ಪುತ್ತೂರು: ಎಸ್ಕೆಎಸ್ಸೆಸ್ಸೆಫ್ ಕೊಳ್ತಿಗೆ ಶಾಖೆ ಇದರ 2023-24ನೇ ಮಹಾಸಭೆ ಡಿ.30ರಂದು ನಡೆಯಿತು.
ರಿನಾಝ್ ಕುಂಡಡ್ಕ ದುವಾ ನೆರವೇರಿಸಿದರು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಹಾಗೂ ಶಕೀಲ್ ಬೇರಿಕೆ ಆಗಮಿಸಿ ಸಂಘಟನೆಯ ಮಾಹಿತಿಗಳನ್ನು ನೀಡಿದರು. ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಮುಳುಕ್ಕಾಡ್, ಪ್ರ.ಕಾರ್ಯದರ್ಶಿಯಾಗಿ ಅಹ್ಮದ್ ಶುಹೈಬ್ ಎಕ್ಕಡ್ಕ, ಕೋಶಾಧಿಕಾರಿಯಾಗಿ ಶಾಫಿ ನೀಟಡ್ಕ, ಸಂಘಟನಾ ಕಾರ್ಯದರ್ಶಿಯಾಗಿ ನಾಸಿರ್ ಪೆರ್ಲಂಪಾಡಿ, ಉಪಾಧ್ಯಕ್ಷರುಗಳಾಗಿ ಶರೀಫ್ ಪೆರ್ಲಂಪಾಡಿ ಹಾಗೂ ಶಾಫಿ ಕೆ.ಕೆ, ಜೊತೆ ಕಾರ್ಯದರ್ಶಿಗಳಾಗಿ ಇರ್ಷಾದ್ ಪೆರ್ಲಂಪಾಡಿ ಹಾಗೂ ಮುಝಮ್ಮಿಲ್ ಎಕ್ಕಡ್ಕ, ಇಬಾದ್ ಕಾರ್ಯದರ್ಶಿಯಾಗಿ ರಿನಾಝ್ ಕುಂಡಡ್ಕ, ಟ್ರೆಂಡ್ ಕಾರ್ಯದರ್ಶಿಯಾಗಿ ಝಿಯಾದ್ ದಾಸರಮೂಲೆ, ವಿಖಾಯ ಕಾರ್ಯದರ್ಶಿಯಾಗಿ ಝೈದ್ ದಾಸರಮೂಲೆ, ಸರ್ಗಲಯ ಕಾರ್ಯದರ್ಶಿಯಾಗಿ ಅತೀಕುರ್ರಹ್ಮಾನ್, ಕ್ಯಾಂಪಸ್ ವಿಂಗ್ ಕಾರ್ಯದರ್ಶಿಯಾಗಿ ಶೈಫಾದ್ ಬೈಲೋಡಿ, ಎಜುಕೇಟರ್ ಆಗಿ ಸ್ವಾದಿಕ್ ನೀಟಡ್ಕ ಆಯ್ಕೆಯಾದರು. ಕಾರ್ಯಕಾರಿ ಸಮಿತಿಗೆ ಅಬ್ದುಲ್ಲಾ ಮುಸ್ಲಿಯಾರ್ ಹಾಗೂ ಕೌನ್ಸಿಲರ್ಗಳಾಗಿ ನಾಸಿರ್ ಪೆರ್ಲಂಪಾಡಿ, ಝಿಯಾದ್ ದಾಸರಮೂಲೆ, ಹರ್ಷದ್ ಪೆರ್ಲಂಪಾಡಿ ಇವರನ್ನು ಆಯ್ಕೆ ಮಾಡಲಾಯಿತು.ಶುಹೈಬ್ ಎಕ್ಕಡ್ಕ ಸ್ವಾಗತಿಸಿದರು.