ಮಂಗಳೂರು: ಫ್ಲಾಟಿಂಗ್ ಮಾಡಲು ಅರ್ಜಿ ಸಲ್ಲಿಸಿ ಅನೇಕ ವರ್ಷಗಳಿಂದ ಫಲಾನುಭವಿಗಳು ಕಾಯುತ್ತಿದ್ದಾರೆ. ಖಾಸಗಿ ಸರ್ವೆಯರ್ ಮೂಲಕ ಸರ್ವೆ ಮಾಡಿಸಿ ತಕ್ಷಣವೇ ಬಾಕಿ ಇರುವ ಎಲ್ಲಾ ಫ್ಲಾಟಿಂಗ್ ಅರ್ಜಿಗಳನ್ನು ವಿಕೇವಾರಿ ಮಾಡಬೇಕು ಎಂದು ಜಿಲ್ಲಾ ತ್ರೈ ಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕರು ಆಗ್ರಹಿಸಿದ್ದಾರೆ.
ಇಲಾಖೆಯಲ್ಲಿ ಸರ್ವೆಯರ್ ಕೊರತೆ ಇದ್ದರೆ ಖಾಸಗಿಯವರ ಮೂಲಕ ಅಳತೆ ಮಾಡಿಸಿ ಅದಕ್ಕೆ ಸರಕಾರಿ ಸರ್ವೆಯರ್ ಪರಿಶೀಲನೆ ಮಾಡಲಿ. ಸಿಬ್ಬಂದಿಗಳ ಕೊರತೆಯ ಕಾರಣ ಹೇಳಿ ಅರ್ಜಿಗಳನ್ನು ಪೆಂಡಿಂಗ್ ಇಡಬಾರದು. ತಕ್ಷಣ ಎಲ್ಲಾ ಅರ್ಜಿಗಳನ್ನ ವಿಲೇವಾರಿ ಮಾಡುವ ಮೂಲಕ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ದಿನೇಶ್ ಗುಂಡೂರಾವ್ ರವರು ಖಾಸಗಿ ಸರ್ವೆಯರ್ ಮೂಲಕ ಸರ್ವೆ ಮಾಡಿಸುವ ವಿಚಾರ ಒಳ್ಳೆಯದೆ ಆಗಿದೆ ಇದನ್ನು ಕಂದಾಯ ಇಲಾಖೆಯ ಗಮನಕ್ಕೆ ತರುವ ಮೂಲಕ ಫ್ಲಾಟಿಂಗ್ ಸಮಸ್ಯೆ ಇತ್ಯರ್ಥ ಮಾಡುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.