ಜನರನ್ನು ರಾಜರನ್ನಾಗಿ ಮಾಡುವ, ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಜನಸೇವಕರನ್ನಾಗಿ ಮಾಡುವ, ಪ್ರಜಾಪ್ರಭುತ್ವದ ಘೋಷಣೆಯನ್ನು ಮೊಳಗಿಸುತ್ತಾ ಪ್ರಜಾಪ್ರಭುತ್ವದ ದಿನವನ್ನು (ಜ.26) ಮನೆ ಮನೆಯಲ್ಲಿ ಆಚರಿಸೋಣ, ಸಂಭ್ರಮಿಸೋಣ

0

ಜನರಿಗೆ ಮತದ ಹಕ್ಕನ್ನು ಒದಗಿಸಿ ಜನರಿಂದ, ಜನರೇ, ಜನರಿಗಾಗಿ ಆಡಳಿತ ಮಾಡುವ, ದೇಶದ ಎಲ್ಲರಿಗೂ ಸಮಾನ ಅವಕಾಶ ನೀಡುವ ಸಂವಿಧಾನವನ್ನು ನೀಡಿದ ದಿನ ಜನವರಿ 26. ಜಗತ್ತಿನ ವಿವಿಧ ದೇಶಗಳನ್ನು ನೋಡಿದರೆ ರಾಜರುಗಳ ಆಡಳಿತದ, ಸರ್ವಾಧಿಕಾರಿಗಳ, ಕಮ್ಯುನಿಸ್ಟ್, ಮಿಲಿಟರಿ, ಇಸ್ಲಾಂ ಆಡಳಿತದ ವ್ಯವಸ್ಥೆಯನ್ನು ನೋಡುತ್ತೇವೆ. ಪ್ರಜಾಪ್ರಭುತ್ವದ ವ್ಯವಸ್ಥೆ ಮಾತ್ರ ಜನರಿಗೆ ಆಡಳಿತದಲ್ಲಿ ಪಾಲಿನ, ಭಾಗವಹಿಸುವಿಕೆಯ, ಸಮಾನತೆಯ ಅವಕಾಶ ನೀಡುತ್ತದೆ. ಭಾರತದ ಪ್ರಜಾಪ್ರಭುತ್ವಕ್ಕೆ ಅದರ ಶ್ರೇಷ್ಠ ಸಂವಿಧಾನದ ಕಾರಣಕ್ಕಾಗಿ ವಿಶೇಷ ಮಾನ್ಯತೆ ಇದೆ. ನಮ್ಮಲ್ಲಿ ಪ್ರಜಾಪ್ರಭುತ್ವದ, ಸಂವಿಧಾನದ ಆಶಯವನ್ನು ಉಳಿಸಿಕೊಳ್ಳಬೇಕಾದರೆ ಜನರು ಜಾಗೃತರಾಗಬೇಕು, ಅಂದರೆ ಜನರು ನಿಜ ಅರ್ಥದಲ್ಲಿ ರಾಜರುಗಳಾಗಬೇಕು. ಅಧಿಕಾರಿಗಳು, ಜನಪ್ರತಿನಿಧಿಗಳು ನಿಜ ಅರ್ಥದಲ್ಲಿ ಪ್ರಜಾ ಸೇವಕರಾಗಬೇಕು.
ಆ ಜನಜಾಗೃತಿಯನ್ನು ಉಂಟುಮಾಡಲು ಸುದ್ದಿ ಜನಾಂದೋಲನ ಮಾಡುತ್ತಿದೆ. ಅದಕ್ಕಾಗಿ ಜನರ ಹಕ್ಕುಗಳ, ಸ್ವಾತಂತ್ರ್ಯದ, ಲಂಚ ಭ್ರಷ್ಟಾಚಾರದ ವಿರುದ್ಧದ ಘೋಷಣೆಯ ಫಲಕವನ್ನು ಪ್ರಚಾರ ಮಾಡಿದೆ. ಪ್ರಧಾನಿ ಮೋದಿಯವರು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯನ್ನು ದೀಪ ಹಚ್ಚಿ ಸಂಭ್ರಮಿಸಲು ಕರೆ ಕೊಟ್ಟಿದ್ದಾರೆ. ಅದೇ ರೀತಿ ಮಾತ್ರವಲ್ಲ ಅದಕ್ಕಿಂತಲೂ ವಿಜೃಂಭಣೆಯಿಂದ ಪ್ರಜಾಪ್ರಭುತ್ವದ ದಿನ ಜ.26ರನ್ನು ಮನೆ ಮನೆಯಲ್ಲಿ, ಕಚೇರಿ, ಮಳಿಗೆಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಆಚರಿಸುವಂತಾಗಲಿ ಎಂದು ಹಾರೈಸುತ್ತಿದ್ದೇನೆ.

LEAVE A REPLY

Please enter your comment!
Please enter your name here