ಉಪ್ಪಳಿಗೆಯಲ್ಲಿ ಸಂಭ್ರಮಿಸಿದ ಹಿ.ಪ್ರಾ ಶಾಲೆ, ಪ್ರೌಢಶಾಲೆ, ವಿಷ್ಣು ಯುವಕ ಮಂಡಲದ ಸಂಯುಕ್ತ ವಾರ್ಷಿಕೋತ್ಸವ

0

ಪುತ್ತೂರು: ವಿವಿಧ ರೀತಿಯ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳೊಂದಿಗೆ ಡಿ.29ರಂದು ಉಪ್ಪಳಿಗೆ ಹಿ.ಪ್ರಾ ಶಾಲಾ ಬಯಲು ರಂಗಮಂದಿರದಲ್ಲಿ ನಡೆದ ಇರ್ದೆ-ಉಪ್ಪಳಿಗೆಯ ಸ.ಹಿ.ಪ್ರಾ ಶಾಲೆ, ಸರಕಾರಿ ಪ್ರೌಢ ಶಾಲೆ ಹಾಗೂ ವಿಷ್ಣು ಯುವಕ ಮಂಡಲ ಉಪ್ಪಳಿಗೆ ಇದರ ಸಂಯುಕ್ತ ವಾರ್ಷಿಕೋತ್ಸವವು ಪ್ರೇಕ್ಷಕರಲ್ಲಿ ಸಂಭ್ರಮ ಮನೆ ಮಾಡಿದೆ.


ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಸರಕಾರಿ ಪ್ರೌಢಶಾಲಾ ಕಾರ್ಯಾಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ಧ್ವಜಾರೋಹಣ ನೆರವೇರಿಸಿದರು. ಇರ್ದೆ ಉಪ್ಪಳಿಗೆ ಸ.ಹಿ.ಪ್ರಾ ಶಾಲಾ ಎಸ್‌ಡಿಎಂಸಿ ಅದ್ಯಕ್ಷ ಲೋಕನಾಥ ಆಚಾರ್ಯ ಚೆಲ್ಯಡ್ಕ, ವಿಷ್ಣು ಯುವಕ ಮಂಡಲದ ಅಧ್ಯಕ್ಷ ಶಿವಪ್ರಸಾದ್ ಯು. ಅತಿಥಿಗಳಾಗಿ ಆಗಮಿಸಿದ್ದರು. ಮಧ್ಯಾಹ್ನ ಪ್ರಾರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮವನ್ನು ನ್ಯಾಯವಾದಿ ಬಾಲಕೃಷ್ಣ ರೈ ಅರಂತನಡ್ಕ ಉದ್ಘಾಟಿಸಿದರು. ನಂತರ ಸ.ಹಿ.ಪ್ರಾ ಶಾಲಾ ವಿದ್ಯಾರ್ಥಿಗಳು. ಸಂಜೆ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪ್ರೌಢಶಾಲಾ ವಿದ್ಯಾರ್ಥಿಗಳೇ ಪಾತ್ರದಾರಿಗಳಾಗಿದ್ದ ‘ಅಮ್ಮ ಜಗದಾಂಬಿಕೆ’ ಎಂಬ ಯಕ್ಷಗಾನವು ಪ್ರೇಕ್ಷಕರ ಕಣ್ಮನ ಸೆಳೆಯಿತು.


ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ:
ಧ್ವಜಾರೋಹಣ ಕಾರ್ಯಕ್ರಮದ ಬಳಿಕ ಸರಕಾರಿ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಿತು. ಈ ಕಾರ್ಯಕ್ರಮವನ್ನು ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ವಿಠಲ ರೈ ಬೈಲಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ತಾ.ಪಂ ಮಾಜಿ ಸದಸ್ಯೆ ಮೀನಾಕ್ಷಿ ಮಂಜುನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಎಸ್‌ಡಿಎಂಸಿ ಉಪಾಧ್ಯಕ್ಷ ಕೃಷ್ಣಪ್ರಸಾಸ್ ಆಳ್ವ, ಮುಖ್ಯಗುರು ರಾಮಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.


ಸಂಜೆ ನಡೆದ ಸಂಯುಕ್ತ ವಾರ್ಷಿಕೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬ್ರೈಟ್ ವೇ. ಇಂಡಿಯಾ ಕನ್ಸಲ್ಟೆನ್ಸಿಯ ನಿರ್ದೇಶಕ ಮನಮೋಹನ ರೈ ಮಾತನಾಡಿ, ಉಪ್ಪಳಿಗೆ ಹಿ.ಪ್ರಾ ಶಾಲೆ ಹಾಗೂ ಪ್ರೌಢಶಾಲೆಗಳು ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಫಲಿತಾಂಶದಲ್ಲಿಯೂ ತಾಲೂಕಿನಲ್ಲಿಯೇ ಮಾದರಿ ಶಾಲೆಗಳಾಗಿದೆ. ಶಿಕ್ಷಕರು ಹಾಗೂ ಊರ ಸಾರ್ವಜನಿಕರ ಉತ್ತಮ ಬಾಂಧವ್ಯದೊಂದಿಗೆ ಅಭಿವೃದ್ಧಿಯತ್ತ ಸಾಗುತ್ತಿದೆ. ಶಾಲೆ ಹಾಗೂ ಊರಿನ ಅಭಿವೃದ್ಧಿಯಲ್ಲಿ ವಿಷ್ಣು ಯುವಕ ಮಂಡಲವು ರಾಜಕೀಯ, ಜಾತಿ ರಹಿತವಾಗಿ ತನ್ನ ಕೊಡುಗೆ ನೀಡುತ್ತಿದೆ ಎಂದರು.


ಉದ್ಯಮಿ ಯತೀಶ್ ರೈ ಚೆಲ್ಯಡ್ಕ ಮಾತನಾಡಿ, ಉಪ್ಪಳಿಗೆ ಶಾಲೆಗೆ ಇತಿಹಾಸವಿದೆ. ಎಪ್ಪತ್ತು ವರ್ಷ ಪೂರೈಸಿರುವ ಶಾಲೆಯು ಲಕ್ಷಾಂತರ ಮಂದಿ ವಿದ್ಯಸರ್ಜನೆ ನೀಡಿರುವ ಸಂಸ್ಥೆಯಾಗಿದೆ. ಇಲ್ಲಿ ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿಗಳು ಸಮಾಜದಲ್ಲಿ ಗೌರವದ ಸ್ಥಾನದಲ್ಲಿದ್ದಾರೆ. ಶಾಲೆಗಾಗಲಿ, ಊರಿಗಾಗಲಿ ಕೆಟ್ಟ ಹೆಸರು ತಂದವರಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಟ್ಟಂಪಾಡಿ ಗ್ರಾ.ಪಂ ಅಧ್ಯಕ್ಷೆ ವಿದ್ಯಾಶ್ರೀ ಸರಳಿಕಾನ ಮಾತನಾಡಿ, ಶಾಲೆಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳು ಶೈಕ್ಷಣಿಕ, ಕ್ರೀಡಾ ಕ್ಷೇತ್ರಗಳ ಸಾಧನೆಯಲ್ಲಿ ಪೋಷಕರು, ಊರವರ ಸಹಕಾರ ಅಗತ್ಯ ಎಂದರು.
ಬೆಟ್ಟಂಪಾಡಿ ಗ್ರಾ.ಪಂ ಸದಸ್ಯೆ ಉಮಾವತಿ ಎಸ್. ಮಣಿಯಾಣಿ, ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಚೆಲ್ಯಡ್ಕ ಸಂದರ್ಭೋಚಿತವಾಗಿ ಮಾತನಾಡಿದರು.


