್ಯ ನಗರ ಪಂಚಾಯತ್ ಸದಸ್ಯ ಕೆ. ಎಂ. ಮುಸ್ತಫ, ಉದ್ಯಮಿ ಮಮ್ಮಾಲಿ ಹಾಜಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮಿತಾ ಲೋಹಿತ್ ರೈ ಬೆಳ್ಳಾರೆ,ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅನಿಲ್ ರೈ ಮೊದಲಾದವರು ಭಾಗವಹಿಸಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಸುನೈಬ ವಾರ್ಷಿಕ ವರದಿಯನ್ನು ವಾಚಿಸಿದರು. ಹನಿಯ್ಯಾ ಹಕೀಮ್ ಪ್ರಾರ್ಥಿಸಿ,ವಿದ್ಯಾರ್ಥಿನಿ ಶಾನಿಬ ಸ್ವಾಗತಿಸಿ, ವಿದ್ಯಾರ್ಥಿನಿ ಆಶ್ಪಿಯಾ ವಂದಿಸಿದರು.
ಮುಫೀದ್ ಮತ್ತು ಝುಲ್ಫ ಕಾರ್ಯಕ್ರಮ ನಿರೂಪಿಸಿದರು.