ಕಲ್ಪಡ ಕೊಡಿಯಾಲ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್‌ನಿಂದ ಮ್ಯಾಟ್ ಕಬಡ್ಡಿ ಪಂದ್ಯಾಟ-ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ, ಅಭಿನಂದನಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ

0

ಜಯಸೂರ್ಯ ರೈ ಮಾದೋಡಿ, ತುಕರಾಂ ಏನೆಕಲ್‌ರವರಿಗೆ ನಮ್ಮೂರ ರತ್ನ ಪ್ರಶಸ್ತಿ ಪ್ರದಾನ

ಕಾಣಿಯೂರು: ಹುಟ್ಟು ಸಾವಿನ ಮಧ್ಯೆ ನಾವು ಒಳ್ಳೆಯ ಗುಣಗಳೇ ಶಾಸ್ವತವಾಗಿ ಉಳಿಯಲು ಸಾಧ್ಯ. ಮಾನವ ಜನ್ಮಕ್ಕೆ ಬಂದ ನಾವು ಇರುವುಷ್ಟು ದಿನ ಹೇಗೆ ಬದುಕಿದ್ದೇವೆ ಎನ್ನುವುದು ಶ್ರೇಷ್ಠವಾಗಿರುತ್ತದೆ. ಶಿಕ್ಷಣವಿದ್ದಾಗ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡಬೇಕಾಗುತ್ತದೆ ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ಕಾಣಿಯೂರು ಕಲ್ಪಡ ಕೊಡಿಯಾಲ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ ವತಿಯಿಂದ ಮೂವಪ್ಪೆ ಸ.ಕಿ.ಪ್ರಾ.ಶಾಲಾ ಕ್ರೀಡಾಂಗಣದಲ್ಲಿ ನಡೆದ ಪುರುಷರ 62ಕೆ.ಜಿ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಲ್ಪಡ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್‌ನ ಅಧ್ಯಕ್ಷ ಸುಬ್ರಹ್ಮಣ್ಯ ಕೆ.ಎಂ.ಕಲ್ಪಡ ಮಾತನಾಡಿ, ಪಂದ್ಯಾಟದಲ್ಲಿ ಭಾಗವಹಿಸುವ ಆಟಗಾರರಿಗೆ ಶಿಸ್ತು, ಸಮಯ ಪಾಲನೆ ಅತೀ ಅಗತ್ಯ. ಸಮಯಕ್ಕೆ ಸರಿಯಾಗಿ ಆಟಗಾರರು ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ಪಂದ್ಯಾಟ ಆಯೋಜಕರಿಗೂ ಉತ್ತಮವಾಗಿ ಕಾರ್ಯಕ್ರಮ ಸಂಯೋಜನೆ ಮಾಡಲು ಅನುಕೂಲವಾಗುತ್ತದೆ ಎಂದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರಧ್ವಾಜ್ ಸುಳ್ಯ, ರಾಷ್ಟ್ರ ಪ್ರಶಸ್ತಿ ಪುರಸ್ಕೃತರು, ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಕೆ.ಆರ್.ಗಂಗಾಧರ, ಕೊಡಿಯಾಲ ಗ್ರಾ.ಪಂ.ಅಧ್ಯಕ್ಷ ಹರ್ಷನ್ ಕೆ.ಟಿ, ಕೊಡಿಯಾಲ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್, ಪುಣ್ಚತ್ತಾರು ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಹರೀಶ್ ಪೈಕ ಕಟೀಲ್, ಮೂವಪ್ಪೆ ಸ.ಕಿ.ಪ್ರಾ.ಶಾಲೆಯ ಮುಖ್ಯಶಿಕ್ಷಕಿ ನಿರ್ಮಲ ಕೆ.ಎನ್ ಶುಭಹಾರೈಸಿದರು. ಶೃತಿ ಸ್ವಾಗತಿಸಿ, ಕೊಡಿಯಾಲ ಗ್ರಾ.ಪಂ.ಅಧ್ಯಕ್ಷರು, ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್‌ನ ಕಾರ್ಯದರ್ಶಿ ಹರ್ಷನ್ ಕೆ.ಟಿ, ವಂದಿಸಿದರು. ಶಿಕ್ಷಕ ಗಣೇಶ್ ನಡುವಾಲ್ ಕಾರ್ಯಕ್ರಮ ನಿರೂಪಿಸಿದರು.


