ನೇರ್ಲ ಶಾಲಾ ವಿವೇಕ ಕೊಠಡಿ ಉದ್ಘಾಟನೆ, ವಾರ್ಷಿಕೋತ್ಸವ

0

ಮಕ್ಕಳಿಗೆ ಪ್ರಾಥಮಿಕ ಹಂತದ ಶಿಕ್ಷಣವೇ ಪೌಂಡೇಶನ್; ಭಾಗೀರಥಿ ಮುರುಳ್ಯ

ನೆಲ್ಯಾಡಿ: ಇಚ್ಲಂಪಾಡಿ ಗ್ರಾಮದ ನೇರ್ಲ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯ ನೂತನ ವಿವೇಕ ಕೊಠಡಿ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವ ಡಿ.30ರಂದು ಶಾಲಾ ವಠಾರದಲ್ಲಿ ನಡೆಯಿತು.


ವಿವೇಕ ಕೊಠಡಿ ಉದ್ಘಾಟಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದ ಶಿಕ್ಷಣ ಅಡಿಪಾಯವಾಗಿದೆ. ಮಕ್ಕಳಿಗೆ ಒತ್ತಡದ ಶಿಕ್ಷಣದ ಬದಲು ಪ್ರೇರಣಾದಾಯಕ ಶಿಕ್ಷಣ ಸಿಗಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ತಮ್ಮ ಮನೆಯ ಹಿರಿಯರೇ ರೋಲ್ ಮಾಡೆಲ್ ಆಗಬೇಕು. ಅಜ್ಜ,ಅಜ್ಜಿ, ತಂದೆ,ತಾಯಿ ಬೆಳೆದು ಬಂದ ರೀತಿ, ಅವರ ಸಾಧನೆಗಳನ್ನು ತಿಳಿದುಕೊಳ್ಳಬೇಕೆಂದು ಹೇಳಿದರು.


ಸಭಾ ಕಾರ್ಯಕ್ರಮ ಉದ್ಘಾಟಿಸಿದ ಬೀಡುಬೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶುಭಕರ ಹೆಗ್ಗಡೆ ಅವರು ಮಾತನಾಡಿ, ಗುರುಕುಲ ಪದ್ಧತಿ ಶಿಕ್ಷಣ ಶಾಲಾ ಶಿಕ್ಷಣವಾಗಿ ಬದಲಾಗಿ ಈಗ ಮೊಬೈಲ್ ಶಿಕ್ಷಣದ ಸಾಗುತ್ತಿದೆ. ಮಗುವಿಗೆ ಪರಿಪೂರ್ಣವಾದ ಅರಿವು ಮೂಡಿಸಿ ಮುಂದಿನ ಬಾಳ್ವೆಯಲ್ಲಿ ಸುಖ ಶಾಂತಿ ಕಲ್ಪಿಸುವುದೇ ಶಿಕ್ಷಣ. ಈ ನಿಟ್ಟಿನಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ಎಂದರು. ಅಧ್ಯಕ್ಷತೆ ವಹಿಸಿದ್ದ ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಬಾಣಜಾಲುರವರು ಸಂದರ್ಭೋಚಿತವಾಗಿ ಮಾತನಾಡಿದರು.


