ಹಳೆಯ ಡ್ರೈವರ್ ಆದರೂ ಗಾಡಿ ಅಕ್ಸಿಡೆಂಟ್ ಆಗುವುದಿಲ್ಲವೇ? – ಶಾಸಕ ವೇದವ್ಯಾಸ ಕಾಮತ್‌ಗೆ ಎದುರೇಟು ನೀಡಿದ ಪುತ್ತೂರು ಶಾಸಕರು

0


ಪುತ್ತೂರು: ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಯಂತ್ರಗಳ ಕೊರತೆಯಿದ್ದು, ರೋಗಿಗಳು ಪರದಾಡುವ ಸ್ಥಿತಿ ಇದೆ ಎಂದು ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ಜಿಲ್ಲಾ ಕೆಡಿಸಿ ಸಭೆಯಲ್ಲಿ ಆರೋಪ ಮಾಡಿದ್ದು, ಕೆಲಕಾಲ ಶಾಸಕ ಅಶೋಕ್‌ ರೈ ಮತ್ತು ವೇದವ್ಯಾಸ್‌ ಕಾಮತ್‌ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಕಾಮತ್‌ ಹೇಳಿಕೆಗೆ ಪ್ರತ್ಯುತ್ತರ ನೀಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸುಳ್ಳು ಹೇಳಬೇಡಿ, ಜಿಲ್ಲೆಯ ಯಾವುದೇ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರಗಳ ಕೊರತೆಯಿಲ್ಲ, ಕೊರತೆಯಿರುವಲ್ಲಿಗೆ ಹೊಸ ಯಂತ್ರಗಳು ಬಂದಿದೆ, ಸುಮ್ಮನೆ ಹೇಳಬೇಡಿ, ನಿಮ್ಮ ಸರಕಾರ ಇರುವಾಗ ಯಂತ್ರಗಳ ಕೊರತೆ ಇತ್ತು. ಅದೇ ಕಾರಣಕ್ಕೆ ಏಜೆನ್ಸಿಯನ್ನು ಬದಲಾಯಿಸಿ ಹೊಸ ವ್ಯವಸ್ಥೆಯನ್ನು ಮಾಡಿದ್ದೇವೆ. ಕೊರತೆ ಇದ್ದದ್ದು ನಿಮ್ಮ ಸರಕಾರ ಇರುವಾಗ ನಮ್ಮ ಸರಕಾರದಲ್ಲಿ ಎಲ್ಲವೂ ಸರಿಯಾಗುತ್ತಿದೆ ಎಂದು ಹೇಳಿದರು.

ಇದಕ್ಕೆ ಪ್ರತ್ಯುತ್ತರ ನೀಡಿದ ಶಾಸಕ ವೇದವ್ಯಾಸ ಕಾಮತ್ ಅಶೋಕ್ ರೈ ಏಳು ತಿಂಗಳ ಹಿಂದೆ ಶಾಸಕರಾಗಿದ್ದು ಅವರಿಗೆ ಅನುಭವದ ಕೊರತೆ ಇದೆ. ನಾನು ಕಳೆದ 5 ವರ್ಷಗಳಿಂದ ಶಾಸಕನಾಗಿ ಮಾಹಿತಿ ಆಧಾರದಲ್ಲಿ ಹೇಳುತ್ತಿದ್ದೇನೆ ಎಂದು ಹೇಳಿದರು. ಇದರಿಂದ ಆಕ್ರೋಶಗೊಂಡ ಶಾಸಕ ಅಶೋಕ್ ರೈ ನೀವು 5 ವರ್ಷ ಶಾಸಕನಾಗಿ ಕೆಲಸ ಮಾಡಿರಬಹುದು. ಆದರೆ ಯಾರೂ ಅದರಲ್ಲಿ ಪಿಎಚ್‌ಡಿ ಮಾಡದವರಿಲ್ಲ. ಹಳೆಯ ಡ್ರೈವರ್ ಆದರೂ ಗಾಡಿ ಅಕ್ಸಿಡೆಂಟ್ ಆಗುವುದಿಲ್ಲವೇ ಎಂದು ಮರುಪ್ರಶ್ನಿಸಿದರು. ನಾನು ಶಾಸಕನಾಗಿ ಏಳು ತಿಂಗಳು ಆಗಿರಬಹುದು ಆದರೆ ಬಡವರ ಕಷ್ಟಗಳು, ನೋವುಗಳನ್ನು ಚೆನ್ನಾಗಿ ಅರಿತುಕೊಂಡೇ ಮಾತನಾಡಿದ್ದೇನೆ ಎಂದು ಹೇಳಿದರು. ಈ ವೇಳೆ ಇಬ್ಬರ ನಡುವೆ ಕೆಲವು ನಿಮಿಷಗಳ ಕಾಲ ಮಾತಿನ ಚಕಮಕಿ ನಡೆಯಿತು.

LEAVE A REPLY

Please enter your comment!
Please enter your name here