ಜ.12-14: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾರ್ತ್ರೋತ್ಸವ

0

ಬಡಗನ್ನೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾರ್ತ್ರೋತ್ಸವವು ಜ.12ರಿಂದ 14ವರೆಗೆ ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಕುಂಟಾರು ಶ್ರೀ ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಕುಂಟಾರು ಶ್ರೀ ರವೀಶ ತಂತ್ರಿಯವರ ನೇತೃತ್ವದಲ್ಲಿ ಜರಗಲಿರುವುದು.
ಜ.12ರಂದು ಬಲಿವಾಡು ಶೇಖರಣೆ, ಹಸಿರುವಾಣಿ ಹೊರೆಕಾಣಿಕೆ ಸಂಗ್ರಹಿಸುವುದು, ಸಂಜೆ ಗಂ 6ರಿಂದ ಉಗ್ರಾಣ ತುಂಬಿಸುವುದು. 8ರಿಂದ ಮಹಾಪೂಜೆ, ಮಹಾಗಣಪತಿ ಪೂಜೆ, ಅತ್ತಾಳಪೂಜೆ, ಪ್ರಾರ್ಥನೆ, ಪ್ರಸಾದ ವಿತರಣೆ, ಅನ್ನ ಪ್ರಸಾದ ವಿತರಣೆ ನಡೆಯಲಿದೆ.
13ರಂದು ಬೆಳಗ್ಗೆ ಗಂ 8ರಿಂದ  ಮಹಾಗಣಪತಿ ಹವನ, ಶ್ರೀ ಕ್ಷೇತ್ರದ ಮೂಲಸ್ಥಾನದಿಂದ ಪವಿತ್ರ ತೀರ್ಥ ತರುವುದು, ನವಕಾಭಿಷೇಕ, 8ರಿಂದ ,10 ತನಕ ಭಜನಾ ಕಾರ್ಯಕ್ರಮ ನಡೆಯಲಿದ್ದು, 11.30 ರಿಂದ ತುಲಾಭಾರ ಸೇವೆ, ಮಹಾಪೂಜೆ, ಬಲಿಹೊರಡುವುದು, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು, ಸಂಜೆ ಗಂ.6ರಿಂದ ನೀಲೇಶ್ವರ ಗಂಗಾಧರ ಮರಾರ್ ಮತ್ತು ಬಳಗದವರಿಂದ ತಾಯಂಬಕ ಸೇವೆ, ರಾತ್ರಿ 7ರಿಂದ ಶ್ರೀ ದೇವರ ಉತ್ಸವ ಬಲಿ, ನೃತ್ಯ ಬಲಿ, ಕಟ್ಟೆ ಪೂಜೆ, ಸುಡುಮದ್ದು ಪ್ರದರ್ಶನ, ಶ್ರೀ ಭೂತ ಬಲಿ, ಅನ್ನ ಸಂತರ್ಪಣೆ ನಡೆಯಲಿದೆ.
ಜ.14ರಂದು  ಬೆಳಗ್ಗೆ ಗಂ 9 ರಿಂದ ಶ್ರೀ ದೇವರ ಬಲಿ ಹೊರಡುವುದು, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಂತಾಕ್ಷತೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಹಾಗೂ ರಾತ್ರಿ  ಗಂಟೆ 8ರಿಂದ ಶ್ರೀ ದೇವರಿಗೆ ರಂಗ ಪೂಜೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು:-
ಜ.12 ರಂದು ರಾತ್ರಿ ಗಂ 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮವನ್ನು  ರಾಮ್ ಭಟ್  ಬೀರಮೂಲೆ, ನಾರಾಯಣ ಭಟ್ ಪಟ್ಟೆ, ಹಾಗೂ ಕೃಷ್ಣ ರೈ ಕುದ್ದಾಡಿ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟನೆ ಮಾಡಲಿದ್ದು, ಬಳಿಕ ಶ್ರೀ ಕೃಷ್ಣ ವಿದ್ಯಾಸಂಸ್ಥೆ ಹಾಗೂ ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ , 9 ರಿಂದ ಶ್ರೀ ಕೃಷ್ಣ ಯುವಕ ಮಂಡಲ ಪಟ್ಟೆ ಹಾಗೂ ಭಕ್ತವೃಂದ ಪ್ರಾಯೋಜಕತ್ವದಲ್ಲಿ ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲ ಇಲ್ಲಿನ ಬಾಲಕಲಾವಿದರಿಂದ ಸುದರ್ಶನ ವಿಜಯ ಪೌರಾಣಿಕ ಯಕ್ಷಗಾನ ಬಯಲಾಟ ನಡೆಯಲಿದೆ.
13ರಂದು ಬೆಳಗ್ಗೆ ಗಂ10ರಿಂದ  ಮಧುಮಿತಾ ಪ್ರವೀಣ್ ಕುಮಾರ್ ಪಡುಮಲೆ ಇವರಿಂದ ವೀಣಾವಾದನ, 14ರಂದು ಸಂಜೆ ಗಂ.6ರಿಂದ ಭಕ್ತವೃಂದ ಮತ್ತು ಕರಸೇವಕರ ಪ್ರಾಯೋಜಕತ್ವದಲ್ಲಿ ನುರಿತ ಕಲಾವಿದರ ಕೂಡುವಿಕೆಯಿಂದ “ಮಕರಾಕ್ಷ ಪುರುಷಾಮೃಗ- ಮೈಂದದಿವಿದ,” ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಊರ ಮತ್ತು ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿ, ತನು-ಮನ-ಧನಗಳಿಂದ ಸಹಕರಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here