ನೆಲ್ಯಾಡಿ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ, ನೆಲ್ಯಾಡಿ-ಕೌಕ್ರಾಡಿ ಇದರ ಆಶ್ರಯದಲ್ಲಿ 46ನೇ ವರ್ಷದ ಮಕರ ಜ್ಯೋತಿ ಉತ್ಸವ ಹಾಗೂ ಭಜನಾ ಮಹೋತ್ಸವದ ಸಮಾರೋಪ ಸಮಾರಂಭ ಜ.15ರಂದು ಪ್ರಾಃತಕಾಲ 6.30 ರಿಂದ ಜ.16ರ ಪ್ರಾತಃಕಾಲ 6.30ರ ತನಕ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ ನೂಜಿನ್ನಾಯರ ಪೌರೋಹಿತ್ಯದಲ್ಲಿ ಜ.15ರಂದು ಪ್ರಾತಃಕಾಲ 6ಕ್ಕೆ ಶ್ರೀ ಅಯ್ಯಪ್ಪಸ್ವಾಮಿ ದೇವರಿಗೆ ಉಷಾ ಪೂಜೆ, ನಂತರ ಮಕರ ಸಂಕ್ರಾಂತಿಯ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 7ರಿಂದ ಶ್ರೀ ಮಹಾಗಣಪತಿ ಹೋಮ, ಸೀಯಾಳಾಭಿಷೇಕ, ತುಪ್ಪಾಭಿಷೇಕ, 9.30ರಿಂದ ಅಶ್ವಥ ಕಟ್ಟೆಯಲ್ಲಿ ಅಶ್ವತ್ಥ ಪೂಜೆ ಪ್ರಾರಂಭ, ಶ್ರೀ ಮಹಾರಂಗಪೂಜೆ, ಮಹಾಪೂಜೆ ಬಳಿಕ ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಯಿಂದ ವಿದುಷಿ ಸುರೇಖಾಹರೀಶ್‌ರವರ ಶಿಷ್ಯವೃಂದ ಉಕ್ಷಿಪ್ತ ನೃತ್ಯಕಲಾ ಶಾಲೆ ನೆಲ್ಯಾಡಿ-ಮಂಗಳೂರು ಇವರಿಂದ ಭರತನಾಟ್ಯ ನಡೆಯಲಿದೆ. ಸಂಜೆ ಮಕರ ಜ್ಯೋತಿಯ ವಿಶೇಷವಾಗಿ 6.30ಕ್ಕೆ ನೀಲಾಂಜನ ದೀಪದರ್ಶನ ಮೆರವಣಿಗೆ, ದೀಪಾರಾಧನೆ, ಪುಷ್ಪಾಭಿಷೇಕ, ರಾತ್ರಿ 12ಕ್ಕೆ ಮಹಾಪೂಜೆ ನಡೆಯಲಿದೆ. ಜ.16ರಂದು ಪ್ರಾತ:ಕಾಲ 5.30ಕ್ಕೆ ಭಜನಾ ಮಂಗಳೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಸಭಾ ಕಾರ್ಯಕ್ರಮ:
ಜ.15ರಂದು ರಾತ್ರಿ 8 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಡಾ.ಸದಾನಂದ ಕುಂದರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸರಕಾರ ತುಳು ಸಾಹಿತ್ಯ ಅಕಾಡೆಮಿ ನಿಕಟಪೂರ್ವಾಧ್ಯಕ್ಷ ದಯಾನಂದ ಕತ್ತಲ್‌ಸರ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಸುಬ್ರಹ್ಮಣ್ಯ ಅನುಗ್ರಹ ಕನ್‌ಸ್ಟ್ರಕ್ಷನ್‌ನ ಡಾ. ರವಿ ಕಕ್ಕೆಪದವು ಭಾಗವಹಿಸಲಿದ್ದಾರೆ.
ತುಳು ಯಕ್ಷಗಾನ:
ರಾತ್ರಿ ಗಂಟೆ 9.30ರಿಂದ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ ಇವರಿಂದ ರವಿಕುಮಾರ್ ಸುರತ್ಕಲ್ ವಿರಚಿತ ತುಳು ಯಕ್ಷಗಾನ ‘ ನಾಗರ ಪಂಚಮಿ ‘ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.