ಗ್ರಾಮದ ಮಹಿಳೆಯರು ಇಂದು ಸ್ವಾವಲಂಬನೆ ಜೀವನವನ್ನು ನಡೆಸುವಂತಾಗಿದೆ: ಪುನೀತ್ ಮಾಡತ್ತಾರ್
ವಿಟ್ಲ: ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ನಲ್ಲಿ ಗ್ರಾ.ಪಂ. ಅಧ್ಯಕ್ಷರಾದ ಪುನೀತ್ ಮಾಡತ್ತಾರ್ ರವರ ಅಧ್ಯಕ್ಷತೆಯಲ್ಲಿ ಮಹಿಳಾ ವಿಶೇಷ ಗ್ರಾಮ ಸಭೆಯು ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುನೀತ್ ಮಾಡತ್ತಾರ್ ರವರು ಮಾತನಾಡಿ ಇಂದಿನ ದಿನಗಳಲ್ಲಿ ಮಹಿಳೆಯರು ಅಬಲೆಯರಲ್ಲ ಸಬಲೆಯರಾಗಿ ಪ್ರತಿಯೊಂದೂ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದೇ ರೀತಿ ನಮ್ಮ ಗ್ರಾಮದ ಮಹಿಳೆಯರು ಸ್ವಾವಲಂಬನೆ ಜೀವನವನ್ನು ಪ್ರಾರಂಬಿಸಿ ಗ್ರಾಮ ಅಭಿವೃದ್ಧಿ ಕಾರ್ಯದಲ್ಲಿ ಕೈ ಜೊಡಿಸುತ್ತಿರುವುದು ಶ್ಲಾಘನೀಯ ಎಂದರು. ವಿಟ್ಲ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಗೋವಿಂದ ದೊಡ್ಡೆಮಣಿರವರು ಬಾಲ್ಯವಿವಾಹ ಕಾಯ್ದೆ, ಕೌಟುಂಬಿಕ ದೌರ್ಜನ್ಯ, ಬಾಲಕಾರ್ಮಿಕತೆ, ಲೈಂಗಿಕ ದೌರ್ಜನ್ಯ ಕಾಯ್ದೆಯ ಬಗ್ಗೆ ಮಾಹಿತಿ ನೀಡಿದರು. ಪೋಷಣ ಅಭಿಯಾನ ಸಂಯೋಜಕರಾದ ವಿನೀತಾ ಪೈ ರವರು ಮಹಿಳೆಯರಿಗೆ ಗ್ರಾಮ ಪಂಚಾಯತಿಯ ವಿವಿಧ ಯೋಜನೆಗಳು , ರಾಜ್ಯ ಹಾಗೂ ಕೇಂದ್ರ ಸರಕಾರದ ಯೊಜನೆಗಳ ಮಾಹಿತಿಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯ ನಾಟಿವೈದ್ಯೆಯಾದ ಗಿರಿಜಾ ಡೆಚ್ಚಾರ್ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನಿರ್ವಹಿಸಿದ ಮಹಿಳಾ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ತಾಲೂಕು ಸಂಯೋಜಕರಾದ ಅಲ್ಲಾಭಕ್ಷ ರವರು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯತ್ ಸದಸ್ಯರಾದ ಮಹಾಬಲೇಶ್ವರ ಭಟ್ , ಪ್ರೇಮಲತಾ ಪಟ್ಲ, ಚಂದ್ರಾವತಿ , ಅಂಗನವಾಡಿ ಹಿರಿಯ ಮೇಲ್ವಿಚಾರಕಿ ರೂಪಕಲಾ , ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ಸಂಜಯ್, ಅಂಗನವಾಡಿ ಕಾರ್ಯಕರ್ತೆಯರು , ಆಶಾ ಕಾರ್ಯಕರ್ತೆಯರು , ಸಂಜೀವಿನೀ ಒಕ್ಕೋಟದವರು ಹಾಗೂ ಪಂಚಾಯತ್ ಸಿಬಂದಿಗಳು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಜಯ ಕೆ ಸ್ವಾಗತಿಸಿ ವಂದಿಸಿದರು.