ಸನ್ಮಾನ:
ಉಪ್ಪಳಿಗೆ ಸರಕಾರಿ ಪ್ರೌಢಶಾಲಾ ನಿವೃತ್ತ ಮುಖ್ಯಗುರು ನಾರಾಯಣ ಕೆ., ಸ.ಹಿ.ಪ್ರಾ ಶಾಲಾ ನಿವೃತ್ತ ಶಿಕ್ಷಕಿ ನಾಗರತ್ನ, ರಾಷ್ಟ್ರ ಮಟ್ಟದ ಎತ್ತರ ಜಿಗಿತದಲ್ಲಿ ಚಿನ್ನದ ಪದಕ ಪಡೆದ ಕೀರ್ತಿ ಹಾಗೂ ಶಿಕ್ಷಕ ದಾಮೋದರ ಸನ್ಮಾನಿಸಲಾಯಿತು. ಸರಕಾರಿ ಪ್ರೌಢಶಾಲೆಯಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಬಾಲಕರ ವಾಲಿಬಾಲ್ ಮತ್ತು ಬಾಲ್ ಬ್ಯಾಡ್ಮಿಂಟನ್ ಬಾಲಕರ ತಂಡ, ರಾಜ್ಯ ಮಟ್ಟದ ಎನ್.ಎಂ.ಎಂಎಸ್ ವಿದ್ಯಾರ್ಥಿ ವೇತನ ಆಯ್ಕೆಯಾದ ಯಶ್ವಿನ್ ಆಳ್ವ, ಯಶ್ವಿತ್ ಆಳ್ವ, ರಾಧಿಕಾ, ಇನ್ ಸ್ಪೈಯರ್ ಅವಾರ್ಡ್‌ಗೆ ಆಯ್ಕೆಯಾದ ಅಖಿಲೇಶ್, ಅಜಿತ್, ಕಬಡ್ಡಿಯಲ್ಲಿ ರಾಷ್ಟ್ರ ಮಟ್ಟದ ಸಾಧನೆಗಾಗಿ ಹೇಮಲತಾ, ವೈಟ್ ಲಿಪ್ಟಿಂಗ್ ಸಿಂಚನ, ಕಬಡ್ಡಿಯಲ್ಲಿ ವಿದ್ಯಾ ಭಾರತಿಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ನಿತ್ಯಶ್ರೀ, ಅಡುಗೆ ಸಿಬಂದಿಗಳಾದ ಮೊಹಿನಿ, ಪ್ರೇಮ, ಅರುಣಾ, ಚರಣ್‌ರಾಜ್, ಕವನ್, ಕಾರ್ತಿಕ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ಮತ್ತು ವಿಪತ್ತು ನಿರ್ವಹಣಾ ತಂಡದ ಸದಸ್ಯರನ್ನು ಗೌರವಿಸಲಾಯಿತು.


ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿಷ್ಣು ಯುವಕ ಮಂಡಲದ ಸ್ಥಾಪಕ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿದರು. ಹಿ.ಪ್ರಾ ಶಾಲಾ ಮುಖ್ಯಗುರು ಲಿಂಗಮ್ಮ ಹಗೂ ಪ್ರೌಢ ಶಾಲಾ ಮುಖ್ಯಗುರು ರಾಮಚಂದ್ರ ಕೆ., ಲಿಂಗಮ್ಮ ವರದಿ ವಾಚಿಸಿದರು. ಪ್ರಕಾಶ್ ರೈ ಬೈಲಾಡಿ ವಂದಿಸಿದರು. ಬಾಲಕೃಷ್ಣ ರೈ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು. ಹಿ,ಪ್ರಾ ಶಾಲಾ ಶಿಕ್ಷಕರಾದ ಪುಷ್ಪಾವತಿ, ವಾಣಿಶ್ರೀ, ಪ್ರೌಢಶಾಲಾ ಶಿಕ್ಷಕರಾದ ಸವಿತಾ, ಜಯಲತಾ, ವಿದ್ಯಾಲಕ್ಷ್ಮೀ, ಯುವಕ ಮಂಡಲದ ಸದಾಶಿವ ರೈ ಗುಮ್ಮಟೆಗದ್ದೆ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಹಿ.ಪ್ರಾ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಲೋಕನಾಥ ಆಚಾರ್ಯ, ಯುವಕ ಮಂಡಲದ ಅಧ್ಯಕ್ಷ ಶಿವಪ್ರಸಾದ್, ಸದಸ್ಯರಾದ ಪಮೋದ್ ಪೂಜಾರಿ, ಗಂಗಾಧರ ಆಳ್ವ, ಧನಂಜಯ ಉಪ್ಪಳಿಗೆ, ಜೀವನ್ ಯು., ಶ್ಯಾಮ್‌ಜಿತ್ ರೈ ಪಾಪನಡ್ಕ, ಪ್ರಮೋದ್ ಕುಮಾರ್ ರೈ, ಸದಾಶಿವ ರೈ, ಹರ್ಷಿತ್, ಮುರಳೀಧರ ರೈ ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅಮ್ಮ ಕಲಾವಿದೆರ್ ಕುಡ್ಲ ಇವರಿಂದ ಸುಂದರ್ ರೈ ಮಂದಾರ, ದೀಪಕ್ ರೈ ಪಾಣಾಜೆ ಅಭಿನಯದ ‘ಅಮ್ಮೆರ್’ ಎಂಬ ತುಳು ಹಾಸ್ಯಮಯ ನಾಟಕ ನಡೆಯಿತು. ವಿದ್ಯಾರ್ಥಿಗಳು, ಪೋಷಕರು, ಯುವಕ ಮಂಡಲದ ಸದಸ್ಯರು ಹಾಗೂ ಸಾರ್ವಜನಿಕರು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here