ನೆಲ್ಯಾಡಿ: ಇಂಟೆಕ್ಸ್ಚರ್ ಪ್ಲಸ್ ತರಬೇತಿ ಕೇಂದ್ರ ಶುಭಾರಂಭ

0

ನೆಲ್ಯಾಡಿ: ಫ್ಯಾಶನ್ ಡಿಸೈನ್, ಇಂಟಿರೀಯರ್ ಡಿಸೈನ್, ಗ್ರಾಫಿಕ್ ಡಿಸೈನ್ ಹಾಗೂ ಕಂಪ್ಯೂಟರ್ ಅಪ್ಲಿಕೇಷನ್ಸ್ ತರಬೇತಿ ಕೇಂದ್ರ ನೆಲ್ಯಾಡಿ ಡಿಯೋನ್ ಸ್ಕ್ವೇರ್‌ನ 2ನೇ ಮಹಡಿಯಲ್ಲಿ ಜ.5ರಂದು ಶುಭಾರಂಭಗೊಂಡಿತು.

ದಕ್ಷಿಣ ಕನ್ನಡ ಜಿಲ್ಲಾ ಖಾಝಿಗಳಾದ ಶೈಖುನಾ ಫಝಲ್ ಕೊಯಮ್ಮ ತಂಙಳ್ ಕೂರ ಅವರು ಉದ್ಘಾಟಿಸಿ ಮಾತನಾಡಿ, ಬೆಳೆಯುತ್ತಿರುವ ನೆಲ್ಯಾಡಿಗೆ ಇಂತಹ ಸಂಸ್ಥೆಗಳು ಸಹಕಾರಿಯಾಗಲಿ ಎಂದು ಹೇಳಿ ಶುಭ ಕೋರಿದರು.
ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ನೆಲ್ಯಾಡಿ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ಹೊಸಮಜಲು ಜಲಾಲಿಯ ಮಸೀದಿಯ ಅಧ್ಯಕ್ಷ ಅಬ್ದುಲ್ ರಹಿಮಾನ್, ಖತೀಬರಾದ ಅಬ್ದುಲ್ ಮಜೀದ್ ಸಖಾಫಿ ಮಲ್ಲಿ, ಕೌಕ್ರಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಎಂ.ಕೆ ಇಬ್ರಾಹಿಂ ಹಾಗೂ ಇನ್ನಿತರ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು.
ಸಂಸ್ಥೆಯ ನಿರ್ದೇಶಕ ನಿಝಾರ್‌ರವರು ಮಾತನಾಡಿ, ಮೈಸ್ ಸಹಭಾಗಿತ್ವದಲ್ಲಿ ಕಂಪ್ಯೂಟರ್ ಶಿಕ್ಷಣ, ಇಂಟೀರಿಯರ್ ಡಿಸೈನ್ , ಫ್ಯಾಶನ್ ಡಿಸೈನ್, ಗ್ರಾಫಿಂಗ್ ಡಿಸೈನ್ ಕೋರ್ಸ್ ಗಳು ಲಭ್ಯವಿದೆ. ನವೀನ ಮಾದರಿಯ ಮನೆಗಳ ವಿನ್ಯಾಸ ಮತ್ತು ಇಂಟೀರಿಯರ್ ಕೆಲಸಗಳನ್ನು ನುರಿತ ಕಾರ್ಮಿಕರಿಂದ ಕ್ಲಪ್ತ ಸಮಯಕ್ಕೆ ಮಾಡಿ ಕೊಡಲಾಗುವುದು ಎಂದು ಹೇಳಿ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here