ಕೌಡಿಚ್ಚಾರ್ ನೇರೋಳ್ತಡ್ಕ ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕರಿಂದ ಗುದ್ದಲಿಪೂಜೆ- 1ಕೋಟಿ ಅನುದಾನ ಬಿಡುಗಡೆ

0

ಪುತ್ತೂರು: ಅರಿಯಡ್ಕ ಗ್ರಾಮದ ಕೌಡಿಚ್ಚಾರ್ ನೇರೋಲ್ತಡ್ಕ ರಸ್ತೆಗೆ ಸುಮಾರು 1300 ಮೀಟರ್ ರಸ್ತೆ ಕಾಂಕ್ರೀಟ್ ಆಗಲಿದ್ದು ಕಾಮಗಾರಿಗೆ ಶಾಸಕರ ಮೂಲಕ 1 ಕೋಟಿ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿಗೆ ಶಾಸಕ ಅಶೋಕ್‌ ರೈ ಗುದ್ದಲಿಪೂಜೆ ನೆರವೇರಿಸಿದರು.


ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಅಶೋಕ್ ರೈಯವರು‌ ಶಾಸಕರಾಗಿರುವುದು ಕ್ಷೇತ್ರದ ಜನತೆಯ ಭಾಗ್ಯವಾಗಿದೆ, ಇಷ್ಟು ವರ್ಷ ಇಂಥಹ ಶಾಸಕರು ಬಂದಿಲ್ಲ.‌ಮುಂದಿನ 5 ವರ್ಷದಲ್ಲಿ ಪುತ್ತೂರು ಕ್ಷೇತ್ರ ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ದಿ ಕಾಣಲಿದೆ ಎಂದು ಹೇಳಿದರು. ಒಂದೇ ಬಾರಿಗೆ ಅರಿಯಡ್ಕ ಗ್ರಾಮಕ್ಕೆ ಎರಡು ಕೋಟಿ ಕಾಮಗಾರಿಗೆ ಶಿಲಾನ್ಯಾಸ‌ ನಡೆದಿದೆ. ರಸ್ತೆಯ ಜೊತೆಗೆ ಕೌಡಿಚ್ಚಾರ್ ನಲ್ಲಿ ರುವ ಕೆರೆಯ ಅಭಿವೃದ್ದಿಗೆ ಅನುದಾನ ನೀಡುವಂತೆ ಶಾಸಕರಿಗೆ ಮನವಿ ಮಾಡಿದರು.ಅರಿಯಡ್ಕ ಗ್ರಾಮಕ್ಕೆ ಇನ್ನೂ ಹೆಚ್ಚಿನ‌ ಅನುದಾನ ನೀಡುವ ಭರವಸೆ ಇದ್ದು‌ ಗ್ರಾಮದಲ್ಲಿ ಬಾಕಿ ಇರುವ ಮತ್ತು ಅಗತ್ಯವಾಗಿ ನಡೆಯಬೇಕಾದ ಎಲ್ಲಾ ಕಾಮಗಾರಿಗಳಿಗೆ ಶಾಸಕರು ಅನುದಾನ ನೀಡಲಿದ್ದಾರೆ ಎಂದು ಹೇಮನಾಥ ಶೆಟ್ಟಿ ಹೇಳಿದರು.

ಅವರು ಗುದ್ದಲಿಪೂಜೆ ಮಾಡಿದ್ದು ಮಾತ್ರ: ಅಶೋಕ್ ರೈ
ಅರಿಯಡ್ಕ ಗ್ರಾಮಕ್ಕೆ ಅಷ್ಟು ಕೊಡ್ತೆನೆ ಇಷ್ಟು ಕೊಡ್ತೆನೆ ಎಂದು ಹೇಳಿ ಗುದ್ದಲಿಪೂಜೆ ಮಾಡಿದ್ದೇ ಮಾಡಿದ್ದು ಬಿಜೆಪಿಯವರು ಒಂದು ರುಪಾಯಿಯೂ ಕೊಟ್ಟಿಲ್ಲ. ನಾವು ಹಣ ಬಿಡುಗಡೆಯಾದ ಬಳಿಕ ಗುದ್ದಲಿಪೂಜೆ ಮಾಡುವುದು,ಜನರಿಗೆ ಮೋಸ ಮಾಡುವ ಹವ್ಯಾಸ ನಮಗಿಲ್ಲ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅರಿಯಡ್ಕ ಗ್ರಾಮಕ್ಕೆ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಲಾಗುವುದು. ಒಂದೇ ಬಾರಿಗೆ ಗ್ರಾಮಕ್ಕೆ ಒಟ್ಟು 2.5 ಕೋಟಿ ಅನುದಾನದ ಕಾಮಗಾರಿಗೆ ಗುದ್ದಲಿಪೂಜೆ ನಡೆಸಿದ್ದೇನೆ. ನಿಮ್ಮದೇ ಹಣದಲ್ಲಿ‌ ನಿಮ್ಮೂರಿನ ರಸ್ತೆ ಕಾಮಗಾರಿ ನಡೆಯುತ್ತಿದೆ. ನೀವು ತೆರಿಗೆ ರೂಪದಲ್ಲಿ ಪಾವತಿ ಮಾಡಿದ ಹಣ‌ ಮರಳಿ‌ ನಿಮ್ಮ ಊರಿಗೆ ನೀಡಲಾಗಿದೆ. ಕಾಂಗ್ರೆಸ್ ಎಂದೂ ಅಭಿವೃದ್ದಿಪರವಾಗಿದೆ ಎಂದು ಹೇಳಿದರು.


ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ,ರಾಜೀವ ರೈ ಕುತ್ಯಾಡಿ, ಗ್ರಾಪಂ ಸದಸ್ಯರುಗಳಾದ ವನಿತಾ,ಅಬ್ದುಲ್ ರಹಿಮಾನ್, ಜಯಂತಿ,ಕಾಂಗ್ರೆಸ್ ಮುಖಂಡರಾದ ಅಮ್ಮಣ್ಣ ರೈ ಪಾಪೆಮಜಲು,ಶಿವರಾಮ‌ಮಣಿಯಾಣಿ,ಸೋಮಪ್ಪ ನಾಯ್ಕ,ಅಶೋಕ್ ರೈದೇರ್ಲ, ಸಾರ್ತಕ್ ರೈ,ಮನ್ವಿಜ್ ರೈ, ವಿನೋದ್ ಶೆಟ್ಟಿ ಅರಿಯಡ್ಕ ,ಅಬ್ಬ ಕೌಡಿಚ್ಚಾರ್ ಮತ್ತಿತರರು ಉಪಸ್ಥಿತರಿದ್ದರು.
ವಲಯ ಕಾಂಗ್ರೆಸ್ ಅಧ್ಯಕ್ಷರಾದ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಸ್ವಾಗತಿಸಿ, ಬಶೀರ್ ಕೌಡಿಚ್ಚಾರ್ ವಂದಿಸಿದರು.

LEAVE A REPLY

Please enter your comment!
Please enter your name here