ಸೆಲ್ಕೋ ಸೋಲಾರ್, ಆರ್ಯಾಪು ಗ್ರಾ.ಪಂನ ಸಹಭಾಗಿತ್ವದಲ್ಲಿ ಕೊಡುಗೆ
ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ಹಾಗೂ ಸೆಲ್ಕೋ ಸೋಲಾರ್ ಸಂಸ್ಥೆಯ ವತಿಯಿಂದ ರೂ.1.80ಲಕ್ಷ ವೆಚ್ಚದಲ್ಲಿ ಕುಂಜೂರುಪಂಜ ಹಿ.ಪ್ರಾ ಶಾಲೆಗೆ ಕೊಡುಗೆಯಾಗಿ ನೀಡಿದ ಸ್ಮಾರ್ಟ್ ಕ್ಲಾಸ್ ಹಾಗೂ ಸೋಲಾರ್ ಸಿಸ್ಟಮ್ ಉದ್ಘಾಟನೆ ಜ.4ರಂದು ನಡೆಯಿತು.
ಸ್ಮಾರ್ಟ್ ಕ್ಲಾಸ್ ನ್ನು ಉದ್ಘಾಟಿಸಿದ ಆರ್ಯಾಪು ಗ್ರಾ.ಪಂ ಪಿಡಿಓ ನಾಗೇಶ್ ಎಂ. ಮಾತನಾಡಿ, ಸೆಲ್ಕೊ ಸಂಸ್ಥೆಯ ಸಹಭಾಗಿತ್ವದಲ್ಲಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಒದಗಿಸಿದ ಆರ್ಯಾಪು ಏಕೈಕ ಗ್ರಾಮ ಪಂಚಾಯತ್ ಆಗಿದೆ. ಇದೀಗ ಎರಡನೇ ಶಾಲೆಗೆ ಸ್ಮಾರ್ಟ್ ಕ್ಲಾಸ್ ನ ಕೊಡುಗೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪಂಚಾಯತ್ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೂ ನೀಡಲಾಗುವುದು. ಅಂಗನವಾಡಿಗಳಿಗೆ ಜಾರುಬಂಡಿಯನ್ನು ನಿರ್ಮಿಸಿಕೊಡಲಾಗುವುದು ಎಂದರು.
ಸೆಲ್ಕೋ ಸೋಲಾರ್ ನ ಪುತ್ತೂರು ಶಾಖಾ ವ್ಯವಸ್ಥಾಪಕ ಸುಧಾಕರ ಆಳ್ವ ಮಾತನಾಡಿ, ದ.ಕ ಜಿಲ್ಲೆಯಲ್ಲಿಯೇ ಆರ್ಯಾಪು ನಲ್ಲಿ ಪಂಚಾಯತ್ ಮೂಲಕ ಪ್ರಥಮವಾಗಿ ಸ್ಮಾರ್ಟ್ ಕ್ಲಾಸ್ ಒದಗಿಸಲಾಗಿದೆ. ಇದರಲ್ಲಿ ಒಂದನೇ ತರಗತಿಯಿಂದ ಪಿಯುಸಿ ತನಕದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾದ ವಿಷಯಗಳಿವೆ. ಪ್ರತಿಷ್ಠಿತ ಖಾಸಗಿ ಶಾಲಾ ವಿದ್ಯಾರ್ಥಿಗಳಂತೆ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೂ ಶಿಕ್ಷಣಕ್ಕೆ ಅನುಕೂಲವಿದೆ. ಸರಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ಸೌಲಭ್ಯ ಒದಗಿಸಲಾಗುತ್ತಿದೆ. ಎನೆಲ್ಲಾ ಚಟುವಟಿಕೆಗಳಾಗಿದೆ ಎಂದು ಪ್ರತಿದಿನ ಇದರಲ್ಲಿ ದಾಖಲಾಗುತ್ತಿದ್ದು ಶಿಕ್ಷಕರು ಸದುಪಯೋಗ ಪಡಿಸಿಕೊಳ್ಳುವಂತೆ ಅವರು ವಿನಂತಿಸಿದರು.
ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ ಅಧ್ಯಕ್ಷತೆ ವಹಿಸಿದ್ದರು. ಸೆಲ್ಕೋ ಸಂಸ್ಥೆಯ ಸೇಲ್ಸ್ ಎಕ್ಸಿಕ್ಯುಟಿವ್ ರೋಶನ್, ಆರ್ಯಾಪು ಗ್ರಾ.ಪಂ ಸದಸ್ಯರಾದ ಸರಸ್ವತಿ, ವಸಂತ ಶ್ರೀದುರ್ಗಾ, ಎಸ್.ಡಿಎಂಸಿ ಅಧ್ಯಕ್ಷ ಶ್ರೀಧರ ನಾಯ್ಕ್, ಉಪಾಧ್ಯಕ್ಷೆ ಕುಸುಮಾವತಿ, ಶಾಲಾ ನಾಯಕಿ ಶ್ರಾವ್ಯ ಎಸ್, ಎಸ್.ಡಿ.ಎಂ.ಸಿ ಮಾಜಿ ಸದಸ್ಯ ಕ್ಷ ಗೋಪಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಶಾಲೆಗೆ ಸ್ಮಾರ್ಟ್ ಕ್ಲಾಸ್ ಒದಗಿಸಿಕೊಟ್ಟ ಸೆಲ್ಕೋ ಸೋಲಾರ್ ಸಂಸ್ಥೆಯ ಪುತ್ತೂರು ಶಾಖಾ ವ್ಯವಸ್ಥಾಪಕ ಸುಧಾಕರ ಆಳ್ವ, ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯಗುರು ಇಂದಿರಾ ಕೆ.ಸ್ವಾಗತಿಸಿದರು. ಶಿಕ್ಷಕರಾದ ಸೌಮ್ಯ,ಕಲ್ಪನಾ ಕಾರ್ಯಕ್ರಮ ನಿರೂಪಿಸಿದರು. ಮೋನಿಕಾ ಡಿ ವಂದಿಸಿದರು. ಧನ್ಯಶ್ರೀ ಸಹಕರಿಸಿದರು.