ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಬೆಳಗಲು ಸಾಂಸ್ಕೃತಿಕ ಚಟುವಟಿಕೆಗಳು ಅವಶ್ಯಕ: ಧನರಾಜ್ ಡಿ.ಆರ್.
ವಿಟ್ಲ: ಓದು ಬರಹದ ಜೊತೆಗೆ ಪಠ್ಯೇತರ ಚಟುಚಟಿಕೆಗೆ ಅವಕಾಶ ನೀಡುವುದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಬೆಳಗಲು ಸಾಂಸ್ಕೃತಿಕ ಚಟುವಟಿಕೆಗಳು ಅವಶ್ಯವೆಂದು ಶ್ರೀ ಶಾರದಾ ಪ್ರೌಢಶಾಲೆ, ಪಾಣೆಮಂಗಳೂರಿನ ಕನ್ನಡ ಪ್ರಾಧ್ಯಾಪಕ ಧನರಾಜ್ ಡಿ.ಆರ್. ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಅವರು ಕಡೇಶಿವಾಲಯ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಮತ್ತು ಶಾಲಾ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಕಡೇಶಿವಾಲಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭಾರತಿ ಯಸ್. ರಾವ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಮೇಲ್ವಿಚಾರಕಿ ಭವ್ಯ ಪಿ. ಶೈಕ್ಷಣಿಕ ವರ್ಷದ ವರದಿಯನ್ನು ವಾಚಿಸಿದರು. ಕಡೇಶಿವಾಲಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುರೇಶ ಕೆ., ಮಾಜಿ ಸದಸ್ಯರಾದ ಜಯ ಆರ್., ಆಶ್ರಮ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ವೀರಪ್ಪ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕಿ ವಿದ್ಯಾಕುಮಾರಿ ಎ, ಸ್ವಾಗತಿಸಿದರು. ಶಿಕ್ಷಕಿ ಯಶೋಧ ಯಸ್. ವಂದಿಸಿದರು. ಶಿಕ್ಷಕಿಯರಾದ ಧನಲಕ್ಷ್ಮೀ ಕೆ. ಮತ್ತು ಶ್ವೇತಾ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿ ವನಿತಾ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಬೋಧಕೇತರ ಸಿಬ್ಬಂದಿಗಳಾದ ಜಾನಕಿ, ಶೈಲಜಾ ಬಿ., ಶಾರದಾ, ದಿವ್ಯ ಸಹಕರಿಸಿದರು.