ಪುರುಷರಕಟ್ಟೆ: ಬಿಂದು ಸಂಸ್ಥೆ ಔಟ್‌ಲೆಟ್ ವಿಂದು ವಿ ಸ್ಟೋರ‍್ಸ್ ಶುಭಾರಂಭ

0

ಪುತ್ತೂರು: ಪ್ರತಿಷ್ಠಿತ ಬಿಂದು ಸಂಸ್ಥೆಯ ಎಲ್ಲಾ ಉತ್ಪನ್ನಗಳ ಔಟ್ ಲೆಟ್ ಮತ್ತು ವಿಂದು ವಿ ಸ್ಟೋರ್ & ಡಿಸ್ಟ್ರಿಬ್ಯೂಟರ್‌ನ್ನು ಜ.1ರಂದು ಪುರುಷರಕಟ್ಟೆಯಲ್ಲಿ ಶುಭಾರಂಭಗೊಂಡಿತು.


ಶಂಕರ್ ಗ್ರೂಪ್ ಆಫ್ ಕಂಪನಿಯ ಆಡಳಿತ ನಿರ್ದೇಶಕ ಸತ್ಯಶಂಕರ್ ಹಾಗೂ ರಂಜಿತಾ ಶಂಕರ್ ದಂಪತಿ ಮಳಿಗೆಯನ್ನು ದೀಪ ಬೆಳಗಿಸಿ, ಉದ್ಘಾಟಿಸಿದರು. ಮೀನಾಕ್ಷಿ ಮೋಹನ್ ಬೆಂಗಳೂರು, ದೀಪಕ್ ರಾಜ್ ಬೆಂಗಳೂರು , ದಿವ್ಯ ದೀಪಕ್‌ರಾಜ್ ಬೆಂಗಳೂರು, ರಾಜೀವಿ ರಾಮಚಂದ್ರ ಪುರುಷ ಸರಸ್ವತಿ ನಿಲಯ ಸುರುಳಿಮಜಲು, ಚಿದಾನಂದ ಎಂ, ನರಿಮೊಗರು ಗ್ರಾ. ಪಂ. ಉಪಾಧ್ಯಕ್ಷ ಉಮೇಶ್ ಇಂದಿರಾನಗರ, ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಡಿ, ಕಾರ್ಯನಿರ್ವಹಣಾಧಿಕಾರಿ ಮಧುಕರ್ ಆಚಾರ್ಯ ಹಿಂದಾರು, ನಿರ್ದೇಶಕ ಪರಮೇಶ್ವರ ಭಂಡಾರಿ, ಕೆ.ಎಸ್ ಬಲ್ಯಾಯ ಮಾಯಾಂಗಳ, ಪಾಸಿ ಸೋಪ್ ಇಂಡಸ್ಟ್ರೀ ಮಾಲಕ ಬಿ.ಕೆ ಶ್ರೀನಿವಾಸ್ ರಾವ್, ಆಟೋ ಚಾಲಕ ಮಾಲಕರ ಸಂಘದ ಗೌರವ ಅಧ್ಯಕ್ಷ ಬೇಬಿ ಜಾನ್ ಕೂಡುರಸ್ತೆ, ಪ್ರಗತಿ ಪರ ಕೃಷಿಕ ಶರತ್ ಚಂದ್ರ ಬೈಪಾಡಿತಾಯ ಬಜಪ್ಪಳ, ಸಲೀಂ ಮಾಯಾಂಗಳ, ಶಶಿಧರ್ ವಿ.ಎನ್., ಮುರಳೀಧರ ಸುವರ್ಣ, ವಿಠ್ಠಲ್ ಜೋಗಿ, ಭರತ್ ಗೌಡ, ಗಿರಿಯಪ್ಪ ಗೌಡ, ಗಂಗಾಧರ್ ಜೋಗಿ ಮುಗೇರಡಡ್ಕ, ಕಾವೇರಿ ಜೋಗಿ, ವಸಂತ್ ಪೂಜಾರಿ ಮಾಯಾಂಗಳ, ಶರೀಫ್ ಪುರುಷರಕಟ್ಟೆ, ಹರೀಶ್ ಮಾಯಂಗಳ, ಗಣೇಶ್ ಪುರುಷ ಮಾಯಂಗಳ, ಅಬ್ಬಾಸ್ ಸುಪಾರಿ ಮರ್ಚೆಂಟ್ ಪುರುಷರಕಟ್ಟೆ, ಪ್ರಕಾಶನಾರಾಯಣ, ಲಕ್ಷ್ಮೀನಾರಾಯಣ ಮೆಲ್ಪಾಡಿ, ಲೋಕೇಶ್ ಪೂಜಾರಿ, ಗಂಗಾಧರ್ ಆಚಾರ್ಯ, ಸಂದೀಪ್, ಜಯರಾಮ್, ಕುಶಾಲಪ್ಪ ಗೌಡ, ಆನಂದ ಪೂಜಾರಿ, ಮುರಳೀಧರ ಭಟ್, ಜಮಾಲ್, ಸಲೀಂ, ವೇಣುಗೋಪಾಲ್, ನವೀನ್ ಗೌಡ, ವೇಣುಗೋಪಾಲ್ ಪಿ.ಸಿ, ಸರೋಜ ಸೀತಾರಾಮ ಗೌಡ ಮೆಲ್ಪಾಡಿ, ಸತೀಶ್ ಪ್ರಭು ಬಜಪ್ಪಲ, ಸಂದ್ಯಾ ಪ್ರಭು ಬಜಪ್ಪಳ, ಸುನಿಲ್ ಕೆ.ಎಸ್, ಶ್ರೀನಿವಾಸ್ ಸೇರಿದಂತೆ ಹಲವು ಮಂದಿ ಗಣ್ಯರು, ಗ್ರಾಹಕರು ಆಗಮಿಸಿ ಶುಭಹಾರೈಸಿದರು.


