ಪುತ್ತೂರು: ಪುತ್ತೂರು ಹೊರವಲಯದಲ್ಲಿರುವ ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ ನಲ್ಲಿ ಜ.6 ರಂದು ಚರ್ಚ್ ವ್ಯಾಪ್ತಿಯ 44 ಮಂದಿ ವಿದ್ಯಾರ್ಥಿಗಳಿಗೆ ಕ್ರೈಸ್ತ ಪವಿತ್ರಸಭೆಯ ಪ್ರಕಾರ ಪವಿತ್ರ ದೃಢೀಕರಣ ಸಂಸ್ಕಾರವನ್ನು ನೀಡಲಾಯಿತು.
ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ.ವಂ.ಡಾ.ಪೀಟರ್ ಪಾವ್ಲ್ ಸಲ್ದಾನ್ಹಾರವರು ಪವಿತ್ರ ದಿವ್ಯ ಬಲಿಪೂಜೆಯನ್ನು ನೆರವೇರಿಸಿ, ಬೈಬಲಿನ ಮೇಲೆ ಸಂದೇಶ ನುಡಿದ ಬಳಿಕ 44 ಮಂದಿಗೆ ಪವಿತ್ರ ದೃಢೀಕರಣ ಸಂಸ್ಕಾರವನ್ನು ನೀಡಿದರು. ದಿವ್ಯ ಬಲಿಪೂಜೆ ಮೊದಲು ಮರೀಲು ಚರ್ಚ್ ಕ್ಯಾಂಪಸ್ಸಿಗೆ ಆಗಮಿಸಿದ ಬಿಷಪ್ ಪೀಟರ್ ಪಾವ್ಲ್ ಸಲ್ದಾನ್ಹಾರವರನ್ನು ಚರ್ಚ್ ಧರ್ಮಗುರು ವಂ|ಡೊನಾಲ್ಡ್ ನೀಲೇಶ್ ಕ್ರಾಸ್ತಾರವರು ಹೂಗುಚ್ಛ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೋನ್ ಮಸ್ಕರೇನ್ಹಸ್, ಕಾರ್ಯದರ್ಶ ಎಡ್ವಿನ್ ಡಿ’ಸೋಜ ಚರ್ಚ್ ಪಾಲನಾ ಸಮಿತಿ ಸದಸ್ಯರು, ವಾಳೆ ಗುರಿಕಾರರು, ಪ್ರತಿನಿಧಿಗಳು, ವೇದಿ ಸೇವಕರು, ವಿವಿಧ ಸಂಘಟನೆಯ ಸದಸ್ಯರು, ಕ್ರೈಸ್ತ ಭಕ್ತಾಧಿಗಳು ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು.