ಪುತ್ತೂರು: ಯಾಮೊಟೋ ಶೊಟೋಕಾನ್ ಕರಾಟೆ ಎಸೋಸಿಯೇಶನ್ ಟ್ರಸ್ಟ್ (ರಿ) ಮಂಗಳೂರು ಹಾಗೂ ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ಬಂಟ್ವಾಳ, ರೋಟರಿ ಕ್ಲಬ್ ಸಿದ್ಧಕಟ್ಟೆ, ಫಲ್ಗುಣಿ ರೋಟರಿ ಕ್ಲಬ್, ಬಿ.ಸಿ.ರೋಡು ಸಿಟಿ ಆಯೋಜಿಸಿದ ಎರಡನೇ ರಾಜ್ಯ ಮಟ್ಟದ ಆಹ್ವಾನಿತ ಕರಾಟೆ ಚಾಂಪಿಯನ್ ಶಿಪ್ 2024 ಜ.14ರಂದು ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಅಕ್ಷಿತ್.ಕೆ ಒಂದು ಚಿನ್ನ ಹಾಗೂ ಒಂದು ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ. ಇವರು ಕಡಬ ತಾಲೂಕಿನ ಎಡಮಂಗಲ ಕೂಟಾಜೆಯ ಕುಶಾಲಪ್ಪ ಹಾಗೂ ಮಮತಾ ದಂಪತಿ ಪುತ್ರ.