ಬಿಂದು ಸಂಸ್ಥೆ ಎಲ್ಲಾ ಉತ್ಪನ್ನಗಳ ಔಟ್‌ಲೆಟ್ ಪ್ರಥಮ ಬಾರಿಗೆ ಪುರುಷರಕಟ್ಟೆಯಲ್ಲಿ ಪ್ರಾರಂಭಗೊಂಡಿದೆ. ಆರೋಗ್ಯದಾಯಕ ರುಚಿಕರವಾದ ವಿವಿದ ರೀತಿಯ ತಾಜಾ ಹಣ್ಣಿನಿಂದ ತಯಾರಾದ ಮಳಿಗೆಯಲ್ಲಿ ಬಿಂದು ಕಂಪನಿಯ ಉತ್ಪನ್ನಗಳಾದ ಫಿಝಾ ಜೀರಾ ಮಸಾಲ, ಬಿ.ಹಾಟ್, ಸಿಪ್ಪಾನ್,ಸಿಪ್ಪಾನ್ ಟೆಟ್ರಾಪ್ಯಾಕ್, ಜಿಂಜರ್ ಮಸಾಲ, ನೀರು, ಸೋಡಾ ಮೊದಲಾದ ಪಾನೀಯಗಳು, ಲಿಮೋನೆಸ್ಟ್, ಸ್ನ್ಯಾಕ್ ಅಪ್ ಮತ್ತು ನೆಮ್ಕೀನ್ಸ್, ಸ್ನ್ಯಾಕ್ ಅಪ್ ಮತ್ತು ಪೊಟೆಟೋ ಚಿಪ್ಸ್ ಗಳು ಸೇರಿದಂತೆ ಎಲ್ಲಾ ರೀತಿಯ ಉತ್ಪನ್ನಗಳು ಲಭ್ಯವಿದೆ. ಮುಕ್ವೆ, ನರಿಮೊಗರು, ಶಾಂತಿಗೋಡು, ಅನಡ್ಕ, ಕೂಡುರಸ್ತೆ, ಇಂದಿರಾನಗರ, ಪುರುಷರಕಟ್ಟೆಯ ಗ್ರಾಹಕರಿಗೆ ಅನುಕೂಲಕರವಾಗಲಿದೆ ಎಂದು ಪ್ರಾಂಚೈಸಿ ಮಾಲಾಕ ವಿಶ್ವನಾಥ್ ಪುರುಷರಕಟ್ಟೆ ತಿಳಿಸಿದ್ದಾರೆ. ಮ್ಹಾಲಕ ವಿಶ್ವನಾಥ ಅವರ ಪತ್ನಿ ಲಾವಣ್ಯ ವಿಶ್ವನಾಥ್, ಪುತ್ರ ವಿನು ಕುಮಾರ್, ಪುತ್ರಿ ಧನ್ವಿ, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here