ಪುತ್ತೂರು: ಪ್ರಧಾನಮಂತ್ರಿ ಸ್ವ ನಿಧಿ ಯೋಜನೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಕಿರು ಸಾಲ ಸೌಲಭ್ಯ ಪಡೆದ ಎಲ್ಲಾ ಬೀದಿ ಬದಿ ವ್ಯಾಪಾರಿಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಿ ಆಯ್ಕೆಯಾದ ಫಲಾನುಭವಿಗಳಿಗೆ ಸ್ವ ನಿಧಿಯಿಂದ ಸಮೃದ್ಧಿ ಮೇಳ ಮತ್ತು ಮೈ ಬೀ ಡಿಜಿಟಲ್ ಕ್ಯಾಂಪ್ ಜ.5ರಂದು ಪುತ್ತೂರು ನಗರಸಭೆ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾ ಕೌಶಲ್ಯ ಅಭಿಯಾನ ವ್ಯವಸ್ಥಾಪಕಿ ಐರಿನ್ ರೆಬೆಲ್ಲೊ ಗಿಡಕ್ಕೆ ನೀರು ಎರೆಯುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಬ್ಯಾಂಕ್ ಆಫ್ ಬರೋಡಾದ ದರ್ಬೆ ಶಾಖೆಯ ಮ್ಯಾನೇಜರ್ ಸಿದ್ದಿಕ್ ಯೋಜನೆಗಳ ಕುರಿತು ವಿವಿಧ ಮಾಹಿತಿ ನೀಡಿದರು. ನಗರಸಭೆ ಸಮುದಾಯ ಸಂಘಟಕ ಕರುಣಾಕರ್ ವಿ ಕಾರ್ಯಕ್ರಮ ನಿರ್ವಹಿಸಿದರು. ಸಭೆಯಲ್ಲಿ ಮೇಳಕ್ಕೆ ಸಂಬಂಧಿಸಿ ಯೋಜನೆಗಳಿಗೆ ಆಯ್ಕೆಯಾದ ಫಲಾನುಭವಿಗಳು ಮತ್ತು ಕುಟುಂಬದ ಸದಸ್ಯರಿಗೆ ವಿವಿಧ ಮಾಹಿತಿ ನೀಡಲಾಯಿತು.