ಮುಖ್ಯ ಅತಿಥಿಯಾಗಿದ್ದ ಇಚ್ಲಂಪಾಡಿ ಸಿರಿಯನ್ ಅರ್ಥೋಡಕ್ಸ್ ಚರ್ಚ್‌ನ ವಿಕಾರ್ ರೆ.ಫಾ.ತೋಮಸ್ ವರ್ಗೀಸ್, ತಾ.ಪಂ.ಮಾಜಿ ಅಧ್ಯಕ್ಷೆ ಕೆ.ಟಿ.ವಲ್ಸಮ್ಮ, ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಭಾಸ್ಕರ ಎಸ್.ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ತಿರುಮಲೇಶ್ವರ ಬಿ., ಸಿಆರ್‌ಪಿ ಗಣೇಶ್ ನಡುವಾಲ್‌ರವರು ಸಂದರ್ಭೋಚಿತವಾಗಿ ಮಾತನಾಡಿದರು. ಕೌಕ್ರಾಡಿ ಗ್ರಾ.ಪಂ.ಸದಸ್ಯರಾದ ಟಿ.ಎಂ.ಕುರಿಯಾಕೋಸ್, ದಿನೇಶ್ ಬರಮೇಲು, ರತ್ನಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಸಾಧಕ ವಿದ್ಯಾರ್ಥಿಗಳಾದ ಅಲೆಕ್ಸ್ ಜೋಸೆಫ್, ಮಧುಶ್ರೀ ಎಲ್., ಶಮಿತ್, ಶ್ರಾವ್ಯ, ಮನುಶ್ರೀ, ಚಿರಕ್ಷಾ, ನಿಕ್ಷಿತ್ ಡಿ.ಕೆ., ಸಾನ್ವಿ ಎಸ್.ಎಂ., ತನುಷಾ ಕೆ., ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಸುಜಾತ ಅವರು ಪ್ರೋತ್ಸಾಹಕ ನಗದು ಬಹುಮಾನ ನೀಡಿ ಗೌರವಿಸಿದರು.

ಸಾಧಕ ಹಿರಿಯ ವಿದ್ಯಾರ್ಥಿಗಳಾದ ಜೋಳಿ ಎ.ಎಂ., ಬ್ರದರ್ ಗಿ.ವರ್ಗೀಸ್ ಒಐಸಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ತಿರುಮಲೇಶ್ವರ ಬಿ, ರಾಜೇಶ್ ಕುಮಾರ್ ಬದನೆ, ಶಾಲಾ ಶಿಕ್ಷಕ ಡಾ.ಗಿರೀಶ್ ಎಚ್.ಎಂ., ಎಸ್‌ಡಿಎಂಸಿ ಅಧ್ಯಕ್ಷ ವಸಂತ ಬಿಜೇರು, ವಿನೋದ್ ಹಾಗೂ ಯಕ್ಷಗಾನ ಕಲಾವಿದ ಹರಿಪ್ರಸಾದ್ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕ ಸಂದೀಪ್ ಕುಮಾರ್ ಎಂ., ಅತಿಥಿ ಶಿಕ್ಷಕಿ ಅಥಿರಾ ಎಸ್.ನಾಯರ್ ಸನ್ಮಾನಿತರನ್ನು ಪರಿಚಯಿಸಿದರು.

ಶಾಸಕರಾಗಿ ಚುನಾಯಿತರಾದ ಬಳಿಕ ಮೊದಲ ಬಾರಿಗೆ ನೇರ್ಲ ಶಾಲೆಗೆ ಆಗಮಿಸಿದ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಸನ್ಮಾನಿಸಲಾಯಿತು.

ಬಹುಮಾನ ವಿತರಣೆ:
ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಹಿರಿಯ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ನಡೆದ ವಿವಿಧ ಕ್ರೀಡಾಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಹರೀಶ್ ಶೆಟ್ಟಿ ನೇರ್ಲ ಹಾಗೂ ವಾಣಿ ಅವರು ನಿರ್ವಹಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ನಡೆದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಾಗೂ ಕಲಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.


ಮುಖ್ಯ ಶಿಕ್ಷಕಿ ಜಯಶ್ರೀ ಎಸ್..ವರದಿ ಮಂಡಿಸಿದರು. ಶಿಕ್ಷಕಿ ಜಯ ಕೆ.,ಸ್ವಾಗತಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ವಸಂತ ಬಿಜೇರು ವಂದಿಸಿದರು. ಶಿಕ್ಷಕ ಡಾ| ಗಿರೀಶ್ ಎಚ್.ಎಂ. ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ನೇರ್ಲ ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿಗಳು, ಪೂರ್ವ ವಿದ್ಯಾರ್ಥಿಗಳು ಹಾಗೂ ಊರವರಿಂದ ಸಾಂಸ್ಕೃತಿಕ ವೈಭವ ನಡೆಯಿತು. ಜ್ಞಾನದೀಪ ಶಿಕ್ಷಕಿ ಸ್ಮೀತಾ ಎಂ.ವಿ., ಎಸ್‌ಡಿಎಂಸಿ ಸದಸ್ಯರು, ಪೋಷಕರು ವಿವಿಧ ರೀತಿಯಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here