ನಮ್ಮೂರ ರತ್ನ ಪ್ರಶಸ್ತಿ ಪ್ರದಾನ:
ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿಯವರಿಗೆ ಶಿಕ್ಷಣ ಕ್ಷೇತ್ರದ ಸಾಧನೆಗೆ ಮತ್ತು ಸುಬ್ರಹ್ಮಣ್ಯ ಕೆ.ಎಸ್.ಎಸ್,ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ತುಕರಾಂ ಏನೆಕಲ್‌ರವರಿಗೆ ಕ್ರೀಡಾ ಕ್ಷೇತ್ರದ ಸಾಧನೆಗೆ ಜೀವಮಾನ ಸಾಧನಾ ಪ್ರಶಸ್ತಿ ನಮ್ಮೂರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಸನ್ಮಾನ: ಭಾರತೀಯ ಸೇನೆಯ ನಿವೃತ್ತ ಸೈನಿಕ ಲೋಕೇಶ್ ಕಂಡೂರು, ಸಹಕಾರ ಕ್ಷೇತ್ರದ ನಿವೃತ್ತರಾದ ಈಶ್ವರ ಆಳ್ವ, ಕಾಣಿಯೂರು ರಾಶಿ ಕಾಂಪ್ಲೆಕ್ಸ್ ಮಾಲಕರು, ಉದ್ಯಮಿ ಚಂದ್ರಶೇಖರ ಬರೆಪ್ಪಾಡಿ, ಪ್ರಗತಿಪರ ಕೃಷಿಕ ಪ್ರಶಾಂತ್ ಆದಿ ಮುರುಳ್ಯ, ಸಹಕಾರ ಕ್ಷೇತ್ರದ ನಿವೃತ್ತರಾದ ಆನಂದ ನಾಯಕ್ ಕೊಡಿಯಾಲ, ರಾಜ್ಯ ಮಟ್ಟದ ಕ್ರೀಡಾಪಟು ಚರೀಷ್ಮಾ ಕಡಬ, ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಉತ್ತಮ್ ಗುಂಡಿಗದ್ದೆ, ಗ್ರಾಮೀಣ ಕ್ರೀಡಾ ಸಾಧಕಿ ವಿಜಯ ಕುಮಾರಿ ಪೊಟ್ರೆ, ರಾಷ್ಟ್ರ ಮಟ್ಟದ ಯೋಗ ಪಟು ಪ್ರಣಮ್ಯ ಅಗಳಿ ಪರವಾಗಿ ಅವರ ತಾಯಿ ಅಂತರಾಷ್ಟ್ರೀಯ ಯೋಗ ತರಬೇತುದಾರರಾದ ಹೇಮಚಂದ್ರಹಾಸ ಅಗಳಿ ಮತ್ತು ಮಂಗಳೂರು ಶ್ರೀನಿವಾಸ ವಿಶ್ವವಿದ್ಯಾನಿಲಯದ ಸಂಶೋಧನ ಪ್ರಾಚಾರ್ಯರಾದ ದೇವಿಪ್ರಸಾದ್ ಪೈ ಬಾಚೋಡಿ ಅವರ ಸಹೋದರ ಅಶೋಕ್ ಪೈ ಸನ್ಮಾನ ಸ್ವೀಕರಿಸಿದರು.


ಅಭಿನಂದನೆ: ಕೆ.ಎಸ್.ಆರ್.ಟಿ ಉದ್ಯೋಗಿ ಲಿಂಗಪ್ಪ ಅನಿಲ, ಕೆ.ಎಸ್.ಆರ್.ಟಿ ಉದ್ಯೋಗಿ ನವೀನ್‌ಚಂದ್ರ ಪೆರ್ಲೋಡಿ, ನಾಟಿ ವೈದ್ಯರಾದ ದಿನೇಶ್ ಮಾಳ, ಭತ್ತ ವ್ಯವಸಾಯಗಾರ ದೇವಣ್ಣ ಗೌಡ ಕಲ್ಪಡ, ಮೆಸ್ಕಾಂ ಉದ್ಯೋಗಿ ಭವಿತ್ ಖಂಡಿಗ, ಕೊಡಿಯಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಣಾಧಿಕಾರಿ ರೇಷ್ಮಾ, ಆಶಾ ಕಾರ್ಯಕರ್ತೆಯರಾದ ರಾಜೀವಿ ನಾಯಕ್, ಚಂದ್ರಾವತಿ, ರತ್ನಾವತಿ ಅವರನ್ನು ಅಭಿನಂದಿಸಲಾಯಿತು.
ಪ್ರತಿಭಾ ಪುರಸ್ಕಾರ: ಪದವಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಅನುಷಾ ಎ.ಸಿ ಶ್ರೇಯಾ ಅಗಳಿ, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಯಶೋದ ಕಣಿಲೆಗುಂಡಿ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಭವಿಷ್ಯ, ಗ್ರಾಮೀಣ ಕ್ರೀಡಾ ಸಾಧಕರಾದ ಕಾರ್ತಿಕ್ ಕಲ್ಪಡ, ಧನಲಕ್ಷ್ಮೀ ಅವರಿಗೆ ಪ್ರತಿಭಾ ಪುರಸ್ಕಾರ ನಡೆಯಿತು.

LEAVE A REPLY

Please enter your comment!
Please enter your name here