ಕಾಣಿಯೂರು: ಬೆಳಂದೂರು ಫ್ರೆಂಡ್ಸ್ ಇದರ ವತಿಯಿಂದ ಆರು ತಂಡಗಳ ಲೀಗ್ ಮಾದರಿಯ ಬೆಳಂದೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ಡಿ 31 ರಂದು ಬೆಳಂದೂರು ಶಾಲಾ ಮೈದಾನದಲ್ಲಿ ನಡೆಯಿತು.
ಸುಪ್ರೀತ್ ಕುಮಾರ್ ಪಟ್ಲೆರ್ ಪಂದ್ಯಾಟವನ್ನು ಉದ್ಘಾಟಿಸಿದರು.ಕಲೀಲ್ ಮಾಲೀಕತ್ವದ ಇಚ್ಚ ಲಯನ್ಸ್ ಪಳ್ಳತ್ತಾರು ತಂಡವು ಚಾಂಪಿಯನ್ ಟ್ರೋಫಿ ತನ್ನದಾಗಿಸಿತು.ನಝೀರ್ ದೇವಸ್ಯ ಮಾಲಕತ್ವದ ರೈಸಿಂಗ್ ಸ್ಟಾರ್ ಬೆಳಂದೂರು ತಂಡವು ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟಿತು. ಉತ್ತಮ ಎಸೆತಗಾರ ಪ್ರಶಸ್ತಿ ಮುನೀರ್ ಪಳ್ಳತ್ತಾರು ಹಾಗೂ ಉತ್ತಮ ದಾಂಡಿಗ ಪ್ರಶಸ್ತಿ ಶಾಕಿರ್ ಬೆಳಂದೂರು ಪಡೆದುಕೊಂಡರು.
ನವಾಝ್ ಗುಂಡಿನಾರು,ಸಿದ್ದೀಕ್ ಪಳ್ಳತ್ತಾರು,ಶ್ರೀಧರ ಗೌಡ ಬನಾರಿ,ಇರ್ಷಾದ್ ಗುಂಡಿನಾರು,ಮರ್ಷಾದ್ ಗುಂಡಿನಾರು ಮೊದಲಾದವರು ಭಾಗವಹಿಸಿದ್ದರು. ಇಸ್ಮಾಯಿಲ್ ದೇವಸ್ಯ, ಶಾಫಿ ಕಟ್ಟತ್ತಾರು ತೀರ್ಪುಗಾರರಾಗಿ ಸಹಕರಿಸಿದರು.ರಝಾಕ್ ಅಂಕಜಾಲು,ಲತೀಫ್ ಗುಂಡಿನಾರು ವೀಕ್ಷಕ ವಿವರಣೆ ನೀಡಿದರು.