ಪುತ್ತೂರು: ಬೆಳಂದೂರು ಈಡನ್ ಗ್ಲೋಬಲ್ ಶಾಲೆಯಲ್ಲಿ 2023-24ನೇ ಶೈಕ್ಷಣಿಕ ವರ್ಷದ ಕ್ರೀಡಾಕೂಟ ನಡೆಯಿತು. ಮಕ್ಕಳು ಪಥ ಸಂಚಲನದ ಮೂಲಕ ಚಾಲನೆ ನೀಡಿದರು. ವಿದ್ಯಾರ್ಥಿಗಳನ್ನು ನಾಲ್ಕು ತಂಡಗಳಾಗಿ ವಿಂಗಡಿಸಲಾಗಿತ್ತು. ಎಲೆಕ್ಟ್ರಮ್ ತಂಡದ ನಾಯಕನಾದ ಲುತಾಫ್, ಎಮರಾಲ್ಡ್ ತಂಡದ ನಾಯಕನಾದ ಮುಹಮ್ಮದ್ ಕೈಸ್, ಡೈಮಂಡ್ ತಂಡದ ನಾಯಕನಾದ ತಸ್ನಿಫ್, ನೇಕರ್ ತಂಡದ ನಾಯಕ ಮುಹಮ್ಮದ್ ಸುಹನ್ ತಮ್ಮ ತಂಡವನ್ನು ಮುನ್ನಡೆಸಿದರು.
ಅತಿಥಿಯಾಗಿ ಆಗಮಿಸಿದ ಅಂತರಾಷ್ಟ್ರೀಯ ಜವೆಲಿನ್ ವಿಜೇತ ಕ್ರೀಡಾಪಟು ಹಾಗೂ ಪ್ರಸ್ತುತ ರಿಸರ್ವ್ ಸಹಾಯಕ ಸಬ್ ಇನ್ಸ್ಪೆಕ್ಟರ್ ಜಿತೇಂದ್ರ ರೈ ಕೊಡಗು ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಶ್ರಫ್ ಶಾ ಮಾಂತೂರು ಧ್ವಜಾರೋಹಣ ನೆರವೇರಿಸಿದರು. ಪಾರಿವಾಳವನ್ನು ಹಾರಿಸುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಲಾಯಿತು. ಹಣ್ಣಿನ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆ ಮಹತ್ವ ಸಾರಲಾಯಿತು. ಜಿತೇಂದ್ರ ಎ.ಎಸ್.ಐ ಮಾತನಾಡಿ ಕ್ರೀಡೆಯು ಮಕ್ಕಳಲ್ಲಿ ಶಿಸ್ತು ಮತ್ತು ಆತ್ಮಸ್ಥೈರ್ಯ ತುಂಬುತ್ತದೆ, ಕ್ರೀಡೆಯು ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಸಂಕೇತವಾಗಿದೆ ಎಂದರು. ಜೀತೆಂದ್ರರವರ ಗೌರವಿಸಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಅಶ್ರಫ್ ಶಾ ಮಾಂತೂರು ಅಧ್ಯಕ್ಷೀಯ ಭಾಷಣ ಮಾಡಿದರು. ಆಡಳಿತ ಮಂಡಳಿಯ ಸದಸ್ಯರಾದ ಅಬ್ದುಲ್ ಖಾದರ್ ಹಾಜಿ, ಸವಣೂರು ಗ್ರಾ.ಪಂ ಸದಸ್ಯರಾದ ಅಬ್ದುಲ್ ರಜಾಕ್, ಅರೇಬಿಕ್ ವಿಭಾಗದ ಮುಖ್ಯಸ್ಥರಾದ ರಶೀದ್ ಸಖಾಫಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಓಟ, ಲಾಂಗ್ ಜಂಪ್, ಡಿಸ್ಕಸ್ ಥ್ರೋ, ಗುಂಡು ಎಸೆತ ಮತ್ತು ಜವೆಲಿನ್ ಥ್ರೋ ಮೊದಲಾದ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ವಿಜೇತ ಕ್ರೀಡಾಪಟುಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ದೈ.ಶಿ.ಶಿಕ್ಷಕಿ ಶ್ವೇತಾ ಕುಮಾರಿ ಕ್ರೀಡಾ ಧ್ವಜವನ್ನು ಪ್ರಾಂಶುಪಾಲರಿಗೆ ಹಸ್ತಾಂತರಿಸುವ ಮೂಲಕ ಕ್ರೀಡಾ ಕೂಟವೂ ಮುಕ್ತಾಯಗೊಂಡಿತು. ಶಿಕ್ಷಕಿಯರಾದ ಫಾತಿಮತ್ ಸನನ್ ಹಾಗೂ ಫಾಹಿಮಾ ಬಾನು ನಿರೂಪಿಸಿದರು.
ಪ್ರಾಂಶುಪಾಲ ರಂಝಿ ಮೊಹಮ್ಮದ್ ಸ್ವಾಗತಿಸಿದರು. ಸೋಫಿಯಾ ರೋಚ್ ವಂದಿಸಿದರು. ಎಲ್ಲಾ ಬೋಧಕ ಮತ್ತು ಬೋಧಕೇತರ ವೃಂದದವರು ಉಪಸ್ಥಿತರಿದ್ದರು.