ವಿದ್ಯಾರ್ಥಿಯಿಂದ ಕಸ ಹೆಕ್ಕಿಸಿದ ಪ್ರಕರಣ – ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗೆ ಧೈರ್ಯ ತುಂಬಿದ ಮಾಜಿ ಶಾಸಕರು

0

ಉಪ್ಪಿನಂಗಡಿ: ಶಾಲಾ ಬಾಲಕನೋರ್ವ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಕಾಲು ದಾರಿಯಲ್ಲಿದ್ದ ಕಸವನ್ನು ಖಾಸಗಿ ವ್ಯಕ್ತಿಯೋರ್ವರು ಹೆಕ್ಕಿಸಿದ ಪ್ರಕರಣಕ್ಕೆ ಸಂಬಂಧಿಸಿ ಜ.10ರಂದು ಮಾಜಿ ಶಾಸಕ ಸಂಜೀವ ಮಠಂದೂರು ಅವರು ಶಾಲೆಗೆ ಭೇಟಿ ನೀಡಿ ಈ ಬಗ್ಗೆ ವಿಚಾರಿಸಿದಲ್ಲದೆ, ವಿದ್ಯಾರ್ಥಿಗೆ ಧೈರ್ಯ ತುಂಬಿದರು.
ಬಿಳಿಯೂರು ಸರಕಾರಿ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿ ಕಾರ್ತಿಕ್ ಎಂಬಾತನಿಂದ ಶಾಲೆಗೆ ಹೋಗುವ ದಾರಿ ಮಧ್ಯದ ಕಾಲು ದಾರಿಯಲ್ಲಿ ಕೋಡ್ಲೆ ನಿವಾಸಿ ಗಂಗಾವತಿ ಭಟ್ ಎಂಬವರು ಈ ದಾರಿಯಲ್ಲಿ ನಡೆದುಕೊಂಡು ಹೋಗಬೇಕಾದರೆ ಪರಿಸರದಲ್ಲಿನ ತ್ಯಾಜ್ಯವನ್ನು ತೆಗೆದು ಬಳಿಕವೇ ದಾರಿಯನ್ನು ಬಳಸಬೇಕೆಂದು ತಾಕೀತು ಮಾಡಿದ್ದಾರೆಂದು ಈತನ ತಂದೆ ವಾಸಪ್ಪ ನಾಯ್ಕ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಇದನ್ನು ತಿಳಿದ ಮಾಜಿ ಶಾಸಕರು ಶಾಲೆಗೆ ದಿಢೀರ್ ಶಾಲೆಗೆ ಭೇಟಿ ನೀಡಿ ವಾಸ್ತವಾಂಶವನ್ನು ಅರಿತುಕೊಂಡರಲ್ಲದೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಸಂಪರ್ಕಿಸಿ ಕ್ರಮಕ್ಕೆ ಆಗ್ರಹಿಸಿದರು.
ಶಾಲೆಗೆ ಬರುವ ಯಾವುದೇ ಮಕ್ಕಳಿಗೆ ಯಾರೂ ಹಿಂಸೆ ನೀಡಿದರೂ ಹೆತ್ತವರೊಂದಿಗೆ ಸೇರಿ ಕಾನೂನು ಹೋರಾಟ ಹಾಗೂ ಅಂತಹ ಕೃತ್ಯವನ್ನು ಪ್ರತಿಭಟಿಸುವುದಾಗಿ ತಿಳಿಸಿದ ಅವರು ಘಟನೆಯ ಬಗ್ಗೆ ಶಿಕ್ಷಣ ಇಲಾಖೆಗೆ ಪತ್ರ ಬರೆಯುವಂತೆ ಮುಖ್ಯ ಶಿಕ್ಷಕರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ನವೀನ್ ಪದಬರಿ, ಕೇಶವ ಸುಣ್ಣಾನ, ಸ್ಥಳಿಯರಾದ ಗಣೇಶ ರೈ, ಮಹೇಶ ಪಡಿವಾಳ್, ಕಬೀರ್, ಗೋಪಾಲ ಸಪಲ್ಯ, ಪುಷ್ಪ, ರಾಧಾ, ಸುರೇಶ, ಸತೀಶ, ಜಯಂತ, ಮೋನಪ್ಪ ಗೌಡ, ಮ್ಯಾಕ್ಸಿಂ ಲೊಬೊ, ಶೀನಪ್ಪ ಗೌಡ, ಶಾಲಾ ಮುಖ್ಯ ಶಿಕ್ಷಕಿ ಶೀಲಾ ಡಯಾನ ಉಪಸ್ಥಿತರಿದ್ದರು.

ಪೋಟೋ: ೧೦ಯುಪಿಪಿಪೆರ್ನೆ

LEAVE A REPLY

Please enter your comment!
Please enter your name here