ಕಡಬದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಚ್ಚತಾ ಕಾರ್ಯಕ್ರಮ

0

ಕಡಬ: ಧರ್ಮಸ್ಥಳ ಶ್ರೀ ಶೌರ್ಯ ಬಳಗ ಕಡಬ ಘಟಕದಿಂದ ಕಡಬದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಚ್ಚತಾ ಕಾರ್ಯಕ್ರಮ ಜ.13ರಂದು ನಡೆಯಿತು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಚಿತ್ರ ರಾವ್ ರವರು ಶೌರ್ಯ ಬಳಗದ ಕೆಲಸ ಕಾರ್ಯಗಳ ಕುರಿತು ಅವಲೋಕಿಸಿ ಶ್ಲಾಘನೆ ವ್ಶಕ್ತಪಡಿಸಿದರು.


ಕಡಬ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಯವರು ಶೌರ್ಯ ಬಳಗವು ಕಳೆದ ಎರಡು ವರ್ಷದಿಂದ ಕಡಬ ವಲಯದಲ್ಲಿ ನಡೆಸಿರುವ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳು ಹಾಗೂ ಮುಂದಿನ ತಿಂಗಳಿನಲ್ಲಿ ನಡೆಸಬಹುದಾದ ಶ್ರಮದಾನ ಕಾರ್ಯಕ್ರಮಗಳ ಕುರಿತಾಗಿ ಚರ್ಚಿಸಿ ಮಾರ್ಗದರ್ಶನ ನೀಡಿದರು.


ಕಡಬ ಘಟಕ ಪ್ರತಿನಿಧಿ ಪ್ರಶಾಂತ್ ಎನ್ . ಎಸ್ ವಂದಿಸಿ, ಘಟಕ ಸಂಯೋಜಕಿ ನಳಿನಿ ನಿರೂಪಿಸಿ, ಸ್ವಾಗತಿಸಿದರು.ಶೌರ್ಯ ಶ್ರೀ ವಿಪತ್ತು ನಿರ್ವಹಣಾ ಬಳಗ ಕಡಬ ವಲಯದ ಇಪ್ಪತ್ತು ಸ್ವಯಂ ಸೇವಕರು ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here